ಬ್ರಿಟನ್‌ನಲ್ಲಿ ಹೆಚ್ಚಿದ ಕರೋನ ಸೋಂಕು - ಪ್ರಧಾನಿ ಎಚ್ಚರಿಕೆ
ಲಂಡನ್, ಅಕ್ಟೋಬರ್ 5: ಬ್ರಿಟನ್‌ನಲ್ಲಿ ಇನ್ನೂ ಹೊಸದಾಗಿ 2 2,961 ಜನರಿಗೆ ಕರೋನ ಸೊಂಕು ತಗುಲಿದ್ದು ಎರಡನೇ ಸುತ್ತಿನಲ್ಲಿ ಈವರೆಗೆ ಸೋಂಕಿತರ ಸಂಖ್ಯೆ 502,978 ಕ್ಕೆ ತಲುಪಿದೆ ಎಂದು ಸೋಮವಾರ ಬಿಡುಗಡೆ ಮಾಡಿದ ಅಧಿಕೃತ ಅಂಕಿ ಅಂಶಗಳು ತಿಳಿಸಿವೆ.
ದೇಶದಲ್ಲಿ ಸೋಂಕು ಪ್ರಕರಣಗಳಲ್ಲಿ ತೀವ್ರ ಏರಿಕೆ ಕಾಣುತ್ತಿರುವುದರಿಂದ ಕ್ರಿಸ್‌ಮಸ್ ಸಮಯದಲ್ಲಿ ಇದು ಮತ್ತಷ್ಟು ಹೆಚ್ಚಾಗಬಹುದು ಎಂದು ಪ್ರಧಾನಿ ಬೋರಿಸ್ ಜಾನ್ಸನ್ ಎಚ್ಚರಿಸಿರುವುದಾಗಿ ಸ್ಥಳೀಯ ಮಾಧ್ಯಮ ವರದಿ ಮಾಡಿವೆ.
"ಇದು ನಮ್ಮೆಲ್ಲರಿಗೂ ಅತ್ಯಂತ ಕಠಿಣ ಚಳಿಗಾಲವಾಗಬಹುದು - ನಾವು ಆ ಸತ್ಯವನ್ನು ಎದುರಿಸಬೇಕಾಗಿದೆ ಎಂದೂ ಜಾನ್ಸನ್ ಹೇಳಿದ್ದಾರೆ.