ವಾಕಿಂಗ್ ಗೆ ತೆರಳಿದ್ದ ಬಾಲಕ ಚಿರತೆಗೆ ಬಲಿ
ನಾಗಪುರ, ಅಕ್ಟೋಬರ್ 01: ವಾಕಿಂಗ್ ಗೆಂದು ತೆರಳಿದ್ದ ಬಾಲಕ ಚಿರತೆಯ ದಾಳಿಗೆ ಬಲಿಯಾಗಿದ್ದಾನೆ.
ಮಹಾರಾಷ್ಟ್ರದ ಚಂದ್ರಪುರ ಜಿಲ್ಲೆಯಲ್ಲಿ ಗುರುವಾರ ಬೆಳಿಗ್ಗೆ ಈ ಘಟನೆ ನಡೆದಿದ್ದು, 11 ವರ್ಷದ ಬಾಲಕ ಸಾವನ್ನಪ್ಪಿದ್ದಾನೆ ಎಂದು ಬ್ರಹ್ಮಪುರಿ ಪೊಲೀಸ್ ಠಾಣೆಯ ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಬಲಿಪಶುವನ್ನು ಮಹಾರಾಷ್ಟ್ರದ ಚಂದ್ರಪುರ ಜಿಲ್ಲೆಯ ಬ್ರಹ್ಮಪುರಿ ತಹಸಿಲ್‌ನ ವಂದ್ರ ಗ್ರಾಮದ ನಿವಾಸಿ ನೈತಿಕ್ ಸಂತೋಷ್ ಕುಥೆ ಎಂದು ಗುರುತಿಸಲಾಗಿದೆ.
ನಸುಕಿನ 5.30ರ ಸಮಯದಲ್ಲಿ ಬಾಲಕ, ಕೆಲವು ಸ್ನೇಹಿತರೊಂದಿಗೆ ವಾಕ್ ಮಾಡಲು ಹೊರಟಿದ್ದಾಗ. ಪೊದೆಗಳಲ್ಲಿ ಅಡಗಿದ್ದ ಚಿರತೆ ದಾಳಿ ಮಾಡಿ ಎಳೆದಾಡಿದೆ.
ಅವನ ಸ್ನೇಹಿತರು ಮತ್ತು ದಾರಿಹೋಕರು ಕೂಗಾಡಿದಾಗ, ಚಿರತೆ ಹುಡುಗನನ್ನು ಬಿಟ್ಟು ಕಾಡಿಗೆ ಓಡಿಹೋಯಿತು.
ಬಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ, ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಅಧಿಕಾರಿ ಹೇಳಿದ್ದಾರೆ.