ಕನ್ನಡ ಚಳುವಳಿಯ ನೇತಾರ, ಅಪೂರ್ವ ಕನ್ನಡ ಮೂರ್ತಿ ಡಾ.ಎಂ. ಚಿದಾನಂದ ಮೂರ್ತಿ: ಒಂದು ನೆನಪು
The leader of the Kannada movement, Apoorva Kannada Murthy Dr. M. Chidananda Murthy: A memory
ಲೋಕದರ್ಶನ ವರದಿ
ಧಾರವಾಡ 15: ಕನ್ನಡ ಭಾಷೆ, ಸಂಸ್ಕೃತಿಗಳ ಅಭ್ಯುದಯಕ್ಕಾಗಿ ಡಾ. ಎಂ. ಚಿದಾನಂದ ಮೂರ್ತಿ ಮಾಡಿದ ತ್ಯಾಗ ಅಪಾರವಾದದ್ದು. ಯಾರೂ ಅವರ ತ್ಯಾಗವನ್ನು ಸ್ಮರಿಸದಿರುವುದು ಅವರ ಸೇವೆಗೆ ಮಾಡುತ್ತಿರುವ ಅಪಮಾನವಾಗಿದೆ ಎಂದು ಹಿರೇಮಲ್ಲೂರು ಈಶ್ವರನ್ ಕಾಲೇಜಿನ ಪ್ರಾಂಶುಪಾಲ ಪ್ರೊ. ಶಶಿಧರ ತೋಡಕರ ಹೇಳಿದರು.
ಅವರು ಕನ್ನಡ ಚಳುವಳಿಯ ನೇತಾರ, ಅಪೂರ್ವ ಕನ್ನಡ ಮೂರ್ತಿ ಡಾಽಽ ಚಿದಾನಂದ ಮೂರ್ತಿಯವರ ಜನ್ಮ ದಿನದಂಗವಾಗಿ ಧಾರವಾಡದ ಸಾಧನಕೇರಿಯ ಚೈತ್ರದ ಸಭಾಂಗಣದಲ್ಲಿ ದಿ: 14 ರಂದು ಅನ್ವೇಷಣಕೂಟದ ಆಶ್ರಯದಲ್ಲಿ ಹಮ್ಮಿಕೊಳ್ಳಲಾದ ವಿಶೇಷ ಉಪನ್ಯಾಸ ಕಾರ್ಯಕ್ರದ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿ ಡಾ. ಎಂ. ಚಿದಾನಂದ ಮೂರ್ತಿಯವರು ಕನ್ನಡ, ಕನ್ನಡಿಗ, ಕರ್ನಾಟಕದ ಅಭ್ಯುದಯಕ್ಕಾಗಿ ಕರ್ನಾಟಕದಲ್ಲಿ ಹುಟ್ಟು ಹಾಕಿದ ಚಳುವಳಿಯ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಅವರು ಮುಂದುವರಿದು ಮಾತನಾಡುತ್ತ ಡಾ. ಎಂ. ಚಿದಾನಂದ ಮೂರ್ತಿ ಶುದ್ಧ ಹೃದಯದ, ಪ್ರಾಮಾಣಿಕ ಮನಸ್ಸಿನ ಅವರು ಮಗುವಿನ ಮುಗ್ಧತೆ ಹೊಂದಿದ್ದರು. ಅವರೊಬ್ಬ ಸರ್ವಶ್ರೇಷ್ಠ ಸಂಶೋಧಕರಾಗಿದ್ದು ಪ್ರೊ. ತಿ.ನಂ.ಶ್ರೀ. ಮಾರ್ಗದರ್ಶನದಲ್ಲಿ ಅವರು ರಚಿಸಿದ “ ಕನ್ನಡ ಶಾಸನಗಳ ಸಾಂಸ್ಕೃತಿಕ ಅಧ್ಯಯನ ” ಎಂಬ ಸಂಶೋಧನಾ ಪ್ರಬಂಧ ಕನ್ನಡ ಸಾಹಿತ್ಯ ಲೋಕದ ಮಹತ್ವದ ಗ್ರಂಥವಾಗಿ ಇಂದಿಗೂ ತನ್ನ ಪ್ರಸ್ತುತತೆಯನ್ನು ಉಳಿಸಿಕೊಂಡಿದೆ.
ಸಾಹಿತ್ಯ, ಸಂಶೋಧನೆ, ಜಾನಪದ, ವ್ಯಾಕರಣ, ಛಂದಸ್ಸು, ಭಾಷಾಶಾಸ್ತ್ರ ಮುಂತಾದ ಕ್ಷೇತ್ರಗಳಲ್ಲಿ 40ಕ್ಕೂ ಹೆಚ್ಚು ಪ್ರಬಂಧಗಳನ್ನು ನೀಡಿದ ಚಿದಾನಂದ ಮೂರ್ತಿ ಬೆಂಗಳೂರಿನಲ್ಲಿ ನಶಿಸುತ್ತಿರುವ ಕನ್ನಡ ಭಾಷೆ ಮತ್ತು ಕನ್ನಡಿಗರ ಪ್ರಾತಿನಿಧ್ಯದ ಕೊರತೆಯನ್ನು ಕಂಡು ಕನ್ನಡ ಶಕ್ತಿ ಕೇಂದ್ರವನ್ನು ಹುಟ್ಟು ಹಾಕಿ ಅದರ ಮೂಲಕ ಅನೇಕ ಚಳುವಳಿಗಳನ್ನು ಹಮ್ಮಿಕೊಂಡು ಯಶಸ್ವಿಯಾದರು ಎಂದು ಈ ಪುಟ್ಟ ಕನ್ನಡ ಮೂರ್ತಿ ಸಾಧಿಸಿದ ಅಪಾರ ಸಾಧನೆಗಳನ್ನು ಸ್ಮರಿಸಿಕೊಂಡರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹಿರಿಯ ವಿದ್ವಾಂಸ ಪ್ರೊ. ಶ್ರೀರಾಮ ಭಟ್ಟರು ಕನ್ನಡದ ಅಸ್ಮಿತೆಗೋಸ್ಕರ ಅವರಂತೆ ಪರಿಶ್ರಮಿಸಿದವರು ಕನ್ನಡದಲ್ಲಿ ತೀರ ವಿರಳ. ಮಕ್ಕಳಂಥ ಮನಸ್ಸಿನ ಚಿದಾನಂದ ಮೂರ್ತಿಗಳು ಕನ್ನಡ ನಾಡು ನುಡಿಗಾಗಿ ಸಲ್ಲಿಸಿದ ನೂರಾರು ನಿಸ್ವಾರ್ಥ ಸೇವೆಗಳು ಈ ನಾಡಿಗೆ ಕೊಟ್ಟ ಅತ್ಯಪೂರ್ವ ಕೊಡುಗೆಗಳಾಗಿವೆ ಎಂದು ಕೊಂಡಾಡಿದರು.
ಕಾರ್ಯಕ್ರಮದ ಪ್ರಾರಂಭದಲ್ಲಿ, ಇತ್ತೀಚೆಗೆ ನಿಧನರಾದ ಸಾಹಿತಿಗಳೂ ಆದ ನಿವೃತ್ತ ಸುಪರಿಂಟೆಂಡಿಂಗ್ ಇಂಜಿನಿಯರ್ ಶ್ರೀನಿವಾಸ ಕೃ. ದೇಸಾಯಿ 30ಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದು ಸರ್ ಎಂ. ವಿಶ್ವೇಶ್ವರಯ್ಯ, ಎಸ್.ಜಿ. ಬಾಳೇಕುಂದ್ರಿಯವರಂಥ ಇಂಜಿನಿಯರಿಂಗ್ ದಿಗ್ಗಜಗಳ ಕುರಿತಾದ ಅಪರೂಪದ ಪುಸ್ತಕಗಳೂ ಸೇರಿವೆ. ವರಕವಿ ಬೇಂದ್ರಯವರ ತೀವ್ರ ಅಭಿಮಾನಿಯಾಗಿದ್ದ ಶ್ರೀನಿವಾಸ ದೇಸಾಯಿಯವರ ಅಗಲಿಕೆಯಿಂದ ಇಂಜಿನಿಯರಿಂಗ್ ಕ್ಷೇತ್ರ ತೀವ್ರ ಬಡವಾಗಿದೆ, ಇಂಥ ಪ್ರಾಮಾಣಿಕ ಇಂಜಿನಿಯರರ ಅಗಲಿಕೆಗಾಗಿ ಮೌನ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಅನ್ವೇಷಣಕೂಟದ ಅಧ್ಯಕ್ಷ ನರಸಿಂಹ ಪರಾಂಜಪೆ ಎಲ್ಲರನ್ನೂ ಸ್ವಾಗತಿಸಿದರು. ಅನಿಲ ಕಾಖಂಡಿಕಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಗಣ್ಯರಾದ ಪರಮೇಶ್ವರ ಎಂ.ಎಸ್., ಜಿ.ಆರ್. ಭಟ್ಟ, ಶ್ರೀಧರ ಗಾಂವಕರ, ಪ್ರಹ್ಲಾದ ಯಾವಗಲ್ಲ, ಡಾ.ಕೃಷ್ಣ ಕಟ್ಟಿ, ಆಕಾಶವಾಣಿಯ ನಿವೃತ್ತ ನಿರ್ದೇಶಕ ಆನಂದ ಪಾಟೀಲ, ರಾಮಚಂದ್ರ ಹೊಸಮನಿ, ಎಂ.ಬಿ.ಸದಾನಂದ, ಎಂ.ಎಂ.ಚಿಕ್ಕಮಠ, ಹಿರಿಯ ಚಿತ್ರ ಕಲಾವಿದ ಎಂ.ಆರ್. ಬಾಳಿಕಾಯಿ, ರಮೇಶ ನಾಡಿಗೇರ, ಬದರೀವಿಶಾಲ ಪರ‌್ವತೀಕರ, ಕುಮಾರಸ್ವಾಮಿ ಪುರಾಣಿಕಮಠ, ಎಸ್.ಎಂ.ದೇಶಪಾಂಡೆ, ಎಂ.ಎ.ಕಾಮಟೆ, ಡಾ. ಪ್ರಜ್ಞಾ ಮತ್ತಿಹಳ್ಳಿ, ವಿದ್ಯಾ ಪರ‌್ವತೀಕರ, ಸೀಮಾ ಪರಾಂಜಪೆ ಮುಂತಾದವರು ಉಪಸ್ಥಿತರಿದ್ದರು.
ಬೆಳಗಾವಿಯಲ್ಲಿ ಶಿವಾನಂದ ನೀಲಣ್ಣನವರಗೆ ಅಧಿಕಾರಿಗಳ ಶಾಕ್ : ಶಿವಂ ಅಸೋಸಿಯೇಟ್ ಕಚೇರಿಗಳ ಮೇಲೆ ದಾಳಿ
24 ಗಂಟೆಯಲ್ಲಿ ಕಾರು ಕಳ್ಳತನ ಪ್ರಕರಣ ಭೇಧಿಸಿದ ಪೊಲೀಸರು : ಖದೀಮರ ಪತ್ತೆಗಾಗಿ ಶೋಧ
ಗಡಿ ಮರಾಠಿ ಶಾಲೆಗಳಲ್ಲಿ ಕನ್ನಡ ಕಹಳೆ: 7 ಕನ್ನಡ ಪ್ರಾಥಮಿಕ, 2 ಪ್ರೌಡ ಶಾಲೆಗಳಿಗೆ ರಾಜ್ಯ ಸರಕಾರ ಗ್ರಿನ್ ಸಿಗ್ನಲ್
ಅಂತರಾಜ್ಯ ಖದೀಮನ ಬಂಧನ : 45.56 ಲಕ್ಷ ಮೌಲ್ಯದ ಚಿನ್ನಾಭರಣ, ದ್ವಿಚಕ್ರ ವಾಹನ ವಶಕ್ಕೆ
ಹಿಡಕಲ್ ಹಿನ್ನೀರಿನಲ್ಲಿ ಮುಳುಗಿದ್ದ ಹುನ್ನೂರು ವಿಠಲ ಮಂದಿರ ಜಲದಿಗ್ಭಂಧನದಿಂದ ಮುಕ್ತಿ
2027ರ ಮೇ. 4ರಿಂದ ಸಂಕೇಶ್ವರ ಮಹಾಲಕ್ಷ್ಮೀ ಜಾತ್ರಾ ಮಹೋತ್ಸವ ಪ್ರಾರಂಭ 