ದಾಸರಲ್ಲೇ ಶ್ರೇಷ್ಠ ದಾಸ ಕನಕದಾಸ: ಸಚಿವ ಹಾಲಪ್ಪ
ಲೋಕದರ್ಶನ ವರದಿ
ಕುಕನೂರ 22: ಪಟ್ಟಣದ ತಹಸೀಲ್ದಾರ್ ಕಾರ್ಯಾಲಯದಲ್ಲಿ ಕನಕದಾಸರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಕನಕದಾಸ ಜಯಂತಿ ಆಚರಿಸಲಾಯಿತು.
ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಗಣಿ ಮತ್ತು ಭೂವಿಜ್ಞಾನ ಸಚಿವ ಹಾಲಪ್ಪ ಆಚಾರ್ ಮಾತನಾಡಿ ದಾಸರಲ್ಲೇ ಶ್ರೇಷ್ಠ ದಾಸ ಕನಕದಾಸ, ಸಮಾಜಕ್ಕೆ ತಮ್ಮ ಕೀರ್ತನೆಗಳ ಮೂಲಕ ಉಪದೇಶವನ್ನು ನೀಡಿ ಜಾತಿ ವ್ಯವಸ್ಥೆಯನ್ನು ಆಗಿನ ಕಾಲದಲ್ಲೇ ವಿರೋಧಿಸಿದ ಮಹಾನ್ ಶ್ರೇಷ್ಠ ಸಂತ ಕೀರ್ತನೆಗಳು, ಸುಳಾದಿಗಳು ಮೂಲಕ ಕನ್ನಡ ಸಾಹಿತ್ಯ ಲೋಕಕ್ಕೆ ತನ್ನದೇ ಆದ ಕೊಡುಗೆಯನ್ನು ನೀಡಿದ್ದಾರೆ ಅವರ ಮಾರ್ಗದರ್ಶನ ತತ್ವಗಳನ್ನು ಪಾಲಿಸಿಕೊಂಡು ಆದರ್ಶಮಯ ಜೀವನ ನಡೆಸಿಕೊಂಡು ಹೋಗಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಗವಿಸಿದ್ದಪ್ಪ ಮಣ್ಣೂರ್ ಮುಖಂಡರಾದ ಕಳಕಪ್ಪ ಕಂಬಳಿ,ಬಸವನಗೌಡ ತೊಂಡಿಹಾಳ ಸಿಬ್ಬಂದಿಗಳು ಉಪಸ್ಥಿತರಿದ್ದರು.