ಅಂತರರಾಷ್ಟ್ರೀಯ

ಜಿಮ್ ಮೇಲ್ಫಾವಣಿ ಕುಸಿದು ಹತ್ತು ಜನರ ದುರ್ಮರಣ

ಜಿಮ್ ಮೇಲ್ಫಾವಣಿ ಕುಸಿದು ಹತ್ತು ಜನರ ದುರ್ಮರಣ

ಬೀಜಿಂಗ್ 24: ಜಿಮ್ನಲ್ಲಿ ವರ್ಕೌಟ್ ಮಾಡುತ್ತಿದ್ದವರ ಮೇಲೆ ಮೇಲ್ಛಾವಣಿ ಕುಸಿದು ಹತ್ತು ಮಂದಿ ಸಾವನ್ನಪ್ಪಿರುವ ಘಟನೆ ಚೀನಾದ ಬೀಜಿಂಗ್ನಲ್ಲಿ ಕಿಕಿಹಾರ್ ನಗರದಲ್ಲಿ ಭಾನುವಾರದಂದು ನಡೆದಿದೆ.

ಭಾನುವಾರ ಮಧ್ಯಾಹ್ನ 2:56ಕ್ಕೆ ಮೇಲ್ಛಾವಣಿ ಕುಸಿದಿರುವ ಬಗ್ಗೆ ವರದಿಯಾಗಿದೆ. ಪ್ರಾಂತೀಯ ಅಗ್ನಿಶಾಮಕ ಮತ್ತು ರಕ್ಷಣಾ ಇಲಾಖೆಯ ಪ್ರಕಾರ. ಘಟನೆ ನಡೆದಾಗ, ಲಾಂಗ್ಶಾ ಜಿಲ್ಲೆಯ ನಂ. 34 ಮಿಡಲ್ ಸ್ಕೂಲ್‌ನಲ್ಲಿ ಸುಮಾರು 1,200 ಚದರ ಮೀಟರ್‌ಗಳಷ್ಟು ವ್ಯಾಪಿಸಿರುವ ಜಿಮ್ನಾಷಿಯಂನಲ್ಲಿ 19 ಜನರಿದ್ದರು.

ಘಟನೆಯಲ್ಲಿ ಹದಿನಾಲ್ಕು ಮಂದಿ ಅವಶೇಷಗಳಡಿ ಸಿಲುಕಿದ್ದು, ಕೂಡಲೇ ರಕ್ಷಣಾ ತಂಡ ರಕ್ಷಣಾ ತಂಡ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯ ನಡೆಸಿದ ವೇಳೆ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದು, ಆರು ಮಂದಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ 

ಸುದ್ದಿ ಓದಿ