ಸಡಗರದ ಸ್ವಾತಂತ್ರೋತ್ಸವಕ್ಕೆ ತಾಲೂಕಾಡಳಿತ ನಿರ್ಧಾರ

ಸಡಗರದ ಸ್ವಾತಂತ್ರೋತ್ಸವಕ್ಕೆ ತಾಲೂಕಾಡಳಿತ ನಿರ್ಧಾರ  Taluk administration decides to celebrate Independence Day with great enthusiasm

ಲೋಕದರ್ಶನ ವರದಿ 

ರಬಕವಿ-ಬನಹಟ್ಟಿ 30 : ನಗರಸಭೆಯ ವ್ಯಾಪ್ತಿಯಲ್ಲಿರುವ ಪ್ರತಿಯೊಬ್ಬರು 15 ರ ಸ್ವಾತಂತ್ರೋತ್ಸವವನ್ನು ನಾವೆಲ್ಲರೂ ಸಂಭ್ರಮ, ಸಡಗರದಿಂದ ಆಚರಿಸೋಣ. ಪ್ರತಿಯೊಬ್ಬರು ಈ ಕಾರ್ಯದಲ್ಲಿ ಪಾಲ್ಗೊಳ್ಳಬೇಕು ಎಂದು ಶಾಸಕ ಸಿದ್ದು ಸವದಿ ತಿಳಿಸಿದರು.  ನಗರದ ತಹಸೀಲ್ದಾರ್ ಕಾರ್ಯಾಲಯದಲ್ಲಿ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ಎಲ್ಲ ಸರ್ಕಾರಿ ಕಾರ್ಯಾಲಯ ಗಳನ್ನು ವಿದ್ಯುತ್ ದೀಪಗಳಿಂದ ಸಿಂಗರಿಸಬೇಕು. ಸಂಘ-ಸಂಸ್ಥೆಗಳು ಮತ್ತು ವ್ಯಾಪಾರಸ್ಥರು ಸಹ ಸ್ವಾತಂತ್ರ-್ಯ ದಿನಾಚರಣೆಯ ಸಂದರ್ಭದಲ್ಲಿ ಭಾಗವಹಿಸಬೇಕು. ಆ ನಿಮಿತ್ತವಾಗಿ ಪ್ರತಿಯೊಬ್ಬರನ್ನು ಆಹ್ವಾನಿಸಿ, ಈ ಬಾರಿ ಆಕರ್ಷಕ ಪಥ ಸಂಚಲನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಸಹ ಹಮ್ಮಿಕೊಳ್ಳಲಾಗುವುದು. ಈ ನಿಟ್ಟಿನಲ್ಲಿ ಶಿಕ್ಷಣ ಇಲಾಖೆಯ ಅಧಿಕಾರಿಗಳು ಗಮನಹರಿಸಬೇಕು ಎಂದರು. 

ತಹಸೀಲ್ದಾರ್‌ಗೀರೀಶ ಸ್ವಾದಿ ಮಾತನಾಡಿ, ತಾಲೂಕಿನಾದ್ಯಂತ ಪ್ಲಾಸ್ಟಿಕ್ ಧ್ವಜ ಮಾರಾಟ, ಬಳಸುವುದನ್ನು ನಿಷೇಧಿಸಲಾಗಿದೆ. ಪ್ಲಾಸ್ಟಿಕ್ ಧ್ವಜ ಮಾರಾಟಗಾರರಿಗೆತಿಳುವಳಿಕೆ ಹಾಗೂ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲು ಮೊದಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಆದಾಗ್ಯ ಪ್ಲಾಸ್ಟಿಕ್ ಧ್ವಜ ಮಾರಾಟ ಹಾಗೂ ಬಳಕೆ ಕಂಡು ಬಂದಲ್ಲಿ ಅಂಥವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು. ತಾಲೂಕಿನ ಎಲ್ಲ ಸರ್ಕಾರಿ ಕಾರ್ಯಾಲಯಗಳ ಮೇಲೆ ಕಡ್ಡಾಯವಾಗಿ ಧ್ವಜಾರೋಹಣ ಮಾಡಬೇಕು.

ಒಟ್ಟಿನಲ್ಲಿ ಸ್ವಾತಂತ್ರೋತ್ಸವವನ್ನು ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬರ ಸಹಕಾರ ಮುಖ್ಯವಾಗಿದೆ ಎಂದರು. ಸಭೆಯಲ್ಲಿ ತಾಪಂ   ಬಸವರಾಜ ಐನಾಪೂರ, ಸಿಪಿಐ ರಾಜು ಪಾಟೀಲ,   ಅಶೋಕ ಬಸನ್ನವರ, ಶಿರಸ್ತೇದಾರ ರಾಜಶೇಖರ ಸಾತಿಹಾಳ, ಕಂದಾಯ ನೀರೀಕ್ಷಕ ಪ್ರಕಾಶ ಮಠಪತಿ, ಸದಾಶಿವ ಕುಂಬಾರ ಬಿ.ಡಿ.ನೇಮಗೌಡ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಸವರಾಜ ಹನಗಂಡಿ, ಅಭಿಯಂತರ ಶ್ರೀಧರ ನಂದ್ಯಾಳ, ಬಿ.ಬಿ.ಮುಧೋಳ, ಬಿ.ಎಂ.ಹಳೇಮನಿ ದಾಕ್ಷಾಯಣಿ ಮಂಡಿ, ಮಹಾಂತೇಶ ಮುರಗೋಡ ಸಂತೋಷ ಬಡ್ಡಿ, ಚಿದಾನಂದ ಸೊಲ್ಲಾಪುರ, ಜಗದೀಶ ಕುಳ್ಳೋಳಿ ಇತರರು ಇದ್ದರು.