ರೈತರ ಸವಾಲುಗಳಿಗೆ ನವೀನ ಆಲೋಚನೆಗಳಿಗೆ ಬೆಂಬಲ ನೀಡಿ ಸ್ಟಾರ್ಟ್‌ಅಪ್‌ಗಳಿಗೆ ಉತ್ತೇಜನ
Support innovative ideas to address farmers' challenges and encourage startups
ಲೋಕದರ್ಶನ ವರದಿ
ಧಾರವಾಡ 13: “ರೈತರು ವಿವಿಧ ಸವಾಲುಗಳನ್ನು ಎದುರಿಸುತ್ತಿದ್ದು, ಆ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ನವೀನ ಆಲೋಚನೆಗಳಿಗೆ ಕೃಷಿ ವಿಶ್ವವಿದ್ಯಾಲಯ, ಧಾರವಾಡ ಬೆಂಬಲ ನೀಡುತ್ತದೆ ಹಾಗೂ ಅವುಗಳನ್ನು ಕೃಷಿ ಸ್ಟಾರ್ಟ್‌ಅಪ್‌ಗಳಾಗಿ ರೂಪುಗೊಳ್ಳಲು ಉತ್ತೇಜಿಸುತ್ತದೆ” ಎಂದು ಧಾರವಾಡ ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ. ಪಿ. ಎಲ್. ಪಾಟೀಲ ಹೇಳಿದರು.
12 ಮೇ 2026 ಧಾರವಾಡ ಕೃಷಿ ವಿಶ್ವವಿದ್ಯಾಲಯದ ಕೃಷಿಕ್- ಅಗ್ರಿ ಬಿಸಿನೆಸ್ ಇನ್ಕ್ಯುಬೇಟರ್ (ಆರ್.ಕೆ.ವಿ.ವೈ-ಇನ್ನೋವೇಷನ್ ಮತ್ತು ಕೃಷಿ-ಉದ್ಯಮಶೀಲತೆ ಯೋಜನೆ) ಅಡಿಯಲ್ಲಿ ಹದಿಮೂರನೇ ತಂಡಕ್ಕೆ ಆಯ್ಕೆಯಾದ ನವೋದ್ಯಮಗಳ ತರಬೇತಿಯನ್ನು ಉದ್ಘಾಟಿಸಿ ಮಾತನಾಡಿದರು.
ಈ ಕೃಷಿಹಿಉದ್ಯಮಶೀಲತೆ ತರಬೇತಿಗಾಗಿ ಒಟ್ಟು 30 ಸ್ಟಾರ್ಟ್‌ಅಪ್‌ಗಳು ಭಾಗವಹಿಸಿದ್ದು, ಅವುಗಳಲ್ಲಿ 6 ವಿದ್ಯಾರ್ಥಿ ಸ್ಟಾರ್ಟ್‌ಅಪ್‌ಗಳು, 21 ಪ್ರೀ-ಸೀಡ್ ಹಂತದ ಸ್ಟಾರ್ಟ್‌ಅಪ್‌ಗಳು ಹಾಗೂ 3 ಸೀಡ್ ಹಂತದ ಸ್ಟಾರ್ಟ್‌ಅಪ್‌ಗಳು ಸೇರಿವೆ. ರೈತರ ಸಮಸ್ಯೆಗಳು ಮತ್ತು ಅಗತ್ಯತೆಗಳಿಗೆ ಪರಿಹಾರ ಒದಗಿಸುವ ಕೃಷಿ ಹಾಗೂ ಸಂಬಂಧಿತ ಕ್ಷೇತ್ರಗಳ ಸ್ಟಾರ್ಟ್‌ಅಪ್‌ಗಳಿಗೆ ಬೆಂಬಲ ನೀಡುವ ಉದ್ದೇಶದಿಂದ ಯೋಜನೆಯಡಿ ನಾವೀನ್ಯತೆಯುಳ್ಳ ಸ್ಟಾರ್ಟ್‌ಅಪ್‌ಗಳಿಗೆ ಆರ್ಥಿಕ ಹಾಗೂ ತಾಂತ್ರಿಕ ನೆರವು ಒದಗಿಸಲಾಗುತ್ತಿದೆ.
ಕೃಷಿಕ್‌ಹಿನವೋದ್ಯಮ ಪೋಷಣ ಕೇಂದ್ರದ ಯೋಜನೆಯ ಮುಖ್ಯಸ್ಥರಾದ ಡಾ.ಽಽ ಎಸ್.ಎಸ್. ಡೊಳ್ಳಿ ಅವರು, ಯೋಜನೆಯ ಉದ್ದೇಶ ಮತ್ತು ಸಾಧನೆಗಳ ಕುರಿತು ವಿವರಿಸಿದರು. ಈವರೆಗೆ ಕೃಷಿಕ್‌ಹಿನವೋದ್ಯಮ ಪೋಷಣ ಕೇಂದ್ರದಿಂದ 12 ಬ್ಯಾಚ್‌ಗಳಲ್ಲಿ 300ಕ್ಕೂ ಹೆಚ್ಚು ಸ್ಟಾರ್ಟ್‌ಅಪ್‌ಗಳಿಗೆ ಯಶಸ್ವಿಯಾಗಿ ತರಬೇತಿ ನೀಡಲಾಗಿದೆ. ಅವುಗಳಲ್ಲಿ 149 ಸ್ಟಾರ್ಟ್‌ಅಪ್‌ಗಳಿಗೆ ಬೆಂಬಲ ಒದಗಿಸಲಾಗಿದೆ. ಒಟ್ಟು ಸ್ಟಾರ್ಟ್‌ಅಪ್‌ಗಳಿಂದ 100 ಕೋಟಿಗೂ ಅಧಿಕ ಆದಾಯ ಮತ್ತು 10 ಲಕ್ಷಕ್ಕೂ ಹೆಚ್ಚು ರೈತರಿಗೆ ಪ್ರಯೋಜನವಾಗಿದೆ ಎಂದು ತಿಳಿಸಿದರು.
ಈ ತರಬೇತಿ ಕಾರ್ಯಕ್ರಮದಲ್ಲಿ ವಿನ್ಯಾಸ ಚಿಂತನೆ (ಆರಟಿ ಖಿಟಿಞಟಿರ), ತಂತ್ರಜ್ಞಾನದ ಸಿದ್ಧತೆ ಮಟ್ಟ (ಖಿಜಛಿಟಿಠಠಥಿ ಖಜಚಿಜಟಿ ಐಜತಜಟ ಹಿ ಖಿಖಐ), ಉತ್ಪನ್ನದ ಗುರುತು ನಿರ್ಮಾಣ ಮತ್ತು ಮಾರುಕಟ್ಟೆ ಪ್ರಚಾರ , ಸ್ಟಾರ್ಟ್‌ಅಪ್‌ನಲ್ಲಿ ಅಖ ಪಾತ್ರ: ಋಓ ವರೆಗೆ , ಸ್ಟಾರ್ಟ್‌ಅಪ್‌ನಲ್ಲಿ ಅಂ ಪಾತ್ರ (ಲೆಕ್ಕಪತ್ರ, ತೆರಿಗೆ ಮತ್ತು ಅನುಸರಣೆ) - , ಸ್ಟಾರ್ಟ್‌ಅಪ್‌ಗಳಿಗೆ ಋ ಏಕೆ ಮುಖ್ಯ ಕನಿಷ್ಠ ಕಾರ್ಯ ನಿರ್ವಹಣೆಯ ಉತ್ಪನ್ನ , ಉತ್ಪನ್ನಹಿಮಾರುಕಟ್ಟೆ ಹೊಂದಾಣಿಕೆ , ಸೇರಿದಂತೆ ಹಲವು ವಿಷಯಗಳ ಕುರಿತು ಕ್ಷೇತ್ರ ಪರಿಣಿತರಿಂದ ತರಬೇತಿ ನಡೆಸಲಾಗುತ್ತಿದೆ.
ಕೃಷಿ ವಿಶ್ವವಿದ್ಯಾಲಯದ ಕೃಷಿಕ-ನವೋದ್ಯಮ ಪೋಷಣ ಕೇಂದ್ರ ಆರ್.ಕೆ.ವಿ.ವೈ-ಇನ್ನೋವೇಷನ್ ಮತ್ತು ಕೃಷಿ-ಉದ್ಯಮಶೀಲತೆ ಯೋಜನೆಯಡಿ ಆಸಕ್ತರಿಂದ 14ನೇ ಕೋಹಾರ್ಟ್‌ಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 31.05.2026. ಆಸಕ್ತ ಉದ್ಯಮಿಗಳು ಹಾಗೂ ನವೋದ್ಯಮಿಗಳು ಹೆಚ್ಚಿನ ಮಾಹಿತಿಗಾಗಿ ತಿತಿತಿ.ಞಡಿಞ-ಚಿಛಣಛಿಜ.ಠರ ಜಾಲತಾಣಕ್ಕೆ ಭೇಟಿ ಕೊಡಲು ಕೋರಲಾಗಿದೆ.
24 ಗಂಟೆಯಲ್ಲಿ ಕಾರು ಕಳ್ಳತನ ಪ್ರಕರಣ ಭೇಧಿಸಿದ ಪೊಲೀಸರು : ಖದೀಮರ ಪತ್ತೆಗಾಗಿ ಶೋಧ
ಗಡಿ ಮರಾಠಿ ಶಾಲೆಗಳಲ್ಲಿ ಕನ್ನಡ ಕಹಳೆ: 7 ಕನ್ನಡ ಪ್ರಾಥಮಿಕ, 2 ಪ್ರೌಡ ಶಾಲೆಗಳಿಗೆ ರಾಜ್ಯ ಸರಕಾರ ಗ್ರಿನ್ ಸಿಗ್ನಲ್
ಅಂತರಾಜ್ಯ ಖದೀಮನ ಬಂಧನ : 45.56 ಲಕ್ಷ ಮೌಲ್ಯದ ಚಿನ್ನಾಭರಣ, ದ್ವಿಚಕ್ರ ವಾಹನ ವಶಕ್ಕೆ
ಹಿಡಕಲ್ ಹಿನ್ನೀರಿನಲ್ಲಿ ಮುಳುಗಿದ್ದ ಹುನ್ನೂರು ವಿಠಲ ಮಂದಿರ ಜಲದಿಗ್ಭಂಧನದಿಂದ ಮುಕ್ತಿ
2027ರ ಮೇ. 4ರಿಂದ ಸಂಕೇಶ್ವರ ಮಹಾಲಕ್ಷ್ಮೀ ಜಾತ್ರಾ ಮಹೋತ್ಸವ ಪ್ರಾರಂಭ
48 ಗಂಟೆಯಲ್ಲಿ ಮನೆಗಳ್ಳರಿಬ್ಬರ ಬಂಧನ : 21,02 ಲಕ್ಷ ಮೌಲ್ಯದ 154.6 ಗ್ರಾಂ ಚಿನ್ನಾಭರಣ ವಶಕ್ಕೆ 