ಅಡಿಕೆ ಎಲೆ ಚುಕ್ಕೆ ರೋಗ ನಿಯಂತ್ರಣಕ್ಕೆ ಸಹಾಯಧನ: ಅರ್ಜಿ ಆಹ್ವಾನ
ಲೋಕದರ್ಶನ ವರದಿ
ಮುಂಡಗೋಡ 30 : 2026-27ನೇ ಸಾಲಿನ ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ ಅಡಿಕೆ ಬೆಳೆಗೆ ತಗಲುವ ಎಲೆ ಚುಕ್ಕೆ ರೋಗ ನಿಯಂತ್ರಣಕ್ಕಾಗಿ ಓಷಧಿ ಖರೀದಿಸಿದ ರೈತರಿಗೆ ಸಹಾಯಧನ ನೀಡಲು ಮುಂಡಗೋಡ ತೋಟಗಾರಿಕೆ ಇಲಾಖೆ ಅರ್ಜಿ ಆಹ್ವಾನಿಸಿದೆ. ಯೋಜನೆಯಡಿ ಓಷಧಿ ಖರೀದಿಸಿದ ರೈತರಿಗೆ ಪ್ರತಿ ಹೆಕ್ಟರಿಗೆ ರೂ.1,500ರಂತೆ ಗರಿಷ್ಠ 2 ಹೆಕ್ಟರ್ವರೆಗೆ ಶೇ.35ರಷ್ಟು ಸಹಾಯಧನ ನೀಡಲಾಗುವುದು.
ಅರ್ಹ ರೈತರು ಅಗತ್ಯ ದಾಖಲೆಗಳೊಂದಿಗೆ ಮುಂಡಗೋಡ ತೋಟಗಾರಿಕೆ ಇಲಾಖೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಜೇಷ್ಠತೆ, ಲಭ್ಯವಿರುವ ಅನುದಾನ ಹಾಗೂ ಸರ್ಕಾರದ ಮಾರ್ಗಸೂಚಿಗಳ ಅನುಸಾರ ಪ್ರಸಕ್ತ ಸಾಲಿನ ಕಾರ್ಯಾದೇಶಗಳನ್ನು ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ಸಂಬಂಧಿತ ಗ್ರಾಮ ಪಂಚಾಯಿತಿಗಳ ಕೃಷಿ ಸಖಿಯರನ್ನು ಸಂಪರ್ಕಿಸಬಹುದಾಗಿದೆ ಎಂದು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ಕೃಷ್ಣಾ ಟಿ. ಕುಳ್ಳೂರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.