ಮುಧೋಳ

ವಿಧ್ಯಾರ್ಥಿನಿಯರು ಮಾತೃಭಾಷೆ ಕನ್ನಡದ ಜೊತೆಗೆ ಇತರೆ ಭಾಷೆಗಳನ್ನು ಓದಲು, ಬರೆಯಲು, ಮಾತನಾಡುವದನ್ನು ಕಲಿಯಬೇಕು; ಜ್ಯೋತಿ ಪಾಟೀಲ

ವಿಧ್ಯಾರ್ಥಿನಿಯರು ಮಾತೃಭಾಷೆ ಕನ್ನಡದ ಜೊತೆಗೆ ಇತರೆ ಭಾಷೆಗಳನ್ನು ಓದಲು, ಬರೆಯಲು, ಮಾತನಾಡುವದನ್ನು ಕಲಿಯಬೇಕು; ಜ್ಯೋತಿ ಪಾಟೀಲ
Students should learn to read, write and speak other languages ​​along with their mother tongue Kann

ವಿಧ್ಯಾರ್ಥಿನಿಯರು ಮಾತೃಭಾಷೆ ಕನ್ನಡದ ಜೊತೆಗೆ ಇತರೆ ಭಾಷೆಗಳನ್ನು ಓದಲು, ಬರೆಯಲು, ಮಾತನಾಡುವದನ್ನು ಕಲಿಯಬೇಕು; ಜ್ಯೋತಿ ಪಾಟೀಲ 

ಮುಧೋಳ ಮಾ.12; ಶಿಕ್ಷಣ, ಉದ್ಯೋಗ, ಸಾಮಾಜಿಕ ಸೇವೆ, ಮಿಲಿಟರಿ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲೂ ಇಂದು ಸಮಾಜದಲ್ಲಿ ಮಹಿಳೆಯರು ಪುರುಷರಿಗೆ ಸಮಾನವಾಗಿದ್ದಾಳೆ, ಪಾಲಕರು ಹೆಣ್ಣು ಮಗು ಎಂದು ತಾರತಮ್ಯ ಮಾಡದೇ ಅವಳಿಗೆ ಸಮಾನ ಅವಕಾಶ ನೀಡಿದಾಗ ಆಕೆ ಏನನ್ನಾದರೂ ಸಾಧಿಸುತ್ತಾಳೆ, ಹೆಣ್ಣು ಮಕ್ಕಳಲ್ಲಿ ಅಗಾಧವಾದ ಶಕ್ತಿ ಅಡಗಿದೆ, ಮಹಿಳೆಯರಿಗೆ ತಾಳ್ಮೆ, ಸಹನೆ, ಪ್ರೀತಿ ಹೆಚ್ಚು, ದೈಹಿಕ ವಾಗಿ, ಮಾನಸಿಕವಾಗಿ ಮಹಿಳೆಯರು ಹೆಚ್ಚು ಸಬಲರಾಗಿರುತ್ತಾರೆಂದು ಮುಧೋಳದ ಸಪ್ತಸ್ವರ ಸಂಗೀತ, ನೃತ್ಯ ಹಾಗೂ ಸಾಂಸ್ಕೃತಿಕ ಸಂಸ್ಥೆಯ ಅಧ್ಯಕ್ಷೆ ಜ್ಯೋತಿ ಪಾಟೀಲ ಹೇಳಿದರು. ಸಂಘದ ನಗರದ ಎಸ್‌.ಆರ್‌.ಕಂಠಿ ಮಹಾವಿದ್ಯಾಲಯದ ಐಕ್ಯೂಎಸಿ ಅಡಿಯಲ್ಲಿ ಕಾಲೇಜಿನ ವಿದ್ಯಾರ್ಥಿನಿಯರ ಒಕ್ಕೂಟ ಹಾಗೂ ಮಹಿಳಾ ಸಬಲೀಕರಣ ಘಟಕದ ವತಿಯಿಂದ ಬುಧವಾರ ಕಾಲೇಜಿನ ಸಭಾ ಭವನದಲ್ಲಿ ಹಮ್ಮಿಕೊಂಡಿದ್ದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ-2025ರ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿ ಸ್ಥಾನವಹಿಸಿ ಮಾತನಾಡಿ ಪ್ರತಿಯೋರ್ವ ವಿದ್ಯಾರ್ಥಿನಿಯರಲ್ಲಿ ತಮ್ಮದೆಯಾದ ಪ್ರತಿಭೆ ಮತ್ತು ಕೌಶಲ್ಯ ಇದ್ದೇ ಇರುತ್ತದೆ ಅದನ್ನು ಸಮರ​‍್ಕವಾಗಿ ಬಳಸಿಕೊಂಡು ಆರ್ಥಿಕವಾಗಿ ಸಬಲರಾಗಬೇಕು, ಹವ್ಯಾಸಗಳು ವೃತ್ತಿಯಾಗಬೇಕು, ಮಾಡುವ ಕೆಲಸದಲ್ಲಿ ಆಸಕ್ತಿ, ಬದ್ದತೆ, ಸೂಕ್ತ ನಿರ್ದಾರ, ಆತ್ಮವಿಶ್ವಾಸ, ನಿರಂತರ ಪ್ರಾಮಾಣಿಕ ಪ್ರಯತ್ನ ಇರಬೇಕು ಆಗಲೇ ತಾವು ಅಂದುಕೊಂಡಂತ ಕೆಲಸಗಳು ಯಶಸ್ವಿಯಾಗಲು ಸಾದ್ಯವೆಂದು ಹೇಳಿದ ಅವರು ಮಾತೃಭಾಷೆ ಕನ್ನಡದ ಜೊತೆಗೆ ಇತರೆ ಭಾಷೆಯಗಳನ್ನು ಓದಲು, ಬರೆಯಲು ಮತ್ತು ಮಾತನಾಡುವದನ್ನು ಕಲಿಯಬೇಕು ಇದರಿಂದ ತಾವು ದೇಶ-ವಿದೇಶಗಳಲ್ಲಿ ತಮ್ಮಲ್ಲಿ ಅಡಗಿರುವ ಅಸಾಧಾರಣ ಕಲೆ ಮತ್ತು ಕೌಶಲ್ಯ ಪ್ರದರ್ಶಿಸಿ ಮೆಚ್ಚುಗೆ ಪಡೆದುಕೊಳ್ಳಬಹುದೇಂದು ಹೇಳಿದರು.  ತಾವೇ ಕಟ್ಟಿರುವ ಸಪ್ತಸ್ವರ ಸಂಗೀತ, ನೃತ್ಯ ಹಾಗೂ ಸಾಂಸ್ಕೃತಿಕ ಸಂಸ್ಥೆಯು ಹೇಗೆ ಬೆಳೆಯಲು ಸಾದ್ಯವಾಯಿತು ಎಂಬುದರ ಕುರಿತು ಸ್ವವಿವರ ವಿದ್ಯಾರ್ಥಿನಿಯರಿಗೆ ವಿವರಿಸಿದರು. ಕಾಲೇಜಿನ ಪ್ರಾಚಾರ್ಯ ಪ್ರೊ.ಮಲ್ಲಣ್ಣ ಜಿಗಬಡ್ಡಿ ಅಧ್ಯಕ್ಷತೆವಹಿಸಿ ಮಾತನಾಡಿ ಸಾಧನೆಗೆ ವಯಸ್ಸು ಮುಖ್ಯವಲ್ಲ, ಸಾಧಿಸುವ ಛಲ ಮುಖ್ಯ ಈ ನಿಟ್ಟಿನಲ್ಲಿ ವಿದ್ಯಾರ್ಥಿನಿಯರು ಕಾರ್ಯಪ್ರವೃತ್ತರಾಗಬೇಕು ಎಂದರು.  ಐಕ್ಯೂಎಸಿ ಸಂಯೋಜಕ ಪ್ರೋ.ಅಜಯ ಕಡೂರ ವೇದಿಕೆ ಮೇಲಿದ್ದರು, ವಿದ್ಯಾರ್ಥಿನಿಯರ ಒಕ್ಕೂಟ ಹಾಗೂ ಮಹಿಳಾ ಸಬಲೀಕರಣ ಘಟಕದ ಕಾರ್ಯಾಧ್ಯಕ್ಷೆ ಪ್ರೊ.ಪ್ರೀತಿ ಹೆಚ್‌.ಸ್ವಾಗತಿಸಿದರು, ಪ್ರೋ. ಲಕ್ಷಿ-್ಮ ಬಿರಾದಾರ ಅತಿಥಿಗಳನ್ನು ಪರಿಚಯಿಸಿದರು, ಪತ್ರಿಕೋದ್ಯಮ ಹಾಗೂ ಸಮೂಹ ಸಂವಹನ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿನಿ ಕಾವೇರಿ ಚನ್ನಾಳ ನಿರೂಪಿಸಿದರು, ಕಾವ್ಯಾ ಕೌಜಲಗಿ ಪ್ರಾರ್ಥನೆ ಹೇಳಿದರು, ಶೃತಿ ತೇಲಿ ವಂದಿಸಿದರು. 


ಸುದ್ದಿ ಓದಿ