ಏ 27ರಿಂದ ವಿಜೃಂಭಣೆಯಿಂದ ಸಿದ್ದರಾಮೇಶ್ವರ ಜಾತ್ರೆ
ಕೊಲ್ಹಾರ 24: ತಾಲೂಕಿನ ಸಿದ್ದನಾಥ ಗ್ರಾಮದಲ್ಲಿ ಏ 27 ರಿಂದ ಮೇ 1ರವರೆಗೆ ಐದು ದಿನಗಳ ಕಾಲ ಸಿದ್ದರಾಮೇಶ್ವರ ಜಾತ್ರಾ ಮಹೋತ್ಸವವು ವಿಜೃಂಭಣೆಯಿಂದ ಜರುಗಲಿದೆ ಏ.27ರಂದು ಸೋಮುವಾರ ಕುದುರೆ ಕುಣಿತ, ಗೊಂಬೆ ಕುಣಿತ ಜರುಗುವುದು. ಬೆಳಿಗ್ಗೆ 6.30ರಿಂದ 10ಘಂಟೆಯ ವರೆಗೆ ಸಿದ್ದರಾಮೇಶ್ವರ ಮೂರ್ತಿಗೆ ಮಹಾರುದ್ರಾಭಿಷೇಕ, ವಿಶೇಷ ಅಲಂಕಾರಿಕ ಪೂಜೆ ಜರುಗಲಿದ್ದು ನಂತರ ಕೃಷ್ಣಾ ನದಿಯಿಂದ ದೇವಸ್ಥಾನದವರೆಗೆ ಸಿದ್ದರಾಮೇಶ್ವರ ಪಲ್ಲಕ್ಕಿ ಉತ್ಸವ ಮೆರವಣಿಗೆ, ಗುಡಿಗೆ ಸಿಡಿಕಾಯಿ ಹೊಡೆಯುವುದು ಸಂಜೆ 6 ಗಂಟೆಗೆ ಕಳಸ ಹಾಗೂ ಹೂಮಾಲೆ ಮೆರವಣಿಗೆ, ಚಿತ್ರ ವಿಚಿತ್ರ ಮದ್ದು ಸುಡುವುದು, ರಾತ್ರಿ 10 ಗಂಟೆಗೆ ತಾಯಿಯ ಋಣ ಮಣ್ಣಿನ ಗುಣ ಎಂಬ ಸುಂದರ ಸಾಮಾಜಿಕ ನಾಟಕ ಜರುಗುವುದು.
ಏ.28 ರಂದು ಮಂಗಳವಾರ ಸಾಮಾಜಿಕ ಕಾರ್ಯಕ್ರಮ. ಗಾಡಿರೇಸ ಸ್ಪರ್ಧೆ ಹಾಗೂ ಪ್ರಸಿದ್ದ ಜಂಗಿ ಕುಸ್ತಿಗಳು ಜರುಗುವುದು ರಾತ್ರಿ 10ಗಂಟೆಗೆ ಸಾಮಾಜಿಕ ನಾಟಕ ಹಳ್ಳಿಯಿಂದ ದಿಲ್ಲಿಯವರೆಗೆ ಇದರ ಅರ್ಥಾತ್ (ಲಂಚ ಸಾಮ್ರಾಜ್ಯ) ನಾಟಕ ಜರಗುವುದು. ಏ.29 ಬುದುವಾರ ರಂದು ಹೊನಲು ಬೆಳಕಿನ ರಾಜ್ಯಮಟ್ಟದ ಪಗಡಿ ಪಂದ್ಯಾವಳಿಗಳು ಏರಿ್ಡಸಲಾಗಿದೆ. ಏ.30ಗುರುವಾರ ರಂದು 2ನಿಮಿಷದ ಪುಟ್ಟಿ ಗಾಡಿ ರೇಸ್ ಜರುಗುವುದು.
ಮೇ.01ರಂದು ಶುಕ್ರವಾರ ಗ್ರಾಮ ದೇವತೆಗಳಿಗೆ ಉಡಿ ತುಂಬುವ ಕಾರ್ಯಕ್ರಮ ಜರಗುವುದು.ಮೀಸೆಯಿಂದ ಭಾರ ಎತ್ತುವ ಸ್ಪರ್ಧೆಗಳು,ಗುಂಡು ಎತ್ತುವ ಸ್ಪರ್ಧೆಗಳು ಹಾಗೂ ತೆಕ್ಕೆ ಬಡೇದು ಚಿಲು ಎತ್ತುವ ಸ್ಪರ್ಧೆಗಳು ಜರುಗುವುದು.ಅದೇ ದಿನ ರಾತ್ರಿ 10:00ಗಂಟೆಗೆ ಸಾವಿರಹಳ್ಳಿ ಸರ್ದಾರ ಅರ್ಥತ್ -(ದರ್ಮದೊರೆ)ಸಾಮಾಜಿಕ ನಾಟಕ ಜರುಗುವುದು. ಸಿದ್ದರಾಮೇಶ್ವರ ಜಾತ್ರೆ ಪ್ರಯುಕ್ತ ಐದು ದಿನಗಳವರೆಗೆ ದೇವಸ್ಥಾನದಲ್ಲಿ ಅನ್ನ ಪ್ರಸಾದ ವ್ಯವಸ್ಥೆ ಇರುತ್ತದೆ ಎಂದು ಜಾತ್ರಾ ಕಮೀಟಿ ಪ್ರಕಟನೆಗೆ ತಿಳಿಸಿದ್ದಾರೆ.