ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಜಯಂತಿ ಭಾವಚಿತ್ರ ಪೂಜೆ

 ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಜಯಂತಿ ಭಾವಚಿತ್ರ ಪೂಜೆ    Shivasharane Hemaraddi Mallamma Jayanti Portrait Pooja

ಲೋಕದರ್ಶನ ವರದಿ

ಹುಬ್ಬಳ್ಳಿ 12: ಹೊರಕೇರಿ ಮಾಸ್ತರ ಶಿಕ್ಷಣ ಪ್ರತಿಷ್ಠಾನ, ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿಯ, ಬಸವ ಪರಿಸರ ಸಂರಕ್ಷಣಾ ಸಮಿತಿಯ ಸದಸ್ಯರು    ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಜಯಂತಿಯ ಶುಭ ಸಂದರ್ಭದಲ್ಲಿ  ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಮಾಲಾರೆ​‍್ಣ ಮಾಡುವ ಮೂಲಕ ಗೌರವ ಅರೆ​‍್ಣ ಮಾಡಿ, ಭಕ್ತಿ ಪೂರ್ವಕ ನಮನಗಳನ್ನು ಸಲ್ಲಿಸಿದರು.   ಹಿರಿಯರಾದ ವಿ ಜಿ ಪಾಟೀಲ್,      ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿಯ ಕಾರ್ಯದರ್ಶಿ, ಬಸವ ಪರಿಸರ ಸಂರಕ್ಷಣಾ ಸಮಿತಿಯ ಕಾರ್ಯದರ್ಶಿ,  ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ಜಿಲ್ಲಾ ಘಟಕದ ಉಪಾಧ್ಯಕ್ಷ, ಕರ್ನಾಟಕ ವಚನ ಸಾಹಿತ್ಯ ಪರಿಷತ್ನ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ, ಹೊರಕೇರಿ ಮಾಸ್ತರ ಶಿಕ್ಷಣ ಪ್ರತಿಷ್ಠಾನ ಟ್ರಸ್ಟಿ,  ಗ್ರಂಥಪಾಲಕ ಡಾ. ಸುರೇಶ ಡಿ. ಹೊರಕೇರಿ,   ಆರ್ ಕೆ ಪಾಟೀಲ್, ಡಿ.ಸಿ.ರಂಗರಡ್ಡಿ, ಮೋಹನ್ ಹೊಸಮನಿ,    ವೀರಣ್ಣ ಹೂಲಿ, ಗಣ್ಯರು , ಮುಂತಾದವರು ಭಾಗವಹಿಸಿದ್ದರು.  ಗ್ರಂಥಪಾಲಕ ಡಾ. ಸುರೇಶ ಡಿ. ಹೊರಕೇರಿ ಅವರು ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಮಾಡಿದ ಶ್ರೇಷ್ಠ ಕಾರ್ಯಗಳನ್ನು ಸ್ಮರಿಸಿದರು.   

ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಸರ್ವಜನಾಂಗದ ಮಹಿಳೆಯರಿಗೆ ಆದರ್ಶ ಸತಿ, ಭಕ್ತೆ, ಲೌಕಿಕ ಬದುಕಿನೊಂದಿಗೆ ಪಾರಮಾರ್ಥಿಕ ಸಾಧನೆಗೈದ ಪರಮಸಾಧಕಿ, ಗಂಡನ ಮನೆಯೇ ಸರ್ವಸ್ವ ಎಂದು ಜಗತ್ತಿಗೆ ಸಾರಿ ಹೇಳಿದ ಮಹಾಸಾಧ್ವಿ, ಸ್ವಾಭಿಮಾನದ ಪ್ರತೀಕವಾಗಿ,  ಸ್ತ್ರೀ  ಶಕ್ತಿಯ ಪ್ರತಿಪಾದಕಿಯಾಗಿ, ಮಹಾನ್ ಸಾಧಕಿ,  ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಎಂದು ಡಾ. ಸುರೇಶ ಡಿ. ಹೊರಕೇರಿ ಅವರು ಹೇಳಿದರು. ಕನ್ನಡದ ​‍್ರ​‍್ರಥಮ ಕವಯಿತ್ರಿ ಶಿವಶರಣೆ ಅಕ್ಕಮಹಾದೇವಿಯ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಬದುಕಿದವಳು ಹೇಮರಡ್ಡಿ ಮಲ್ಲಮ್ಮ. ಎಷ್ಟೊಂದು ಕಷ್ಟ, ನೋವು ಬಂದರೂ ಗಂಡನ ಮನೆಯನ್ನು ಬಿಡದೆ ಲೌಕಿಕ    ಗಂಡನೊಂದಿಗೆ   ಇದ್ದು   ಗಂಡನಲ್ಲಿ ಶ್ರೀಶೈಲ ಮಲ್ಲಿಕಾರ್ಜುನನನ್ನು ಕಂಡವಳು. ಶ್ರೀಶೈಲ ಮಲ್ಲಿಕಾರ್ಜುನನನ್ನು ಆರಾಧ್ಯದೈವವೆಂದು ಪೂಜಿಸುತ್ತಿದ್ದಳು. ಹಿಂಸೆ ಕೊಟ್ಟವರಲ್ಲಿಯೆ ಶ್ರೀಶೈಲ ಮಲ್ಲಿಕಾರ್ಜುನನನ್ನೆ ಕಾಣುತ್ತಿದ್ದಳು. ಹೇಮರಡ್ಡಿ ಮಲ್ಲಮ್ಮನ ಸ್ಥೈರ್ಯ ,  ದೈರ್ಯ, ಸಾತ್ವಿಕ ಗುಣಗಳನ್ನು ಮಹಿಳೆಯರು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.