ಸಾಲು, ಸಾಲು ಪ್ರಕರಣಗಳ ವಿಚಾರಣೆ: ಎಲ್ಲರ ಚಿತ್ತ ಸುಪ್ರೀಂನತ್ತ ...!
ನವದೆಹಲಿ, ಜನವರಿ, 6 , ಚಳಿಗಾಲದ ರಜೆಯ ಬಳಿಕ ಸೋಮವಾರದಿಂದ ಪುನರಾರಂಭವಾಗಲಿರುವ ಸುಪ್ರೀಂ ಕೋರ್ಟ್ ಮುಂದೆ ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದು ಪ್ರಕರಣ,ಸೇರಿದಂತೆ ಹಲವು ಮಹತ್ವದ ಪ್ರಕಣಗಳ ವಿಚಾರಣೆ ನಡೆಯಲಿದ್ದು, ಎಲ್ಲರ ಕಣ್ಣು, ಚಿತ್ತ ಕೋರ್ಟ್ ನತ್ತ ನೆಟ್ಟಿದೆ. ಮಹತ್ವದ ಪ್ರಕರಣಗಳ ಪೈಕಿ ಶಬರಿಮಲೆ ವಿವಾದವೂ ಒಂದಾಗಿದ್ದು ಅದರ ವಿಚಾರಣೆಯನ್ನು ಏಳು ಸದಸ್ಯರ ಸಾಂವಿಧಾನಿಕ ಪೀಠ ನಡೆಸಲಿದೆ. ಮೊದಲ ದಿನವೇ, ಟಾಟಾ ಸನ್ಸ್ ಕಂಪೆನಿ ಹಾಗೂ ಸೈರಸ್ ಮಿಸ್ತ್ರಿ ನಡುವಿನ ವ್ಯಾಜ್ಯದ ವಿಚಾರಣೆ ನಡೆಯುವ ಸಾಧ್ಯತೆಯಿದೆ.
ಆನಂತರದ ದಿನಗಳಲ್ಲಿ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಕೆನೆಪದರಿನಲ್ಲಿ ಇರುವವರಿಗೆ ಮೀಸಲಾತಿ ಅನ್ವಯವಾಗದು ಎಂಬ 2018ರ ಸುಪ್ರೀಂ ಕೋರ್ಟ್ ನ ತೀರ್ಪನ್ನು 7 ಸದಸ್ಯರ ಪೀಠ ಮತ್ತೆ ವಿಚಾರಣೆಗೊಳಪಡಿಸಬೇಕು ಎಂದು ಕೇಂದ್ರ ಸರಕಾರ ಸಲ್ಲಿಸಿರುವ ಮನವಿಯ ವಿಚಾರಣೆ ನಡೆಯಲಿದೆ ಎನ್ನಲಾಗಿದೆ. ಇನ್ನು, ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದುಗೊಳಿಸಿದ ಅನಂತರ ಅಲ್ಲಿನ ಸ್ಥಳೀಯ ಆಡಳಿತ ಹಾಕಿದ್ದ ಪ್ರತಿಬಂಧಕಾಜ್ಞೆಗಳನ್ನು ಪ್ರಶ್ನಿಸಿ ಕಾಂಗ್ರೆಸ್ ನಾಯಕ ಗುಲಾಂ ನಬಿ ಆಜಾದ್ ಸಲ್ಲಿಸಿರುವ ಅರ್ಜಿ ವಿಚಾರಣೆಯೂ ನಡೆಯಲಿದೆ. ಜನವರಿ 22ರಿಂದ ಮುಖ್ಯ ನ್ಯಾಯಮೂರ್ತಿ ಎಸ್.ಎ. ಬೋಬ್ಡೆ ನೇತೃತ್ವದ ಪೀಠದಿಂದ ಪೌರತ್ವ ಕಾಯ್ದೆ ತಿದ್ದುಪಡಿ ಪ್ರಕರಣ ವಿಚಾರಣೆ ನಡೆಯಲಿದೆ.
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ 