ಬೀದಿಳಿದು ಸಂಭ್ರಮಿಸಿದವರ ವಿರುದ್ಧ ರೋಹಿತ್ ಕಿಡಿ
ನವದೆಹಲಿ, ಏ. 6, ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಕರೆಯಂತೆ ಕೊರೊನಾ ವೈರಸ್ ವಿರುದ್ಧದ ಹೋರಾಟದ ಅಂಗವಾಗಿ ದೇಶದ ಸಮಸ್ತ ಜನತೆ ನಿನ್ನೆ(ಭಾನುವಾರ) ರಾತ್ರಿ 9 ಗಂಟೆ 9 ನಿಮಿಷಕ್ಕೆ ತಮ್ಮ-ತಮ್ಮ ಮನೆಗಳ ಬಾಲ್ಕನಿಗಳಲ್ಲಿ ದೀಪ ಬೆಳಗಿಸಿ ಏಕತೆಯನ್ನು ಪ್ರದರ್ಶಿಸಿದ್ದರು.ಇದಕ್ಕೆ ಅಭೂತ ಪ್ರತಿಕ್ರಿಯೆ ವ್ಯಕ್ತವಾಗಿತ್ತು. 9 ಗಂಟೆ 9 ನಿಮಿಷಗಳಾದ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಮಂದಿ ದೀಪ ಬೆಳಗಿಸಿದ ಫೋಟೊಗಳನ್ನು ಅಥವಾ ವೀಡಿಯೋಗಳನ್ನು ಪೋಸ್ಟ್ ಮಾಡಿದ್ದರು. ಅದರಂತೆ ಟೀಮ್ ಇಂಡಿಯಾ ಆರಂಭಿಕ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ ಅವರು ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ತಮ್ಮದೂ ಫೋಟೊವನ್ನು ಶೇರ್ ಮಾಡಿದ್ದರು.ಆದರೆ, ಬೀದಿಗಳಲ್ಲಿ ದೀಪ ಬೆಳಗಿಸಿ ಸಂಭ್ರಮಿಸಿದ್ದವರ ವಿರುದ್ಧ ರೋಹಿತ್ ಕಿಡಿಕಾಡಿದ್ದರು. ವಿಶ್ವಕಪ್ ಟೂರ್ನಿಗೆ ಇನ್ನೂ ಬಹಳಷ್ಟು ಸಮಯವಿದೆ. ದೇಶದ ಜನತೆ ಮನೆಯಿಂದಲೇ ದೀಪ ಬೆಳಗಿಸಿ, ಅದು ಬಿಟ್ಟು ಬೀದಿಗಳಲ್ಲಿ ಸಂಭ್ರಮಿಸುವುದನ್ನು ಮಾಡಬೇಡಿ ಎಂದು ಹಿಟ್‌ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ ಮನವಿ ಮಾಡಿಕೊಂಡಿದ್ದಾರೆ. "ಮನೆಯ ಒಳಾಂಗಣದಲ್ಲಿಯೇ ಇರಿ, ಬೀದಿಗಳಿಗೆ ತೆರಳಿ ಸಂಭ್ರಮಿಸುವುದನ್ನು ನಿಲ್ಲಿಸಿ. ವಿಶ್ವಕಪ್ ಆರಂಭವಾಗಲು ಇನ್ನು ಸಮಯವಿದೆ," ಎಂದು ಟ್ವೀಟ್ ಮಾಡಿದ್ದಾರೆ.ರೋಹಿತ್ ಶರ್ಮಾ ಭಾನುವಾರ ತಮ್ಮ ಕುಟುಂಬದೊಂದಿಗಿನ ಫೋಟೊವನ್ನು ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಂಚಿಕೊಂಡಿದ್ದರು. ಫೋಟೊದಲ್ಲಿ ರೋಹಿತ್ ಶರ್ಮಾ ಪತ್ನಿ ರಿತಿಕಾ ಹಾಗೂ ಮಗು ಸಮೈರಾ ಕೂಡ ಕಾಣಿಸಿಕೊಂಡಿದ್ದರು. ಇದಕ್ಕೂ ಮುನ್ನ ರೋಹಿತ್ ಶರ್ಮಾ ಅವರು ಪ್ರತಿಯೊಬ್ಬರು ಭಾನುವಾರ ರಾತ್ರಿ ಬಾಲ್ಕನಿಗೆ ಬಂದು 9 ಗಂಟೆ 9 ನಿಮಿಷ ಸರಿಯಾದ ಸಮಯಕ್ಕೆ ದೀಪ ಬೆಳಗಿಸಿ ಎಂದು ಟ್ವಿಟರ್‌ನಲ್ಲಿ ಮನವಿ ಮಾಡಿಕೊಂಡಿದ್ದರು.
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ 