ಬಂದ ಪುಟ್ಟ ಹೋದ ಪುಟ್ಟದಂತಾಗಿ ಹೋದ ಚಿಚಖಂಡಿ ಸೇತುವೆ ಕಥೆ
ರಸ್ತೆ ಸಂಪರ್ಕ ಕಡಿತ;ಗೋಳೋ ಎನ್ನುತ್ತಿರುವ ಗ್ರಾಮಸ್ಥರು;
ಮುಧೋಳ 02: ತಾಲ್ಲೂಕಿನ ಎಲ್ಲ ಸೇತುವೆ ಮೇಲೆ ನೀರು ಬಂದರೂ ಇದೊಂದು ಸೇತುವೆ ಇದೆ ಎಂಬ ದೈರ್ಯದಲ್ಲಿದ್ದ ಜನತೆಗೆ ಭಾನುವಾರ ಚಿಚಖಂಡಿ ರಸ್ತೆಯೂ ಬಂದಾಗಿ ಇಂದಿಗೆ ಸುಮಾರು ಐದು ದಿನಗಳಾಗುತ್ತಾ ಬಂದರೂ ಸಹ ಸಂಪರ್ಕ ಸಾಧ್ಯವಾಗಿರಲಿಲ್ಲ ಆದರೆ ಗುರುವಾರ ಬೆಳ್ಳಂಬೆಳಗ್ಗೆ ಸ್ಥಳದಲ್ಲಿಯೇ ನಿಂತ ಸಣ್ಣ ದೊಡ್ಡ ವಾಃನಗಳನ್ನು ಸೇತುವೆ ಮೇಲೆ ಹಾಯ್ದು ಚಿಚಖಂಡಿ ಸೇತುವೆ ಮೇಲೆ ಎಲ್ಲರೂ ಪ್ರಯಾಣ ಮಾಡಬಹುದು ಎಂದು ಸ್ವಯಂ ಘೋಷಣೆ ಮಾಡಿಕೊಂಡು ಹುಚ್ಚಾಟ ಮೆರೆದ ಘಟನೆ ನಡೆದಿದೆ
ಹೌದು ಇನ್ನೂ ಕನಿಷ್ಠ ಒಂದು ಪೂಟ ನೀರು ಸೇತುವೆ ಮೇಲಿದ್ದರೂ ವಾಹನಗಳ ಓಡಾಟ ಪ್ರಾರಂಭವಾದ ತಕ್ಷಣ ಅಧಿಕಾರಿಗಳು ಎಚ್ಚೆತ್ತು ಈ ಸೇತುವೆ ಹಳೆಯ ಸೇತುವೆಯಾಗಿದ್ದು ನೀರು ಕಡಿಮೆಯಾದರೂ ಸಹ ಲೋಕೋಪಯೋಗಿ ಇಲಾಖೆಯಿಂದ ಪರೀಶೀಲನೆಗೊಂಡ ನಂತರವಷ್ಟೇ ಸೇತುವೆ ಮೇಲೆ ಬಿಡಲಾಗುವದು ಎಂದು ಮುಧೋಳ ತಹಸೀಲ್ದಾರ ವಿನೋದ ಹತ್ತಳ್ಳಿ ಹಾಗೂ ಸಿಪಿಐ ಮಹದೇವ ಶಿರಹಟ್ಟಿ, ಪಿ.ಎಸ್.ಐ ಅಜೀತ ಹೊಸಮನಿ ಸಹಿತ ಲೋಕೋಪಯೋಗಿ ಇಲಾಖೆ ಎಇಇ ಎ.ಎಸ್.ಮಾಚನೂರ ಸಂಪರ್ಕವನ್ನು ಮತ್ತೆ ತಡೆ ಹಿಡಿದರು.ಇದರಿಂದ ಮತ್ತೆ ಜನರಿಗೆ ನಿರಾಸೆ ಉಂಟಾಯಿತು.
ಯಾವೂದೇ ಅನಾಹುತಕ್ಕೆ ಕಾರಣವಾಗಬಾರದೆಂದು ಈ ನಿರ್ದಾರಕ್ಕೆ ಬರಲಾಗಿದ್ದು ಮತ್ತೆ ಹಿಡಕಲ್ ಜಲಾಶಯದಿಂದ ನೀರು ಬರುತ್ತಿದ್ದು ಜನರು ಯಾವೂದೇ ಕಾರಣಕ್ಕೂ ಸೇತುವೆ ಮೇಲೆ ಪ್ರಯಾಣ ಮಾಡಬಾರದು ಎಂದು ತಹಸೀಲ್ದಾರ ಸುದ್ದಿಗಾರರಿಗೆ ಹೇಳಿದರು.
ತರಕಾರಿ ಬೆಳೆದ ರೈತರ ಗೋಳು; ಬೆಳಗಾವಿ ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಮಳೆ ಹಿಡಕಲ್ ಜಲಾಶಯದಿಂದ ನಿತ್ಯ ಬಿಡುತ್ತಿರುವ ನೀರಿನಿಂದಾಗಿ ಮುಧೋಳ ತಾಲ್ಲೂಕಿನ ಎಲ್ಲ 12 ಸೇತುವೆಗಳ ಮೇಲೆ ನೀರು ನಿಂತಿದ್ದು ಸುಮಾರು ಗ್ರಾಮಗಳ ಸಂಪರ್ಕ ಕಡಿತಗೊಂಡು ಗೋಳೋ ಎನ್ನುವ ಸ್ಥಿತಿ ನಿರ್ಮಾಣವಾಗಿದ್ದು, ಕಬ್ಬಿನ ಜೊತೆಗೆ ಸಹಕಾರವಾಗಲಿ ಎಂದು ಬೆಳೆದ ಶೇ 30ರಷ್ಟು ತರಕಾರಿ ಯಾದವಾಡ ಚಿಚಖಂಡಿ ಸೇತುವೆ ಈ ಕಡೆಗಿನ ರೈತರು ಬೆಳೆಯುತ್ತಿದ್ದು ಈಗ ಸಂಕರ್ ಕಡಿತದಿಂದ ದಾರಿಯೇ ತೋಚದಂತಾದ ಸ್ಥಿತಿ ನಿರ್ಮಾಣವಾಗಿದೆ. ಘಟಪ್ರಭಾ ನದಿ ನೀರು ಅಷ್ಟ ದಿಕ್ಕುಗಳಲ್ಲಿ, ದಿಗ್ಧಂಧನ ಹಾಕಿರುವುದರಿಂದ ಬೆಳೆದ ತರಕಾರಿ ಮಾರುಕಟ್ಟೆಗೆ ಸಾಗಿಸಲು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಪ್ರವಾಹದಿಂದ ರಸ್ತೆ ಸಂಪರ್ಕ ಬಂದ್ ಆಗಿದೆ. ಇದರ ನಡುವೆ ಮಾರುಕಟ್ಟೆಯಲ್ಲಿ ತರಕಾರಿ ಬೆಲೆ ಪಾತಾಳಕ್ಕೆ ಕುಸಿದ ಪರಿಣಾಮ ತರಕಾರಿ ಬೆಳೆಗೆ ಖರ್ಚಾದ ಹಣ ಕೈಗೆ ಬಾರದ ಸ್ಥಿತಿ ನಿರ್ಮಾಣವಾಗಿದೆ. ಅನಿವಾರ್ಯವಾಗಿ ಮುಧೋಳದಲ್ಲಿಯೇ ಮಾರಲುಮುಂದಾದರೆ 70 ಕಿಮೀ ಸುತ್ತುವ ಸ್ಥಿತಿ ಉಂಟಾಗಿದೆ. ಆದರೆ ಇದೀಗ ಯಾದವಾಡ ಸೇತುವೆ, ಚಿಂಚಖಂಡಿ ಸೇತುವೆ, ವಜ್ಜರಮಟ್ಟಿಯ ಮಡಿಹಳ್ಳ ಸೇತುವೆ ಎಲ್ಲವೂ ಬಂದಾಗಿವೆ. ಇದರಿಂದ ರೈತರು ಹಾಗೂ ಗ್ರಾಹಕರು ಪರದಾಡುವಂತಾಗಿದೆ.