ಶೈಕ್ಷಣಿಕ ಗುಣಮಟ್ಟ ಹೆಚ್ಚಿಸಲು ಸಂಶೋಧನಾ ಪ್ರಸ್ತಾವನಾ ಪ್ರಸ್ತುತಿ ಸ್ಪರ್ಧೆ
Research proposal presentation competition to enhance educational quality
ಲೋಕದರ್ಶನ ವರದಿ
ಧಾರವಾಡ 14 : ಬಹುಶಾಸ್ತ್ರಿಯ ವಿಕಾಸ ಸಂಶೋಧನಾ ಕೇಂದ್ರ ಧಾರವಾಡವು ಡಾ. ಬಿ.ಆರ್. ಅಂಬೇಡ್ಕರ್ ಅವರ 135ನೇ ಜನ್ಮ ವಾರ್ಷಿಕೋತ್ಸವದ ಅಂಗವಾಗಿ, ಯುವ ಸಂಶೋಧಕರು, ವಿದ್ಯಾವಂತರ ಹಾಗೂ ಶಿಕ್ಷಕರಲ್ಲಿ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸುವ ಉದ್ದೇಶದಿಂದ 2026ರ ಮೇ 14ರಂದು ಬೆಳಿಗ್ಗೆ 10.00 ಗಂಟೆಗೆ ಕೇಂದ್ರದ ಸಭಾಂಗಣದಲ್ಲಿ “ಸಂಶೋಧನಾ ಪ್ರಸ್ತಾವನಾ ಪ್ರಸ್ತುತಿ ಸ್ಪರ್ಧೆ”ಯನ್ನು ಆಯೋಜಿಸಿತ್ತು. ಕಾರ್ಯಕ್ರಮಕ್ಕೆ ತೀಪುಗಾರರಾಗಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಮನೋವಿಜ್ಞಾನ ವಿಭಾಗದ ಪ್ರಾಧ್ಯಾಪಕರಾದ ಡಾ. ತ್ರಿವೇಣಿ ಎಸ್., ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ಡಾ. ರಂಗಸ್ವಾಮಿ ಡಿ. ನಾಯಕ್ ಹಾಗೂ ಭಾರತೀಯ ತಾಂತ್ರಿಕ ಸಂಸ್ಥೆಯ ಪ್ರಾಧ್ಯಾಪಕರಾದ ಡಾ. ಗೋಪಾಲ್ ಶರಣ್ ಪರಾಶರಿ ಅವರನ್ನು ಆಹ್ವಾನಿಸಲಾಗಿತ್ತು.
ಮಾನ್ಯ ತೀಪುಗಾರರು ಈ ಕಾರ್ಯಕ್ರಮವನ್ನು ಅತ್ಯಂತ ಮೆಚ್ಚುಗೆ ವ್ಯಕ್ತಪಡಿಸಿ, ಸಂಶೋಧನಾ ಪ್ರಸ್ತಾವನಾ ಪ್ರಸ್ತುತಿ ಸ್ಪರ್ಧೆಯು ಯುವ ಸಂಶೋಧಕರಿಗೆ ಡಾ. ಬಿ.ಆರ್. ಅಂಬೇಡ್ಕರ್ ಅವರ ಪರಿವರ್ತನಾ ದೃಷ್ಟಿಕೋಣವನ್ನು ಅರ್ಥೈಸಿಕೊಳ್ಳಲು ಮತ್ತು ಚರ್ಚಿಸಲು ಮಹತ್ವದ ಶೈಕ್ಷಣಿಕ ವೇದಿಕೆಯನ್ನು ಒದಗಿಸುತ್ತದೆ ಎಂದು ಅಭಿಪ್ರಾಯಪಟ್ಟರು. ಬಂದ ಪ್ರಸ್ತಾವನೆಗಳ ಉನ್ನತ ಗುಣಮಟ್ಟ ಹಾಗೂ ವಿಶ್ಲೇಷಣಾತ್ಮಕ ಆಳವನ್ನು ಅವರು ಶ್ಲಾಘಿಸಿದರು. ಇಂತಹ ಕಾರ್ಯಕ್ರಮಗಳು ಸಾಮಾಜಿಕ ನ್ಯಾಯ ಮತ್ತು ಸಮಾವೇಶಿತ ಅಭಿವೃದ್ಧಿಯ ಕುರಿತು ತತ್ವಾಧಾರಿತ ಸಂಶೋಧನೆ ಹಾಗೂ ವಿಮರ್ಶಾತ್ಮಕ ಚಿಂತನೆಗೆ ಉತ್ತೇಜನ ನೀಡುತ್ತವೆ ಎಂದು ತಿಳಿಸಿದರು. ಸಂವಿಧಾನಾತ್ಮಕ ಆದರ್ಶಗಳು ಮತ್ತು ಸಮಕಾಲೀನ ಶೈಕ್ಷಣಿಕ ಚರ್ಚೆಗಳ ನಡುವಿನ ಅಂತರವನ್ನು ಕಡಿಮೆ ಮಾಡುವ ಉದ್ದೇಶದಿಂದ ಅರ್ಥಪೂರ್ಣ ಬೌದ್ಧಿಕ ಚಟುವಟಿಕೆಗಳನ್ನು ನಿರಂತರವಾಗಿ ಆಯೋಜಿಸುತ್ತಿರುವ ಕೇಂದ್ರದ ಪ್ರಯತ್ನವನ್ನು ಅವರು ಪ್ರಶಂಸಿಸಿದರು.
ಸಿ.ಎಮ್.ಡಿ.ಆರ್ಸಂಸ್ಥೆಯಕು.ಶ್ವೇತಾ ನೀಲಣ್ಣವರ ಅವರು “ಗ್ರಾಮೀಣ ಮಹಿಳೆಯರಲ್ಲಿ ಶಿಕ್ಷಣ, ಆರೋಗ್ಯ ಮತ್ತು ಆರ್ಥಿಕ ಅಭಿವೃದ್ಧಿ: ಕಲ್ಯಾಣ ಕರ್ನಾಟಕದ ಆಧಾರಿತ ಅಧ್ಯಯನ” ಎಂಬ ವಿಷಯದ ಸಂಶೋಧನಾ ಪ್ರಸ್ತಾವನೆಯನ್ನು ಮಂಡಿಸಿ ರೂ.10,000/- ನಗದು ಬಹುಮಾನ ಸಮೇತ ಪ್ರಥಮ ಬಹುಮಾನವನ್ನು ಪಡೆದರು. ಸ್ವಾಮಿ ವಿವೇಕಾನಂದ ಯುಥ್ ಮೂಮೆಂಟಇಂದ ಡಾ. ಮೋಹನ್ ತಂಬಾಡ ಅವರು “ಪ್ಯಾಲಿಯೇಟಿವ್ ಕೇರ್ನಲ್ಲಿ ಆರೈಕೆದಾರರು, ಕುಟುಂಬ ಸದಸ್ಯರು ಹಾಗೂ ಸ್ವಯಂಸೇವಕರ ತರಬೇತಿ ಮತ್ತು ಆರೈಕೆ ಹೊರೆ ಮೌಲ್ಯಮಾಪನ: ರೋಗಿಗಳು ಮತ್ತು ಆರೈಕೆದಾರರ ಜೀವನಮಟ್ಟ ಸುಧಾರಣೆಗೆ ಬಹುಕೇಂದ್ರ ಅಧ್ಯಯನ” ಎಂಬ ಸಂಶೋಧನಾ ಪ್ರಸ್ತಾವನೆಯನ್ನು ಮಂಡಿಸಿದರು.
24 ಗಂಟೆಯಲ್ಲಿ ಕಾರು ಕಳ್ಳತನ ಪ್ರಕರಣ ಭೇಧಿಸಿದ ಪೊಲೀಸರು : ಖದೀಮರ ಪತ್ತೆಗಾಗಿ ಶೋಧ
ಗಡಿ ಮರಾಠಿ ಶಾಲೆಗಳಲ್ಲಿ ಕನ್ನಡ ಕಹಳೆ: 7 ಕನ್ನಡ ಪ್ರಾಥಮಿಕ, 2 ಪ್ರೌಡ ಶಾಲೆಗಳಿಗೆ ರಾಜ್ಯ ಸರಕಾರ ಗ್ರಿನ್ ಸಿಗ್ನಲ್
ಅಂತರಾಜ್ಯ ಖದೀಮನ ಬಂಧನ : 45.56 ಲಕ್ಷ ಮೌಲ್ಯದ ಚಿನ್ನಾಭರಣ, ದ್ವಿಚಕ್ರ ವಾಹನ ವಶಕ್ಕೆ
ಹಿಡಕಲ್ ಹಿನ್ನೀರಿನಲ್ಲಿ ಮುಳುಗಿದ್ದ ಹುನ್ನೂರು ವಿಠಲ ಮಂದಿರ ಜಲದಿಗ್ಭಂಧನದಿಂದ ಮುಕ್ತಿ
2027ರ ಮೇ. 4ರಿಂದ ಸಂಕೇಶ್ವರ ಮಹಾಲಕ್ಷ್ಮೀ ಜಾತ್ರಾ ಮಹೋತ್ಸವ ಪ್ರಾರಂಭ
48 ಗಂಟೆಯಲ್ಲಿ ಮನೆಗಳ್ಳರಿಬ್ಬರ ಬಂಧನ : 21,02 ಲಕ್ಷ ಮೌಲ್ಯದ 154.6 ಗ್ರಾಂ ಚಿನ್ನಾಭರಣ ವಶಕ್ಕೆ 