ಮುಧೋಳ

ಸಾಹಿತ್ಯ ಲೋಕಕ್ಕೆ ರನ್ನನ ಕೊಡುಗೆ ಅಪಾರ: ಡಾ.ತಿಮ್ಮಣ್ಣ ಅರಳಿಕಟ್ಟಿ

ಸಾಹಿತ್ಯ ಲೋಕಕ್ಕೆ ರನ್ನನ ಕೊಡುಗೆ ಅಪಾರ: ಡಾ.ತಿಮ್ಮಣ್ಣ ಅರಳಿಕಟ್ಟಿ

ಮುಧೋಳ 25: ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಕನ್ನಡ ಸಾಹಿತ್ಯ ಭವನದ ಆವರಣದಲ್ಲಿ ಮೇಘಮೈತ್ರಿ ಕನ್ನಡ ಸಾಹಿತ್ಯ ಸಂಘ (ರಿ) ಕಮತಗಿ ಹಾಗೂ ಮುಧೋಳದ ಸಂಘ-ಸಂಸ್ಥೆಗಳ ಆಶ್ರಯದಲ್ಲಿ "ಕವಿ ಚಕ್ರವರ್ತಿ ರನ್ನ ಸಾಹಿತ್ಯ ಸಂಭ್ರಮ" ಕಾರ್ಯಕ್ರಮದಲ್ಲಿ ವಿಶೇಷವಾಗಿ ಹಮ್ಮಿಕೊಂಡ ಈ ಕಾರ್ಯಕ್ರಮ ನಾಡಿಗೆ ಮಾದರಿ, ಕನ್ನಡ ಸಾಹಿತ್ಯ ಲೋಕಕ್ಕೆ ರನ್ನ ಕೊಟ್ಟ ಕೊಡುಗೆ ಅಪಾರ ಅಂದಿನಿಂದ ಇಂದಿನ ವರೆಗೂ ಯಾರು ಏನನ್ನೇ ಬರೆದರೂ ರನ್ನ ಬರೆದದ್ದೆ ಅನ್ನಿಸುವಷ್ಟು ಆಗಲೇ ಆಗಲೇ ಬರೆದಿದ್ದಾರೆ ಎಂದು ತಿಮ್ಮಣ್ಣ ಅರಳಿಕಟ್ಟಿ ಅವರು ಹೇಳಿದರು. ಇದೆ ಸಂಧರ್ಭದಲ್ಲಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಡಾ. ಶಿವಾನಂದ ಕುಬಸದ ಮೇಘಮೈತ್ರಿ ತಂಡ ಒಂದಿಲ್ಲೊಂದು ವಿಶೇಷ ಹಾಗೂ ವಿಭಿನ್ನ ಕಾರ್ಯಕ್ರಮ ಮಾಡುತ್ತ ನಾಡಿನ ಜನತೆಯ ಪ್ರೀತಿಗೆ ಪಾತ್ರವಾಗಿದೆ ಆದ್ದರಿಂದ ರಮೇಶ ಕಮತಗಿಗೆ ಮುಧೋಳದ ಎಲ್ಲಾ ಹಿರಿಯರು ಹಾಗೂ ಸಂಘ-ಸಂಸ್ಥೆಯ ಪದಾಧಿಕಾರಿಗಳು ಸಹಕಾರ ನೀಡಿದ್ದೇವೆ ನಮ್ಮ ಸಹಕಾರವನ್ನು ಹುಸಿಗೊಳಿಸದೇ ಕಾರ್ಯಕ್ರಮ ಅತ್ಯಂತ ವಿಶೇಷವಾಗಿ ಮಾಡಿ ನಮ್ಮೆಲ್ಲರ ಮನಸ್ಸು ಗೆದ್ದುಬಿಗಿದ್ದಾನೆ ಎಂದರು.ನಂತರ ಕವಿ ಚಕ್ರವರ್ತಿ ರನ್ನನ ಕುರಿತು ವಿಶೇಷ ಉಪನ್ಯಾಸವನ್ನು ಪ್ರಚಾರ್ಯ ಮೈನುದ್ದೀನ್ ರೇವಡಿಗಾರ ವಿಚಾರಗೋಷ್ಠಿ ಅಧ್ಯಕ್ಷತೆ ಸಿದ್ದು ದಿವಾನ್ ಆಶಯ ನುಡಿಯನ್ನ ಡಾ. ಪ್ರಕಾಶ್ ಖಾಡೆ ಮಾತನಾಡಿದರು, ರೇವಡಿಗಾರ ಅವರ ರನ್ನನ ಸಾಹಸ ಭೀಮ ವಿಜಯಂ ಎಂಬ ಪುಸ್ತಕ ಲೋಕಾರೆ​‍್ಣಯಾಯಿತು ಹಾಗೂ ಕವಿಗೋಷ್ಠಿಯಲ್ಲಿ ರನ್ನನ ಕುರಿತು ಬರೆದ ವಿವಿಧ ಕವಿತೆಗಳನ್ನು ವಿವಿಧ ಲೇಖಕರು ವಾಚನ ಮಾಡಿದರು ಅಧ್ಯಕ್ಷತೆಯನ್ನು ಪ್ರಕಾಶ ವಸ್ತ್ರದ ಆಶಯನುಡಿಯನ್ನು ಸಿದ್ದಣ್ಣ ಬಾಡಗಿ ಮಾತನಾಡಿದರು.ಸಮಾರೋಪ ಸಮಾರಂಭದಲ್ಲಿ ಚಂದ್ರಶೇಖರ ದೇಸಾಯಿ ಸಮಾರೋಪ ನುಡಿ ಮಾತನಾಡಿ ನಾಡಿಗೆ ರನ್ನನನಂತಹ ಸಾಹಿತಿಗಳ ಹಾಗೂ ಸಾಧಕರ ವಿಶೇಷ ಕಾರ್ಯಕ್ರಮ ಮಾಡುವುದರಿಂದ ಯುವ ಪೀಳಿಗಿಗೆ ತಿಳಿಸಿದಂತಾಗುತ್ತದೆ ಆ ಕೆಲಸ ಮೇಘಮೈತ್ರಿಯಿಂದ ನಡೆಯಿತ್ತಿದೆ ಎಂದರು. ಅಧ್ಯಕ್ಷತೆಯನ್ನು ಹಿರಿಯ ನಾಗರೀಕ ವೇದಿಕೆಯ ಅಧ್ಯಕ್ಷ ಕಲ್ಲಪ್ಪಣ್ಣ ಸಬರದ ವಹಿಸಿದ್ದರು ಇದೆ ಸಂಧರ್ಭದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳ ಜೊತೆಗೆ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ ಕವಿ ಚಕ್ರವರ್ತಿ ರನ್ನ ಪ್ರಶಸ್ತಿ ಮತ್ತು ಮಹಿಳಾ ಸಾಧಕರಿಗೆ ದಾನ ಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಜರಗಿತು. 

ಕಾರ್ಯಕ್ರಮದಲ್ಲಿ ಧ್ವಜರೋಹಣವನ್ನು ರಮೇಶ ನಿಡೋಣಿ, ಸಸಿ ನೆಡುವ ಕಾರ್ಯಕ್ರಮವನ್ನು ಸಂಗಮೇಶ ನೀಲಗುಂದ, ಪುಸ್ತಕ ಮಳಿಗೆಯನ್ನು ಮಹದೇವ ಮಡಿವಾಳರ ಉದ್ಘಾಟಿಸಿದರು,ಮುಧೋಳ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಆನಂದ ಪೂಜಾರಿ ಸ್ವಾಗತಿಸಿದರು, ಮೇಘಮೈತ್ರಿ ಸಂಘದ ಅಧ್ಯಕ್ಷ ರಮೇಶ ಕಮತಗಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. 

ಈ ಸಮಯದಲ್ಲಿ ಸುರೇಶ ಕೋರಕೊಪ್ಪ,ಅಶೋಕ ಕುಲಕರ್ಣಿ, ಕನ್ನಡ ಸಾಹಿತ್ಯ ಪರಿತ್ತಿನ ಜಿಲ್ಲಾಧ್ಯಕ್ಷ ಶಿವಾನಂದ ಶೆಲ್ಲಿಕೇರಿ, ದಾಕ್ಷಾಯಣಿ ಮಂಡಿ, ಎಸ್‌. ಎಸ್‌. ಪುರವಾರ, ರಮೇಶ ಅರಕೇರಿ, ವೆಂಕಟೇಶ ಗುಡೆಪ್ಪನವರ, ಆಯ್‌. ಎಂ. ಧಾರವಾಡಮಠ, ಪಿ. ಬಿ. ಹಿರೇಮಠ, ಎಸ್‌. ಎಂ. ರಾಮದುರ್ಗ ಇನ್ನಿತರರರು ಇದ್ದರು.ಬಾಕ್ಸ್‌ ಮಾಡಿ ಹಾಕಿ :ಕವಿಗೋಷ್ಠಿಯಲ್ಲಿ ರನ್ನನ ಕುರಿತು ಕವಿತೆ ವಾಚಿಸಿದವರು :ಸಾಗರ ಝಂಡೆನ್ನವರ, ಗೀರೀಜಾ ಪಾಟೀಲ, ಪ್ರೊ. ಸಿದ್ದು ಸಾವಳಸಂಗ, ಭೀಮಸೇನ ಚಿಂಪಲಿ, ವಿಶಾಲಾಕ್ಷಿ ಕಾಳೆ, ಜಯಪ್ರಕಾಶ ಆನೂರ, ಕೆ. ಬಿ. ಮೊರಬ, ಮಹಾಂತೇಶ ಕುಂಬಾರ, ಮೌರ್ಯ ಪೂಜಾರಿ, ಶೌರ್ಯ ಪೂಜಾರಿ 


ಸುದ್ದಿ ಓದಿ