ಮುಧೋಳ

ರಾಜಮಾನೆಯವರ ರಾಜಿಯಾಗದ ರಕ್ತದ ಕಣ, ಅಕ್ಷರದರಸಿ ಪುಸ್ತಕ ಬಿಡುಗಡೆ

ರಾಜಮಾನೆಯವರ ರಾಜಿಯಾಗದ ರಕ್ತದ ಕಣ, ಅಕ್ಷರದರಸಿ ಪುಸ್ತಕ ಬಿಡುಗಡೆ

ಮುಧೋಳ: ಮುಧೋಳದ ಕ.ಸಾ.ಪ ಭವನದಲ್ಲಿ ರನ್ನಭೂಮಿ ಪ್ರಕಾಶನ ಮತ್ತು ಕ.ಸಾ.ಪ ಮುಧೋಳ ಸಹಯೋಗದಲ್ಲಿ ನೇತ್ರಾವತಿ ಸುರೇಶ ರಾಜಮಾನೆಯವರ ಸುಪುತ್ರಿ ಅಕ್ಷರಳ ಪ್ರಥಮ ಹುಟ್ಟುಹಬ್ಬದ ಪ್ರಯುಕ್ತ ಸುರೇಶ ಎಲ್‌.ರಾಜಮಾನೆಯವರ ರಾಜಿಯಾಗದ ರಕ್ತದ ಕಣ ಮತ್ತು ಅಕ್ಷರದರಸಿ ಎಂಬ ಎರಡು ಕೃತಿಗಳು ದಿ. 6ರಂದು ಬಿಡುಗಡೆಯಾದವು.  

ಮೂರುವರೆ ವರ್ಷದ ವಿಶ್ವಾಸ ರಾಜಮಾನೆ ಸಂವಿಧಾನ ಪೀಠಿಕೆಯನ್ನು ಭೋದಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಅಧ್ಯಕ್ಷತೆ ವಹಿಸಿದ್ದ ಡಾ.ಶಿವಾನಂದ ಕುಬಸದ ಮಾತನಾಡಿ ರನ್ನನ ನೆಲದ ಗಂಭೀರ ಸಾಹಿತ್ಯದ ಕನ್ನಡಿಯಾಗಿ ಇಂದಿನ ಸುರೇಶ ರಾಜಮಾನೆಯವರ ರಾಜಿಯಾಗದ ರಕ್ತದ ಕಣ ಕವನಸಂಕಲನ ಬಿಂಬಿಸಿಕೊಳ್ಳುತ್ತದೆ. ಹಾಗೂ ಅರಳುವ ಮಕ್ಕಳ ಎದೆಗೆ ಇಳಿಯುವ ಅಕ್ಷರದರಸಿ ಎಂಬ ಪುಸ್ತಕ ಮಕ್ಕಳ ಜ್ಞಾನಕ್ಕೆ ತಕ್ಕುದಾದುದಾಗಿದೆ ಎಂದರು.  

ಉದ್ಘಾಟನೆಯನ್ನು ನೆರವೇರಿಸಿದ ಸಾಹಿತಿ ಡಾ.ಲಲಿತಾ ಕೆ.ಹೊಸಪ್ಯಾಟಿಯವರು ಮಾತನಾಡಿ ರನ್ನಬೆಳಗಲಿಯ ರಾಜ’ಮಾನೆ ಇಂದು ರನ್ನಭೂಮಿಯ ಕವಿರಾಜ’ನಾಗಿ ಮನೆಮಾತಾಗಿದ್ದಾರೆ. ಮನೆಯ ಗೋಡೆಗಳ ನಡುವೆ ನಡೆಯುವ ಕಾರ್ಯಕ್ರಮಗಳು ಅದರಾಚೆಗೂ ವಿಸ್ತರಿಸಿಕೊಂಡು ಸಮಾಜಕ್ಕೆ ಮಾದರಿಯಾಗಿ ನಿಲ್ಲುಬೇಕು ಎಂಬುದನ್ನು ಸುರೇಶ ರಾಜಮಾನೆಯವರ ಈ ಕಾರ್ಯಕ್ರಮ ಸಾದರಪಡಿಸಿದೆ. ಕವಿತೆಗಳಿಗೆ ತನ್ನದೆಯಾದ ಶಕ್ತಿ ಇರುತ್ತದೆ ಅದು ಅರ್ಥವಾದರೆ ಅದರಷ್ಟು ಸಮೃದ್ಧವಾದ ಆದರ್ಶಗಳು ಮತ್ತೆಲ್ಲಿಯೂ ದಕ್ಕುವುದಿಲ್ಲ. ಸುರೇಶ ರಾಜಮಾನೆಯವರ ಕವಿತೆಗಳು ಸಮಾಜಕ್ಕೆ ದಕ್ಕಬಹುದಾದ ಮತ್ತು ವ್ಯವಸ್ಥೆಯನ್ನು ಎಚ್ಚರಿಸಬಹುದಾದ ನಿಲ್ಲುವಿನಲ್ಲಿ ನಿಲ್ಲುವಂತಹ ಗಟ್ಟಿತನವನ್ನು ಹೊಂದಿವೆ. ಅಕ್ಷರದರಸಿ ಬೆಳೆದು ಹೆಮ್ಮರವಾಗಲಿ ರಾಜಿಯಾಗದ ರಕ್ತದ ಕಣ ಎಲ್ಲರ ಜೀವ ಕಣವಾಗಲಿ ಎಂದರು.  

ಪುಸ್ತಕ ಬಿಡುಗಡೆಗೊಳಿಸಿದ ಡಾ.ಪ್ರಕಾಶ ಖಾಡೆ ಮಾತನಾಡಿ ಕನಸುಗಾರರಿಂದ ಮಾತ್ರ ಕವಿತೆ ಮತ್ತು ಕವಿತ್ವ ನಿರಂತರತೆಯನ್ನು ಕಾಯ್ದುಕೊಳ್ಳುತ್ತದೆ ಅಂತಹ ಕನಸುಗಾರರಲ್ಲಿ ರನ್ನಬೆಳಗಲಿಯ ಯುವ ಕವಿ ಸುರೇಶ ರಾಜಮಾನೆಯವರು ಮುಂಚೂಣಿಯ ಸ್ಥಾನದಲ್ಲಿದ್ದಾರೆ ಎಂದರು. ಕನ್ನಡ ಸಾಹಿತ್ಯದ ಎಲ್ಲ ಘಟ್ಟಗಳೂ ಈ ತರಹದ ಒಂದು ವಿಸ್ತಾರತೆಯನ್ನು ಪಡೆದುಕೊಳ್ಳುತ್ತಲೇ ಇವೆ. ಕವಿಯ ಬರಹ ಕಾವ್ಯವಾಗಿ ಬದಲಾದಾಗ ಅದು ಸಮಾಜದ ಕನ್ನಡಿಯಾಗಿ ಮಾರ​‍್ಾಡಾಗುತ್ತದೆ ಆ ಕನ್ನಡಿಯಲ್ಲಿ ಭವನೆಗಳು ಮತ್ತು ರೋಚಕ ವಿಷಯಗಳು ನಮ್ಮನ್ನು ಆವರಿಸಿಕೊಳ್ಳುತ್ತವೆ. ಕವಿತೆ ಸಮಾಜದ ಭಾಗವಾಗಿ ನಿಂತಾಗ ಕವಿ ಎತ್ತರಕ್ಕೇರುತ್ತಾನೆ ಎಂದರು.  

ಪುಸ್ತಕ ಪರಿಚಯಿಸಿದ ಶಿವಲಿಂಗ ಸಿದ್ನಾಳ ಸಮಾಜದಲ್ಲಿನ ಅಸಮಾನತೆಗಳನ್ನು ಓರೆಕೋರೆಗಳನ್ನು ಸಮರ್ಥವಾಗಿ ಕಾವ್ಯದ ಮೂಲಕ ಕಟುವಾಗಿ ಟೀಕಿಸುವುದಲ್ಲದೆ. ಸಾತ್ವಿಕ ಸಿಟ್ಟನ್ನು ಕವಿತೆಗಳ ಮೂಲಕ ಸುರೇಶ ರಾಜಮಾನೆಯವರು ಈ ರಾಜಿಯಾಗದ ರಕ್ತದ ಕಣ ಕವನಸಂಕಲನದ ಮೂಲಕ ಹೊರಹಾಕಿದ್ದಾರೆ ಎಂದರು. ಅಕ್ಷರದರಸಿಯನ್ನು ಪರಿಚಯಿಸಿದ ಜಹಾನ ಆರಾ ಕೋಳೂರು ಇವರು ಅಕ್ಷರದರಸಿ ಪುಸ್ತಕವು ಕೇವಲ ಮಕ್ಕಳಿಗಷ್ಟೇ ಅಲ್ಲದೆ ಸ್ಪರ್ಧಾತ್ಮಕ ನೆಲೆಯಲ್ಲಿಯೂ ತನ್ನ ಗಟ್ಟಿ ಚಾಪನ್ನು ಮೂಡಿಸುವಂತಹದ್ದು. ಕನ್ನಡ ಸಾಹಿತ್ಯದ ಮಹಿಳಾ ಸಾಹಿತಿಗಳ ಮಾಹಿತಿ ಹೊಂದಿರುವ ಈ ಹೊತ್ತಿಗೆ ಮಕ್ಕಳ ಪಾಲಿನ ಅಚ್ಚುಮೆಚ್ಚಿನ ಓದುಗರ ಪಾಲಿನ ಜ್ಞಾನದ ಬುತ್ತಿಯಾಗುವದರಲ್ಲಿ ಸಂಶಯವಿಲ್ಲ ಎಂದರು.  

ಮಂಗಳೂರಿನ ರಾಜಲಕ್ಷ್ಮಿ ಎನ್ ಕೆ ನಿವೃತ್ತ ಉಪನ್ಯಾಸಕರು, ಬೆಂಗಳೂರಿನ ಕಲಾವಿದ ಪಂಚು ಪ್ರಮೋದ್ ಕನ್ನಡ ಸಾಹಿತ್ಯ ಪರಿಷತ್ ಮುಧೋಳ ತಾಲೂಇನ ಅಧ್ಯಕ್ಷರು ಉಪಸ್ಥಿತಿಯಿದ್ದು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕೃತಿಗಳ ರಚಕಾರರಾದ ಸುರೇಶ ರಾಜಮಾನೆ ಪ್ರಕಾಶಕರಾದ ನೇತ್ರಾ ಸುರೇಶ ರಾಜಮಾನೆ, ಶಶಿ ಟ್ರಸ್ಟ ನ ಅಧ್ಯಕ್ಷರಾದ ಚಂದ್ರಶೇಖರ ದೇಸಾಯಿ ವೇಧಿಕಯನ್ನಲಂಕರಿಸಿದ್ದರು. ಇದೆ ವೇಳೆ ಸುರೇಶ ರಾಜಮಾನೆಯವರಿಗೆ ಅಕ್ಷರಜ್ಞಾನವನ್ನು ಉಣಬಡಿಸಿದ ಪ್ರಾಥಮಿಕ ಶಿಕ್ಷಣವನ್ನು ನೀಡಿದ ರಾಜು ಬಣಜವಾಡ ಮತ್ತು ಪದ್ಮಾವತಿ ಹಜಾರೆ ಇವರನ್ನು ರನ್ನಭೂಮಿ ಪ್ರಕಾಶನದ ಮೂಲಕ ಗೌರವಿಸಿ ಸನ್ಮಾನಿಸಲಾಯಿತು.  

ಅಕ್ಷರಾ ಸುರೇಶ ರಾಜಮಾನೆ ಇವಳ ಹುಟ್ಟುಹಬ್ಬದ ಪ್ರಯುಕ್ತ ಜ್ಯೋತಿ ಕುಂದರಗಿ ವರ ನೇತ್ರತ್ವದಲ್ಲಿ ಉಚಿತ  200 ಸಸಿ ವಿತರಣೆಯೂ ಜರುಗಿತು. ಕ.ಜಾ.ಪ ವಲಯ ಘಟಕ ರನ್ನಬೆಳಗಲಿಯ ಅಧ್ಯಕ್ಷ ರಾಘವೇಂದ್ರ ನೀಲನ್ನವರ ಸ್ವಾಗತಿಸಿದರು. 

ನೀಲಮ್ಮ ವಿಠ್ಠಲ ರಾಮದುರ್ಗ ಪ್ರಾರ್ಥಿಸಿದರು. ಬಸವರಾಜ ಬಳ್ಳಾರಿ, ಮಹೇಶ ದಿವಾಣ ನಿರೂಪಿಸಿದರು. ಬಸವರಾಜ ಬೀಷ್ಟಣ್ಣವರ, ವಿಠ್ಠಲ ಕಟಗಿ, ಮಂಜುನಾಥ ದಳವಾಯಿ, ಮಹಾದೇವ ಕುಲಗೋಡ, ಪ್ರಕಾಶ ಕೊಣ್ಣೂರು, ಕುಂತುನಾಥ್, ಜಯವಂತ ಹೊಸಟ್ಟಿ, ಮಾಯಪ್ಪ ಹೊಸೂರ್, ಮಹಾಂತೇಶ್ ಕುಂಬಾರ್, ಶಿವಾನಂದ ಗೋಲಶೆಟ್ಟಿ, ಆರ್ ಎಮ್‌.ಸುತಾರ ಚಿರಂಜೀವಿ ರೋಡ್ಕರ್ , ಪ್ರಕಾಶ ಡಂಗಿ, ಮುತ್ತು ಬಳ್ಳಾ, ರವಿ ಠಂಕಸಾಲಿ, ವೈ ಎಸ್ ಮೇತ್ರಿ, ನಾಗರಾಜ ಬಟಾಟೆಪ್ಪಗೋಳ, ರಮೇಶ ಅರಕೇರಿ, ಸಿದ್ದು ದಿವಾಣ, ಸಿದ್ದಣ್ಣ ಬಾಡಗಿ, ಮತ್ತು ಅಪಾರ ಸಾಹಿತ್ಯಾಸಕ್ತರು, ಸ್ನೇಹಿತರು, ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಡೋಣಿ ತೋಟ ಮೆಟಗುಡ್ಡ ಶಾಲೆಯ ಮಕ್ಕಳು ಹಾಗೂ ರನ್ನಬೆಳಗಲಿ ಮತ್ತು ಮುಧೋಳದ ವಿವಿಧ ಸಂಘ ಸಂಸ್ಥೆಗಳ ಅಧ್ಯಕ್ಷರುಗಳು ಮತ್ತು ಪದಾಧಿಕಾರಿಗಳು ಕಾರ್ಯಕ್ರಮಕ್ಕೆ ಸಾಕ್ಷಿಯಾದರು. 


ಸುದ್ದಿ ಓದಿ