ಕುಕನೂರ್

ಎಟಿಎಂನಲ್ಲಿ ಹಣ ಹಾಕಿ ಸಮರ್ಪಕ ಸೇವೆ ಒದಗಿಸಿ : ರೈತ ಸಂಘ ಆಗ್ರಹ

ಎಟಿಎಂನಲ್ಲಿ ಹಣ ಹಾಕಿ ಸಮರ್ಪಕ ಸೇವೆ ಒದಗಿಸಿ : ರೈತ ಸಂಘ ಆಗ್ರಹ

ಲೋಕದರ್ಶನ ವರದಿ 

ಕುಕನೂರು 16: ಎಟಿಎಂನಲ್ಲಿ ಹಣ ಇಲ್ಲದೆ ಸಾರ್ವಜನಿಕರು ಒಂದು ಎಟಿಎಂನಿಂದ ಇನ್ನೊಂದು ಎಟಿಎಂಗೆ ಸೋಮವಾರ ದಿವಸ ಸಂಜೆ ಪಟ್ಟಣದಲ್ಲಿ ಸಾರ್ವಜನಿಕರು ಅಲೆದಾಡಿದರು ಎಟಿಎಂನಲ್ಲಿ ಹಣವೇ ಇಲ್ಲ ಹಳ್ಳಿಯಿಂದ ಪಟ್ಟಣಕ್ಕೆ ಹಣ ತೆಗೆಯಲು ಸಾರ್ವಜನಿಕರು ಬಂದರೂ ಕೂಡ ಕುಕನೂರು ತಾಲೂಕಿನ ಯಾವ ಎಟಿಎಂ ಬಾಕ್ಸಿನಲ್ಲಿ ಹಣ ಇಲ್ಲದೇ ಸಾರ್ವಜನಿಕರು ಕಷ್ಟಕ್ಕೆ ಈಡಾದರು ಬ್ಯಾಂಕ್ ಅಧಿಕಾರಿಗಳ ನಿರ್ಲಕ್ಷದಿಂದ ಸಾರ್ವಜನಿಕರು ಬೆಸತ್ತು ಹೋಗಿದ್ದಾರೆ  ಯಾವಗಲು ಯಾರಿಗೂ ತೊಂದರೆ ಆಗದಂತೆ ನೊಡಿಕೊಂಡು ಎಟಿಎಂ ಬಾಕ್ಸಿನಲ್ಲಿ  ಹಣ ಹಾಕಬೇಕು ಎಂದು ಪ್ರೋ. ನಂಜುಂಡಸ್ವಾಮಿ ಸ್ಥಾಪಿತ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವಿ.ಆರ್‌.ನಾರಾಯಣರೆಡ್ಡಿ ಬಣದ ರೈತ ಸಂಘದ ಜಿಲ್ಲಾಧ್ಯಕ್ಷ ಅಂದಪ್ಪ ರುದ್ರ​‍್ಪ ಕೋಳೂರ ಇವರು ಸರ್ಕಾರಕ್ಕೆ ಆಗ್ರಹಿಸಿ ಮಾತನಾಡಿ ಕುಕನೂರು ತಾಲೂಕಿನ ವಿವಿಧ ಬ್ಯಾಂಕ್ ಅಧಿಕಾರಿಗಳು ಎಟಿಎಂನಲ್ಲಿ ದಿನನಿತ್ಯ ಬೆಳಿಗ್ಗೆ ಎಟಿಎಂ ಬಾಕ್ಸಿನಲ್ಲಿ ಹಣ ಹಾಕಬೇಕು ಬ್ಯಾಂಕ್ ಅಧಿಕಾರಿಗಳು ಎಟಿಎಂ  ಬಾಕ್ಸಿಗೆ ಹಣ ಹಾಕದಿದ್ದರೆ ಸಾರ್ವಜನಿಕರಿಗೆ ದಿನನಿತ್ಯ ಎಟಿಎಂ ನೆಂಬಿಕೊಂಡು ತಾಲೂಕಿಗೆ ಬಂದ ಸಾರ್ವಜನಿಕರಿಗೆ ತುಂಬಾ ತೊಂದರೆ ಆಗುತ್ತದೆ ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಅಂದಪ್ಪ ರುದ್ರ​‍್ಪ ಕೋಳೂರ ಇವರು ಸರ್ಕಾರಕ್ಕೆ ಆಗ್ರಹಿಸಿ ಮಾತನಾಡಿದರು. 


ಸುದ್ದಿ ಓದಿ