ಜಿಲ್ಲೆಯ ಆಶಾ ಕಾರ್ಯಕರ್ತೆಯರಿಂದ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ : ಡಿ.ಎಚ್‌.ಒ.ಗೆ ಮನವಿ

ಜಿಲ್ಲೆಯ ಆಶಾ ಕಾರ್ಯಕರ್ತೆಯರಿಂದ ಕೇಂದ್ರ  ಸರ್ಕಾರದ ವಿರುದ್ಧ  ಪ್ರತಿಭಟನೆ : ಡಿ.ಎಚ್‌.ಒ.ಗೆ  ಮನವಿ  Protest against the central government by ASHA workers in the district: Appeal to the DHO

ಕಾರವಾರ 05 : ಕೇಂದ್ರ ಸರ್ಕಾರದ ಅನುಮೋದನೆ, ಅನುದಾನ ಇಲ್ಲದ 9  ಪ್ರೋತ್ಸಾಹ ಧನದ ಪ್ರಮುಖ ಮಾಡ್ಯೂಲ್ಗಳ ಕೆಲಸವನ್ನು ನಿಲ್ಲಿಸುವುದಾಗಿ ಐಎಟಿಯುಸಿ ನೇತೃತ್ವದ ಆಶಾ ಕಾರ್ಯಕರ್ತರ ಸಂಘಟನೆ ಕಾರವಾರದ  ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಎದುರು ಶುಕ್ರವಾರ ಸಾಂಕೇತಿಕ ಪ್ರತಿಭಟನೆ ಮಾಡಿತು. ಆಶಾ ನಿಧಿ ತಂತ್ರಾಂಶದಲ್ಲಿ ನಿಷ್ಕ್ರಿಯಗೊಳಿಸಿದ 9  ಕೆಲಸಗಳ ಸ್ಥಗಿತ ಮಾಡುವುದಾಗಿ  ಮತ್ತು ಮೋಬೈಲ್ ಆಧಾರಿತ ಸಮಸ್ತ ಆಪ್ ಇತ್ಯಾದಿ ಆಪ್ ಗಳಲ್ಲಿ ಕೆಲಸ ಮಡದಿದಿರಲು ಜಿಲ್ಲೆಯ ಆಶಾ ಕಾರ್ಯಕರ್ತೆಯರು ನಿರ್ಧಾರ ಮಾಡಿದ್ದು, ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ ಪ್ರಕಟಿಸಿತು.  

ಆಶಾ ಕಾರ್ಯಕರ್ತೆಯರ  ಉತ್ತರ ಕನ್ನಡ ಜಿಲ್ಲಾ ಸಮಿತಿ ವತಿಯಿಂದ  ಜಿಲ್ಲಾ ಪಂಚಾಯತ್ ಸಿ.ಇ.ಓ. ದೀಲೀಶ್ ಶಶಿ ಅವರಿಗೆ ಆಶಾಗಳು  ನಿಯೋಗದಲ್ಲಿ ತೆರಳಿ ಮನವಿ ಪತ್ರ ನೀಡಿದರು.  ಈ ಸಂದರ್ಭದಲ್ಲಿ ಮಾತನಾಡಿದ ಆಶಾ ಕಾರ್ಯಕರ್ತೆಯರ ಸಂಘಟನೆಯ ಜಿಲ್ಲಾ ಅಧ್ಯಕ್ಷೆ ಪದ್ಮ ಚಲವಾದಿ, ರಾಷ್ಟ್ರೀಯ ಆರೋಗ್ಯ ಅಭಿಯಾನದ (ಓಊಒ) ಆಡಿಯಲ್ಲಿ ರಾಜ್ಯದ ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಪ್ರತಿನಿತ್ಯ ಸಾರ್ವಜನಿಕರ ಆರೋಗ್ಯ ರಕ್ಷಣೆಗಾಗಿ ಶ್ರಮಿಸುತ್ತಿರುವ ಆಶಾ ಕಾರ್ಯಕರ್ತೆಯರಿಗೆ ನೀಡಲಾಗುತ್ತಿದ್ದ ಪ್ರೋತ್ಸಾಹ ಧನದ ಪ್ರಮುಖ ಚಟುವಟಿಕೆಗಳ ಮಾಡ್ಯೂಲ್ಗಳನ್ನು ಹಾಗೂ  ಕಲ್ಯಾಣ ಸೇವೆಗಳು ಸೇರಿದಂತೆ ಒಟ್ಟು 9 ಕಾಂಪೋನೆಂಟ್ಸ್‌ ಗಳನ್ನು ಆಶಾ ನಿಧಿ ತಂತ್ರಾಂಶದಲ್ಲಿ ಏಕಾಏಕಿಯಾಗಿ ನಿಷ್ಕ್ರಿಯಗೊಳಿಸಲಾಗಿದೆ.

ರಾಜ್ಯ ಇಲಾಖೆಯು ಹೇಳಿದಂತೆ  2026-27ನೇ ಸಾಲಿನ ಪಿ.ಐ.ಪಿ (ಕಋ) ಅಡಿಯಲ್ಲಿ ಈ ಬಗ್ಗೆ ಅನುಮೋದನೆಯನ್ನು ನಿಲ್ಲಿಸಿ, ಮುಂದಿನ ಆರಿ​‍್ಪ (ಖಓಕ) ಬರುವವರೆಗೆ ಸ್ಥಗಿತಗೊಳಿಸಿ ಆದೇಶ ಮಾಡಿದ್ದಾರೆ. ಆದರೆ ಈ ಬಗ್ಗೆ ರಾಜ್ಯದ 42 ಸಾವಿರ ಆಶಾ ಕಾರ್ಯಕರ್ತೆಯರಿಗೆ ಸೂಕ್ತ ಕಾರಣಗಳನ್ನು ನೀಡಿಲ್ಲ   ಎಂದು ಪದ್ಮಾ ಹೇಳಿದರು.ಆರೋಗ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿಗಳು ತಮಗೆ ತೋಚಿದ ರೀತಿಯಲ್ಲಿ  ಅರ್ಥೈಸಿಕೊಂಡು, ಕೇಂದ್ರ ಸರ್ಕಾರದ ಅನುಮೋದನೆ ಇಲ್ಲದ ಮತ್ತು ಅನುದಾನವೂ ಇಲ್ಲದ 9 ಚಟುವಟಿಕೆಗಳನ್ನು ನಮಗೆ ಈ ಚಟುವಟಿಕೆಗಳಿಗೆ ಪ್ರೋತ್ಸಾಹ ಧನ ಇಲ್ಲದಿದ್ದರೂ  ನೀವು ಮಾಡಲೇಬೇಕು ಎಂದು ದಬ್ಬಾಳಿಕೆ ಮಾಡುತ್ತಿದ್ದಾರೆ ಎಂದು ಅಪಾದಿಸಿದರು.  ಪ್ರೋತ್ಸಾಹ ಧನ ಇಲ್ಲದ ಕೆಲಸ  ಮಾಡುವುದಿಲ್ಲ ಎಂದು ಬರೆದುಕೊಟ್ಟು ಕೆಲಸ ಬಿಟ್ಟು ಹೋಗಿ ಎಂದು ಹೇಳಿ ಅಧಿಕಾರಿಗಳು  ಹೆದರಿಸುತ್ತಿದ್ದಾರೆ.  ಹೆದರಿಕೆಯಿಂದ ಆಶಾ ಕಾರ್ಯಕರ್ತೆಯರು ಕೆಲಸ ಮಾಡಿಸುತ್ತಿದ್ದಾರೆ. ಇದು ಅತ್ಯಂತ ಖಂಡನೀಯ ಮತ್ತು ಕಾನೂನು ಬಾಹಿರ  ಎಂದು  ಪದ್ಮಾ  ಚಲವಾದಿ ಹೇಳಿದರು.   

ಆರೋಗ್ಯ ಇಲಾಖೆಯಲ್ಲಿ ಇರುವ ಇಂತಹ ಕಾರ್ಮಿಕ ಕಾಯ್ದೆ ಉಲ್ಲಂಘನೆ ಮಾಡುತ್ತಿದ್ದಾರೆ ಎಂದು ಆಶಾಗಳು ಹೇಳಿದರು.  ಎಲ್ಲ ಹಂತಗಳ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಂದ ಹಿಡಿದು ತಾಲ್ಲೂಕಾ, ಜಿಲ್ಲಾ ಸಮಿತಿಗಳಲ್ಲಿ ಮೊಬೈಲ್ ಆಧಾರಿತ ಕೆಲಸಗಳನ್ನು ಮಾಡದಿರಲು ಜಿಲ್ಲೆಯ ಎಲ್ಲ ಆಶಾ ಕಾರ್ಯಕರ್ತೆಯರೆಲ್ಲ ನಿರ್ಧರಿಸಿರುತ್ತಾರೆ ಎಂದು ಪದ್ಮಾ ನುಡಿದರು.ಇದೇ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಉಪಾಧ್ಯಕ್ಷೆ ಕವಿತಾ ಗಾವಡ , ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ ಅನುಮೋದನೆ ಇಲ್ಲದ, 9  ಕಾಂಪೋನೆಂಟ್ಸ್ಗಳ ಕೆಲಸಗಳು ಮಾಡುವುದನ್ನು ಉತ್ತರ ಕನ್ನಡ ಜಿಲ್ಲೆಯಾಧ್ಯಂತ ಸೇರಿದಂತೆ, ರಾಜ್ಯದಾದ್ಯಂತ ಎಲ್ಲಾ ಆಶಾ ಕಾರ್ಯಕರ್ತೆಯರು ನಿಲ್ಲಿಸುತ್ತಿರುವುದಾಗಿ ಪ್ರಕಟಿಸಿದರು.  ನಿಯೋಗದಲ್ಲಿ ಜಿಲ್ಲಾ ಸಮಿತಿಯ ಶ್ವೇತಾ ಕಪದಸ್ಕರ,  ಶಾರದಾ ನಾಯ್ಕ,, ಶೋಭಾ ನಾಯ್ಕ, ಲಕ್ಷ್ಮೀ ಹರಿಜನ್, ಜಯಶ್ರೀ ಮಾವುಸ್ಕರ್, ಸುನಂದಾ ಭೋಸಲೇ, ಆಶಾ ಭಂಡಾರಕರ್, ವೀಣಾ ಜಡರಾಮನಕುಂಟೆ ಸೇರಿದಂತೆ  ವಿವಿಧ ತಾಲೂಕುಗಳಿಂದ ಆಶಾ ಜಿಲ್ಲಾ ಸಮಿತಿಯ ಮುಖಂಡರು ಇದ್ದರು.