ಪ್ರಕೃತಿ ರಕ್ಷಿಸುವುದು ಎಂದರೆ ನಮ್ಮನ್ನು ನಾವೇ ರಕ್ಷಿಸುವುದು
Protecting nature means protecting ourselves
ಲೋಕದರ್ಶನ ವರದಿ
ಹಾನಗಲ್ 08: ಪ್ರಕೃತಿಯ ಉಳಿವಿಗೆ ಗಟ್ಟಿ ಹೆಜ್ಜೆ ಇಡದಿದ್ದರೆ ಜೀವಸಂಕುಲದ ಅಸ್ತಿತ್ವಕ್ಕೆ ಧಕ್ಕೆ ಉಂಟಾಗುವ ಭೀತಿ ಸೃಷ್ಟಿಯಾಗಿದೆ. ಪ್ರಕೃತಿ ರಕ್ಷಿಸುವುದು ಎಂದರೆ ನಮ್ಮನ್ನು ನಾವೇ ರಕ್ಷಿಸಿಕೊಂಡಂತೆ ಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದರು. ತಾಲೂಕಿನ ಅಕ್ಕಿಆಲೂರಿನ ಸಿ.ಜಿ.ಬೆಲ್ಲದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅರಣ್ಯ ಇಲಾಖೆಯ ಆಶ್ರಯದಲ್ಲಿ ಸಾಲುಮರದ ತಿಮ್ಮಕ್ಕ ವೃಕ್ಷೊಧ್ಯಾನ ಉದ್ಘಾಟಿಸಿ, ಅಶ್ವತ್ಥಮರ ನೂರು ಭಾವಗಳು ಪುಸ್ತಕ ಬಿಡುಗಡೆಗೊಳಿಸಿ ಅವರು ಮಾತನಾಡಿದರು. ಇಂದು ನಮ್ಮ ಕಣ್ಣೆದುರಿಗೆ ಪ್ರಕೃತಿ ಮುನಿಸಿಕೊಂಡಿದೆ.
ಜಾಗತಿಕ ತಾಪಮಾನದ ತೀವ್ರತೆ ಹೆಚ್ಚುತ್ತಿದೆ. ಸಕಾಲಕ್ಕೆ ಬರಬೇಕಾದ ಮಳೆ ಮಾಯವಾಗಿದೆ. ಹವಾಮಾನದ ಏರುಪೇರಿನಿಂದ ಚಳಿ, ಬಿಸಿಲಿನ ಪ್ರಭಾವ ವಿಪರೀತವಾಗುತ್ತಿದೆ. ಇವೆಲ್ಲವೂ ಪ್ರಕೃತಿ ನಮಗೆ ನೀಡುತ್ತಿರುವ ಅಂತಿಮ ಎಚ್ಚರಿಕೆ. ನಮ್ಮ ಸ್ವಾರ್ಥ ಮತ್ತು ಬೇಜವಾಬ್ದಾರಿಯಿಂದ ಹಸಿರು ನಾಶ ಹೀಗೆಯೇ ಮುಂದುವರೆದರೆ ಭೂಮಿ ಬರಡಾಗಲು ಬಹಳ ದಿನಗಳು ಬೇಕಿಲ್ಲ ಎಂದು ಆತಂಕ ವ್ಯಕ್ತಪಡಿಸಿದ ಅವರು ತಂತ್ರಜ್ಞಾನ ಎಷ್ಟೇ ಮುಂದುವರೆದರೂ ಮತ್ತೊಂದು ಜೀವಂತ ಭೂಮಿಯ ಸೃಷ್ಟಿ ಅಸಾಧ್ಯ. ಪರಿಸರ ದಿನದ ಆಚರಣೆ ಒಂದು ದಿನ, ಒಂದು ಫೋಟೊ ಕ್ಲಿಕ್ಕಿಸಿಕೊಳ್ಳಲು ಮಾತ್ರ ಸೀಮಿತವಾಗದೇ ನಿತ್ಯದ ಜೀವನದಲ್ಲಿ ಪರಿಸರ ಉಳಿವಿಗೆ ನಾವೆಲ್ಲರೂ ಸಣ್ಣಪುಟ್ಟ ಬದಲಾವಣೆ ಮಾಡಿಕೊಳ್ಳಬೇಕಿದೆ ಎಂದರು.
ಕೆಪಿಸಿಸಿ ಸದಸ್ಯ ಟಾಕನಗೌಡ ಪಾಟೀಲ, ಕೆಎಂಎಫ್ ನಿರ್ದೇಶಕ ಚಂದ್ರ್ಪ ಜಾಲಗಾರ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶಿವಾನಂದ ಪೂಜಾರ, ವಲಯ ಅರಣ್ಯಾಧಿಕಾರಿಗಳಾದ ಗಣೇಶಪ್ಪ ಶೆಟ್ಟರ, ಗಜೇಂದ್ರ ಎನ್., ಎನ್ನೆಸ್ಸೆಸ್ ಅಧಿಕಾರಿ ಮಲ್ಲನಗೌಡ ಕುಲಕರ್ಣಿ, ಗಂಗಾಧರ ಪಿ.ಆರ್., ಭವ್ಯಶ್ರೀ, ಶಿವರಾಜ ಹೂಗಾರ, ಎಂ.ಎಂ.ಬಳಬಟ್ಟಿ, ಪ್ರವೀಣ ಎಸ್. ಸೇರಿದಂತೆ ಉಪನ್ಯಾಸಕರು, ಸಿಬ್ಬಂದಿಗಳು ಇದ್ದರು.
ಒಬ್ಬರಿಗೆ ಒಂದೇ ಹುದ್ದೆ ಕಾಂಗ್ರೆಸ್ ಪಕ್ಷದ ನಿಯಮದಿಂದ ಕೆಪಿಸಿಸಿ ಅಧ್ಯಕ್ಷ ಸ್ಥಾನ ಕೈ ತಪ್ಪಿದೆ : ಸಚಿವ ಸತೀಶ ಜಾರಕಿಹೊಳಿ
ಖಾತೆ ಮುಟ್ಟುಗೋಲಾದರೂ ಶಿವಂ ಸಂಸ್ಥೆಗೆ ಜನರಿಂದ ಇನ್ನೂ ದುಡ್ಡು ಠೇವಣಿ : ವಂಚನೆ ಜಾಲದಿಂದ ದೂರ ಇರಿ, ಜನರಿಗೆ ಸಿಐಡಿ ಡಿಐಜಿಪಿ ಗುಳೇದ್ ಮನವಿ
ಬಹುಕೋಟಿ ಹಣ ವಂಚನೆ : ಆದಿತ್ಯರಾಜ್ ಕೇಸು ಸಿಐಡಿಗೆ, ಸಿಇಓ ವಿರುದ್ಧ ಲುಕ್ ಔಟ್ ನೋಟಿಸ್ ಜಾರಿ, ಏರ್ಪೋರ್ಟ್ ಗಳಿಗೆ ಮಾಹಿತಿ ರವಾನೆ
ಚಿನ್ನ ದೋಚಿದ್ದ ಖದೀಮನ ಬಂಧನ : 15.73 ಲಕ್ಷ ಮೌಲ್ಯದ 103.97 ಗ್ರಾಂ ಚಿನ್ನ ವಶ
ಕಣಗಲಾ ಬಳಿ ಲಾರಿ, ದ್ವಿಚಕ್ರವಾಹನ ನಡುವೆ ಅಪಘಾತ : ಇಬ್ಬರ ಸಾವು
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ 