ಪ್ರತಿಭಾ ಪುರಸ್ಕಾರ ಭವಿಷ್ಯವನ್ನು ರೂಪಿಸಿಕೊಳ್ಳಲು ರಹ ದಾರಿಯಾಗಿದೆ - ಡಾ. ಚೆನ್ನಮಲ್ಲಿಕಾರ್ಜುನ
Pratibha Puraskar is a great way to shape the future - Dr. Chennamallikarjuna
ರಾಣೇಬೆನ್ನೂರ 1: ಪ್ರತಿಭೆ ಎನ್ನುವುದು ಯಾರೊಬ್ಬರ ಸ್ವತ್ತಲ್ಲ ಪ್ರತಿಭೆ ಪ್ರತಿಯೊಬ್ಬ ಸಾಧಕರ ಸ್ವತ್ತು. ವಿಶೇಷವಾಗಿ ಗ್ರಾಮೀಣ ಪ್ರದೇಶದ ಮಕ್ಕಳಿಗೆ ನೀಡುವ ಪ್ರತಿಭಾ ಪುರಸ್ಕಾರವು ಅವರ ಜೀವನದ ಭವಿಷ್ಯವನ್ನು ಭದ್ರ ಪಡಿಸಿಕೊಳ್ಳುವಲ್ಲಿ ತುಂಬಾ ಸಹಕಾರಿಯಾಗಲಿದೆ, ಎಂದು ಹೊನ್ನಾಳಿ ಹಿರೇಕಲ್ಮಠದ ಡಾ. ಒಡೆಯರ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಮಹಾಸ್ವಾಮಿಗಳವರು ಹೇಳಿದರು. ಅವರು ಮೃತ್ಯುಂಜಯನಗರದ ಚೆನ್ನೇಶ್ವರ ಮಠದ ಹೊನ್ನಾಳಿ ಶ್ರೀ ಚನ್ನಮಲ್ಲಿಕಾರ್ಜುನ ಸಂಸ್ಕೃತಿ ಪ್ರಸಾರ ಪರಿಷತ್ತು ಆಯೋಜಿಸಿದ್ದ ಮಾಸಿಕ ಜ್ಞಾನವಾಹಿನಿ 306 ಧಾರ್ಮಿಕ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು.
ಇಂದಿನ ವಿದ್ಯಾರ್ಥಿಗಳಲ್ಲಿ ಅಪಾರವಾದ ಜ್ಞಾನ ಸಂಪತ್ತು ಅಡಗಿದೆ. ಜೊತೆ ಜೊತೆಗೆ ಹೊಸ, ಹೊಸ ಆವಿಷ್ಕಾರಗಳ ವೈಜ್ಞಾನಿಕ ಮತ್ತು ವೈಚಾರಿಕತೆಯ ಜ್ಞಾನದ ಬೆಳಕು ಚೆಲ್ಲಿದೆ ಇದರ ಪರಿಣಾಮ ಅವರಲ್ಲಿ ಅಧಿಕ ಜ್ಞಾನಾರ್ಜನೆ ಮೂಡಿದೆ ಭವಿಷ್ಯದ ಮಕ್ಕಳು ಜ್ಞಾನವನ್ನು ಸಂಪಾದಿಸಿ ಅವರ ಅಪೇಕ್ಷಿತ, ಉನ್ನತ ಸ್ಥಾನಮಾನಗಳನ್ನು ಪಡೆಯಲು ಸಾಧ್ಯವಾಗುತ್ತದೆ. ಇವೆಲ್ಲವಕ್ಕೂ ಪೂರಕವಾಗಿ ಆರಂಭಿಕ ಹಂತದಲ್ಲಿ ಸಮಾಜ ನೀಡುವ ಪ್ರೋತ್ಸಾಹದ ಪ್ರತಿಭಾ ಪುರಸ್ಕಾರವು ಮತ್ತಷ್ಟು ಶಕ್ತಿ ಮತ್ತು ಬಲವನ್ನು ಹೆಚ್ಚಿಸಲಿದೆ ಎಂದರು. ಇದೇ ಸಂದರ್ಭದಲ್ಲಿ ಸಂದರ್ಭದಲ್ಲಿ" ಶಾಯರಿ ರತ್ನ" ಪ್ರಶಸ್ತಿ ಪುರಸ್ಕೃತ ಹೆಚ್. ಎ. ಭಿಕ್ಷಾವರ್ತಿಮಠ, ಡಾ. ಮಂಜುನಾಥಯ್ಯ ಕರೆವಾಡಿಮಠ, ಗುರುಕುಲ ಸಾಧಕ ರುದ್ರೇಶ್ ಎ. ಸಿ.ಗುತ್ತಿಗೆದಾರ ಜೆ. ಎಸ್. ಶೆಟ್ಟರ್, ಮೊದಲಾದವರನ್ನು ಗುರು ರಕ್ಷ ನೀಡಿ ಗೌರವಿಸಲಾಯಿತು.
ತಾಲೂಕ ಲಿಂಗವಂತ ಸಮಾಜವು ಆಯೋಜಿಸಿದ್ದ ಎಸ್. ಎಸ್. ಎಲ್. ಸಿ. ಶೈಕ್ಷಣಿಕ ಸಾಧಕ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ವೇದಿಕೆಯಲ್ಲಿ ಉಪಾಧ್ಯಕ್ಷ ಬಸವರಾಜ ಪಟ್ಟಣಶೆಟ್ಟಿ, ಬಿದ್ದಾಡೆಪ್ಪ ಚಕ್ರಸಾಲಿ, ಉಮೇಶ್ ಗುಂಡಗಟ್ಟಿ, ಜಗದೀಶ್ ಮಳಿಮಠ ಸಂಘದ ಸದಸ್ಯರಾದ ಎಸ್.ಎಮ್. ಶಂಕಮ್ಮನವರ, ಬಸವರಾಜ ಕುರುವತ್ತಿ, ಸೋಮನಾಥ ಹಿರೇಮಠ, ಎಂ.ಕೆ.ಹಾಲ ಸಿದ್ದಯ್ಯ ಶಾಸ್ತ್ರಿ, ಗೌರೀಶ್ ನೆಗಳೂರಮಠ, ಎಸ್ ಎನ್ ಪಾಟೀಲ್, ಜ್ಯೋತಿ ಕುರುವತ್ತಿ, ಎಸ್. ಎನ್.ಜಗಳೇರ, ಭಾಗ್ಯಶ್ರೀ ಗುಂಡಗಟ್ಟಿ, ಪಾರ್ವತಿ ಹೊಸಗೌಡರ, ಮಾಲಾ ಮುದಿಗೌಡರ, ಶಕುಂತಲಾ ಪಾಟೀಲ್, ಸೇರಿದಂತೆ ಮತ್ತಿತರ ಗಣ್ಯರು ಶ್ರೀಮಠದ ಭಕ್ತರು ಧಾನಿಗಳು, ಪ್ರಸಾದ ಸೇವಾಕರ್ತರು ಉಪಸ್ಥಿತರಿದ್ದರು. ಕಸ್ತೂರಿ ಪಾಟೀಲ್ ನಿರೂಪಿಸಿ, ವಿ. ವೀ. ಹರಪನಹಳ್ಳಿ ಸ್ವಾಗತಿಸಿ, ಅಮೃತಗೌಡ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಂ. ಕೆ ಹಾಲಸಿದ್ದಯ್ಯ ಶಾಸ್ತ್ರಿಗಳು,
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ 