ಕೊರೊನಾ ಲೆಕ್ಕಿಸದೇ ಹೂವು ಖರೀದಿಗೆ ಮುಗಿಬಿದ್ದ ಜನತೆ
Flower
ಸದಾನಂದ ಮಜತಿ
ಬೆಳಗಾವಿ: ಜನವೋ ಜನ, ಯಾರ ಮುಖದ ಮೇಲೂ ಮಾಸ್ಕ್ ಇಲ್ಲ., ಸಾಮಾಜಿಕ ಅಂತರವಂತೂ ದೂರವೇ ಉಳಿಯಿತು. ಕೊರೊನಾ ಇರುವುದನ್ನೇ ಮರೆತು ಬೆಳಗಾವಿಯ ಪುಷ್ಪ ಮಾರುಕಟ್ಟೆಗೆ ಬೆೆಳ್ಳಂಬೆಳಿಗ್ಗೆ ಜನರು ಲಗ್ಗೆ ಇಟ್ಟಿದ್ದರು.
ದೀಪಾವಳಿ ನಿಮಿತ್ತ ನಗರದ ಪುಷ್ಪ ಮಾರುಕಟ್ಟೆಯಲ್ಲಿ ಹೂವುಗಳನ್ನು ಕೊಳ್ಳಲು ಜನಸಾಗರವೇ ಸೇರಿತ್ತು.
ಇಂದು ನರಕಚತುರ್ದಶಿ, ನಾಳೆ ಅಮಾವಾಸ್ಯೆ ಇರುವುದರಿಂದ ನೂರಾರು ರೈತರು ತಹರೇವಾರಿ ಪುಷ್ಪಗಳನ್ನು ಮಾರುಕಟ್ಟೆಗೆ ತಂದಿದ್ದರು. ಹೂವು ಮಾರಾಟಗಾರರು, ಪೂಜೆ ಮಾಡುವ ವ್ಯಾಪಾರಸ್ಥರು, ಮನೆಯಲ್ಲಿ ಲಕ್ಷ್ಮೀ ಪೂಜೆ ಮಾಡುವ ಜನರು ಹೀಗೆ ಸಾವಿರಾರು ಜನ ಸೇರಿದ್ದರು.
ಚೆಂಡು ಹೂವಿಗೆ ಫುಲ್ ಡಿಮಾಂಡ್ : ಮಾರುಕಟ್ಟೆಯಲ್ಲಿ ತಹರೇವಾರಿ ಪುಷ್ಪಗಳಿದ್ದರೂ ಚಂಡು ಹೂವಿಗೆ ವಿಶೇಷ ಬೇಡಿಕೆ ಇತ್ತು. ಸೇವಂತಿಗೆ ಹೂವು ಖರೀದಿಯೂ ಜೋರಾಗಿತ್ತು. ಚೆಂಡು ಹೂವು ಕೆಜಿಗೆ 80ರೂ. ನಿಂದ 200 ರೂವರೆಗೆ ಮಾರಾಟವಾದರೆ, ಸೇವಂತಿಗೆ ಹೂವಿಗೆ 100 ರಿಂದ 200ರವರೆಗೆ ದರಕ್ಕೆ ಮಾರಾಟವಾಯಿತು.
ರೈತರಿಗೆ ಖುಷಿ: ಗಾಂಧಿನಗರದಿಂದ ಅಶೋಕನಗರಕ್ಕೆ ಪುಷ್ಪ ಮಾರುಕಟ್ಟೆ ಸ್ಥಳಾಂತರಗೊಂಡು ನಾಲ್ಕು ದಿನವಾಯಿತು. ರೈತರು ಫುಲ್ ಖುಷಿಯಾಗಿದ್ದಾರೆ. ಹಳೆ ಮಾರುಕಟ್ಟೆಯಲ್ಲಿ ಜಾಗದ ಅಭಾವದಿಂದ ರೈತರು ನೇರ ಮಾರಾಟ ಸಾಧ್ಯವಾಗಿರಲಿಲ್ಲ. ಆದರೆ ನೂತನ ಮಾರುಕಟ್ಟೆಯಲ್ಲಿ ಸಾಕಷ್ಟು ಸ್ಥಳ ಇರುವುದರಿಂದ ರೈತರು ದಲ್ಲಾಳಿ ಅಂಗಡಿವರ ಮೊರೆ ಹೋಗುವ ಬದಲಾಗಿ ತಾವೇ ಮಾರಾಟಕ್ಕೆ ಮುಂದಾಗಿದ್ದು ಕಂಡುಬಂತು. ರಸ್ತೆಯ ಇಕ್ಕೆಲಗಳಲ್ಲಿ ವಾಹನ ನಿಲ್ಲಿಸಿದ್ದರಿಂದ ವಾಹನ ಸಂಚಾರ ದಟ್ಟಣೆ ಉಂಟಾಗಿತ್ತು. ಜಿಲ್ಲೆಯ ವಿವಿಧ ಭಾಗಗಳಿಂದ ನೆರೆಯ ಜಿಲ್ಲೆಗಳಾದ ಧಾರವಾಡ, ಬಾಗಲಕೋಟೆಗಳಿಂದಲೂ ರೈತರು ಪುಷ್ಪಗಳನ್ನು ಮಾರಾಟಕ್ಕೆ ಇಟ್ಟಿದ್ದರು.
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ 