ವ್ಯವಸ್ಥೆ ಇಲ್ಲದ ಪ್ರದೇಶದಲ್ಲಿ ಅಲ್ಪಸಂಖ್ಯಾತರ ಕಾಲೇಜು ಪ್ರಾರಂಭ ಖಂಡಿಸಿ ಮುಸ್ಲಿಂರ ಪ್ರತಿಭಟನೆ
Muslims protest against opening of minority college in unorganized area
ಗದಗ 11 : ರಾಜ್ಯ ಸರ್ಕಾರದಿಂದ ಗದಗ ನಗರದಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಮೂಲಕ ಗದಗ ನಗರದ ಅಲ್ಪಸಂಖ್ಯಾತರ ವಿದ್ಯಾರ್ಥಿನಿಯರಿಗೆ ಶೈಕ್ಷಣಿಕ ಪ್ರಮಾಣ ಹೆಚ್ಚಿಸುವ ಉದ್ದೇಶದಿಂದ ಸರ್ಕಾರಿ ಅಲ್ಪಸಂಖ್ಯಾತರ ಮಹಿಳಾ ಕಾಲೇಜನ್ನು ಮಂಜೂರು ಮಾಡಿರುವುದನ್ನು ನಾವು ಸ್ವಾಗತಿಸುತ್ತೇವೆ. ಆದರೆ ನಗರದ ಹೊರವಲಯದಲ್ಲಿ ಹಾಗೂ ಕಾಲೇಜುಗೆ ಹೋಗಲು ವಾಹನಗಳ ವ್ಯವಸ್ಥೆ ಇಲ್ಲದ ಪ್ರದೇಶದಲ್ಲಿ ನೂತನ ಮಹಿಳಾ ಅಲ್ಪಸಂಖ್ಯಾತರ ಕಾಲೇಜನ್ನು ಪ್ರಾರಂಭಿಸಲು ಉದ್ದೇಶಿಸಿರುವ ಅಧಿಕಾರಿಗಳ ಕ್ರಮವನ್ನು ಖಂಡಿಸಿ ಗದಗ-ಬೆಟಗೇರಿ ಮುಸ್ಲಿಂ ಸಮಾಜದ ವೇದಿಕೆಯ ನೂರಾರು ಕಾರ್ಯಕರತರು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ವೇದಿಕೆ ಅಧ್ಯಕ್ಷರಾದ ಮಹ್ಮದಯುಸುಫ ನಮಾಜಿ ನಗರದ ಹೊರವಲಯದ ಕಾರವಾರ-ಬಳ್ಳಾರಿ ರಸ್ತೆಯ ಖಬ್ರಸ್ತಾನ ಜಾಗೆಯ ಕಟ್ಟಡದಲ್ಲಿ ಮಹಿಳಾ ಕಾಲೇಜನ್ನು ಪ್ರಾರಂಭಿಸಲು ಅಧಿಕಾರಿಗಳು ಉದ್ದೇಶಿಸಿದ್ದು ಇದನ್ನು ನಾವು ಖಂಡಿಸುತ್ತೇವೆ. ಮಹಿಳೆಯರ ಸುರಕ್ಷತೆಯ ದೃಷ್ಠಯಿಂದ ಯಾವುದೇ ಕಾರಣಕ್ಕೊ ನೂತನ ಮಹಿಳಾ ಕಾಲೇಜನ್ನು ಇಂತಹ ಅಸುರಕ್ಷಿತ ವಾತಾವರಣ ಇರುವ ಪ್ರದೇಶದಲ್ಲಿ ಪ್ರಾರಂಭಿಸಸಲು ನಾವು ಬಿಡುವುದಿಲ್ಲ. ನಗರದ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ಅನೇಕ ವಸತಿ ಶಾಲೆಗಳನ್ನು ನಡೆಸಲಾಗುತ್ತಿದೆ.
ನಗರದ ಮಧ್ಯಭಾಗದಲ್ಲಿರುವ ಯಾವುದಾದರು ಒಂದು ವಸತಿ ಶಾಲೆಯನ್ನು ಸ್ಥಾಳಾಂತರಿಸಿ ಈ ಕಟ್ಟಡದಲ್ಲಿ ಮಹಿಳಾ ಕಾಲೇಜನ್ನು ಪ್ರಾರಂಭಿಸಬೇಕೆಂದು ಒತ್ತಾಯಿಸಿದರು. ವೇದಿಕೆ ಕಾರ್ಯದರ್ಶಿಯಾದ ಇಮ್ತಿಯಾಜ.ಆರ್.ಮಾನ್ವಿ ಮಾನ್ವಿ ಮಾತನಾಡಿ ಮುಸ್ಲಿಂ ಸಮುದಾಯವು ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ತುಂಬಾ ಹಿಂದುಳಿದಿದೆ. ವಿಶೇಷವಾಗಿ ಅಲ್ಪಸಂಖ್ಯಾತರ ಮಹಿಳೆಯರ ಶಿಕ್ಷಣಕ್ಕಾಗಿ ಆದ್ಯತೆ ನೀಡುವ ಉದ್ದೇಶದಿಂದ ರಾಜ್ಯ ಸರ್ಕಾರದಿಂದ ಈ ವರ್ಷದಿಂದ ಮಹಿಳಾ ಕಾಲೇಜನ್ನು ಪ್ರಾರಂಭಿಸಲು ಮಂಜೂರು ನೀಡಿದ್ದರಿಂದ ಗದಗ ಜಿಲ್ಲೆಯ ಅಲ್ಪಸಂಖ್ಯಾತರ ಸಾವಿರಾರು ಬಡ ಹೆಣ್ಣು ಮಕ್ಕಳಿಗೆ ಶಿಕ್ಷಣ ಪಡೆದುಕೊಳ್ಳಲು ಅನುಕೂಲವಾಗಿದೆ. ಆದರೆ ಹೆಣ್ಣುಮಕ್ಕಳ ಸುರಕ್ಷತೆಯ ಹಿತದೃಷ್ಠಿಯಿಂದ ನಗರದ ಮಧ್ಯಭಾಗದಲ್ಲಿ ಮಹಿಳಾ ಕಾಲೇಜನ್ನು ಪ್ರಾರಂಭಿಸಬೇಕು, ಅಧಿಕಾರಿಗಳು ಯಾವುದೇ ಒತ್ತಡಕ್ಕೆ ಮಣೆಯದೇ ಖಾಸಗಿ ಸಂಸ್ಥೆಗಳ ಕಟ್ಟಡವನ್ನು ಬಾಡಿಗೆ ಪಡೆದುಕೊಂಡು ಪ್ರತಿ ತಿಂಗಳ ಲಕ್ಷಾಂತರ ಹಣವನ್ನು ಈ ಸಂಸ್ಥೆಗಳಿಗೆ ಬಾಡಿಗೆ ಹಣವನ್ನು ನೀಡುವುದನ್ನು ಬಿಟ್ಟು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ
ನಡೆಸಲಾಗುತ್ತಿರುವ ಹಾಸ್ಟೇಲ ಕಟ್ಟಡಗಳಲ್ಲಿ ಮಹಿಳಾ ಕಾಲೇಜನ್ನು ಪ್ರಾರಂಭಿಸಬೇಕೆಂದು ಆಗ್ರಹಿಸಿದರು. ಅಂಜುಮನ ಸಂಸ್ಥೆ ಸದಸ್ಯರಾದ ಬಾಷಾಸಾಬ ಮಲ್ಲಸಮುದ್ರ ಮಾತನಾಡಿ ನಗರದ ಎಲ್ಲಾ ಜಮಾತಿನ ಮುಖಂಡರನ್ನು ಮತ್ತು ಅಲ್ಪಸಂಖ್ಯಾತರ ಸಮುದಾಯದ ಸಂಸ್ಥೆಗಳ ಸದಸ್ಯರನ್ನು ಸೇರಿಸಿ ಯಾವ ಕಟ್ಟಡದಲ್ಲಿ ಮಹಿಳಾ ಕಾಲೇಜನ್ನು ಪ್ರಾರಂಭಿಸಿದರೆ ವಿಧ್ಯಾರ್ಥಿನಿಯರಿಗೆ ಸುರಕ್ಷತೆ ಇರುತ್ತದೆ ಎಂದು ಸಮಾಲೋಚನೆ ನಡೆಸಿ ಮಹಿಳಾ ಕಾಲೇಜನ್ನು ಪ್ರಾರಂಭಿಸಬೇಕೆಂದು ಒತ್ತಾಯಿಸಿದರು.
ಒಂದು ವೇಳೆ ಅಧಿಕಾರಿಗಳು ಖಾಸಗಿ ಸಂಘ-ಸಂಸ್ಥೆಗಳ ಕಟ್ಟಡದಲ್ಲಿ ಲಕ್ಷಾಂತರ ಹಣವನ್ನು ಬಾಡಿಗೆ ನೀಡಿ ಕಾಲೇಜನ್ನು ಪ್ರಾರಂಭಿಸಲು ಹಾಗೂ ಅಸುರಕ್ಷತೆಯ ವಾತಾವರಣ ಇರುವ ಕಟ್ಟಡದಲ್ಲಿ ಮಹಿಳಾ ಕಾಲೇಜನ್ನು ಪ್ರಾರಂಭಿಸಲು ಮುಂದಾದರೆ ಗದಗ-ಬೆಟಗೇರಿ ಮುಸ್ಲಿಂ ಸಮಾಜದ ವೇದಿಕೆಯ ನೇತೃತ್ವದಲ್ಲಿ ಸಾವಿರಾರು ಜನರರೊಂದಿಗೆ ಸೇರಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಕಚೇರಿ ಮುಂದೆ ಬೃಹತ್ ಪ್ರತಿಭಟನೆ ನಡೆಸಲಾಗುವುದೆಂದು ಮನವಿ ಮೂಲಕ ಎಚ್ಚರಿಸಲಾಗಿದೆ.
ಪ್ರತಿಭಟನೆಯಲ್ಲಿ ವೇದಿಕೆಯ ಮುಖಂಡರಾದ ಬಾಬಾಜಾನ ಬಳಗಾನೂರ. ಎಂ.ಎಂ.ಮಾಳೆಕೊಪ್ಪ. ಅನ್ವರ ಶಿರಹಟ್ಟಿ, ರಫೀಕ ಜಮಾಲಖಾನವರ, ಯುಸುಫಸಾಬ ಕೊಟ್ಟೂರ, ಮುನ್ನಾ ಶೇಖ, ಅಬ್ದುಲರಜಾಕ ಶಿರಹಟ್ಟಿ, ಎಂ.ಬಿ.ನದಾಫ ವಕೀಲರು, ಸುಲೇಮಾನ ಮಾಳೆಕೊಪ್ಪ, ಮೌಲಾಸಾಬ ಗಚ್ಚಿ, ಅಬ್ಬು ಅಣ್ಣಿಗೇರಿ, ಆಶೀಫ ದಂಡಿನ, ಮುಜಫರ ಮುಲ್ಲಾ, ಬಾಬಾಜಾನ ಕಿತ್ತೂರ, ಆರೀಫ ಹುನಗುಂದ, ಉಸ್ಮಾನ ಮಾಳೆಕೊಪ್ಪ, ಜಂದಿಸಾಬ ಢಾಲಾಯತ, ಖಾಜಾಸಾಬ ಬಳ್ಳಾರಿ ಹಾಗೂ ನೂರಾರು ಪದಾಧಿಕಾರಿಗಳು ಭಾಗವಹಿಸಿದ್ದರು.
ಅಂತರಾಜ್ಯ ಖದೀಮನ ಬಂಧನ : 45.56 ಲಕ್ಷ ಮೌಲ್ಯದ ಚಿನ್ನಾಭರಣ, ದ್ವಿಚಕ್ರ ವಾಹನ ವಶಕ್ಕೆ
ಹಿಡಕಲ್ ಹಿನ್ನೀರಿನಲ್ಲಿ ಮುಳುಗಿದ್ದ ಹುನ್ನೂರು ವಿಠಲ ಮಂದಿರ ಜಲದಿಗ್ಭಂಧನದಿಂದ ಮುಕ್ತಿ
2027ರ ಮೇ. 4ರಿಂದ ಸಂಕೇಶ್ವರ ಮಹಾಲಕ್ಷ್ಮೀ ಜಾತ್ರಾ ಮಹೋತ್ಸವ ಪ್ರಾರಂಭ
48 ಗಂಟೆಯಲ್ಲಿ ಮನೆಗಳ್ಳರಿಬ್ಬರ ಬಂಧನ : 21,02 ಲಕ್ಷ ಮೌಲ್ಯದ 154.6 ಗ್ರಾಂ ಚಿನ್ನಾಭರಣ ವಶಕ್ಕೆ
ಕನ್ನಡ ಭಾಷೆಯ ನಾಮಫಲಕಗಳ ಹರಿದು ಹಾಕಿದ ಕಿಡಿಗೇಡಿಗಳ ವಿರುದ್ಧ ಕ್ರಮಕೈಗೊಳ್ಳಿ
ಕ್ಷುಲ್ಲಕ ಕಾರಣದಿಂದ ಕಲ್ಲಿನಿಂದ ಜಜ್ಜಿ ವ್ಯಕ್ತಿಯ ಹತ್ಯೆ : ಕಿತ್ತೂರು ಪೊಲೀಸರಿಂದ ಆರೋಪಿ ಬಂಧನ 