ಮುಧೋಳ ಕಂಠಿ ಕಾಲೇಜಿನ ಮಹಮ್ಮದ ರಫಿಕ ಮಲಘಾನಗೆ ಪಿ.ಎಚ್.ಡಿ ಪದವಿ
Muhammad Rafika Malaghana of Mudhola Kanthi College received her Ph.D
ಲೋಕದರ್ಶನ ವರದಿ
ಬಾಗಲಕೋಟ 14 : ಬಿವ್ಹಿವ್ಹಿ ಸಂಘದ ನಗರದ ಎಸ್.ಆರ್.ಕಂಠಿ ಮಹಾವಿದ್ಯಾಲಯದ ಎಂ.ಕಾಂ ಹಳೆಯ ವಿದ್ಯಾರ್ಥಿ ಮಹಮ್ಮದರಫಿಕ ಎ. ಮಲಘಾನ ಅವರಿಗೆ ರಾಜಸ್ಥಾನ ಜುಂಜುನು ಜಗದೀಶ್ ಪ್ರಸಾದ್ ಜಬರ್ಮಲ್ ತಿಬ್ರೆವಾಲಾ ವಿಶ್ವವಿದ್ಯಾಲಯದ ಹಿರಿಯ ಪ್ರಾಧ್ಯಾಪಕ ಡಾ.ಎಸ್.ಎಸ್. ನಾಯ್ಕವಾಡಿ ಅವರ ಮಾರ್ಗದರ್ಶನ ಹಾಗೂ ಮುಧೋಳ ಎಸ್.ಆರ್.ಕಂಠಿ ಮಹಾವಿದ್ಯಾಲಯದ ಎಂ.ಕಾಂ ವಿಭಾಗದ ಮುಖ್ಯಸ್ಥ ಡಾ.ಡಿ.ಆರ್ ಭೂಥಡಾ ಅವರ ಸಹ ಮಾರ್ಗದರ್ಶನದಲ್ಲಿ ಪದವಿ ಕಾಲೇಜಿನ ಹೂಡಿಕೆಯ ನಡವಳಿಕೆಯ ಅಧ್ಯಯನ, ಕರ್ನಾಟಕ ರಾಜ್ಯದ ಸ್ಟಾಕ್ ಮಾರ್ಕೆಟ್ನಲ್ಲಿರುವ ವಿದ್ಯಾರ್ಥಿಗಳು ಬಾಗಲಕೋಟೆ ಜಿಲ್ಲೆಗೆ ವಿಶೇಷ ಉಲ್ಲೇಖ ಎಂಬ ಶೀರ್ಷಿಕೆಯಲ್ಲಿ ಮಹಾ ಪ್ರಬಂಧ ವನ್ನು ಮಂಡಿಸಿರುವದಕ್ಕೆ ರಾಜಸ್ಥಾನದ ಜುಂಜುನು ಜೆಜೆಟಿಯು ವಿಶ್ವವಿದ್ಯಾಲಯವು 2025-26ನೇ ಸಾಲಿಗೆ ಪಿ.ಎಚ್.ಡಿ ಪದವಿ ನೀಡಿದೆ.
ಮಹಮ್ಮದರಫಿಕ ಮಲಘಾನ ಗೆ ಪಿ.ಎಚ್.ಡಿ ಪದವಿ ಪಡೆದುಕೊಂಡಿರುವದಕ್ಕೆ ಬಿವ್ಹಿವ್ಹಿ ಸಂಘದ ಕಾರ್ಯಾಧ್ಯಕ್ಷ ಡಾ.ವೀರಣ್ಣ ಸಿ.ಚರಂತಿಮಠ, ಗೌರವ ಕಾರ್ಯದರ್ಶಿ ಮಹೇಶ ಎನ್. ಅಥಣಿ, ಸಂಘದ ಕಾಲೇಜುಗಳ ಆಡಳಿತ ಮಂಡಳಿಯ ಕಾರ್ಯಾಧ್ಯಕ್ಷಗುರುಬಸವ ಎಸ್. ಸೂಳಿಭಾವಿ, ಬಿವ್ಹಿವ್ಹಿ ಸಂಘದ ಆಡಳಿತಾಧಿಕಾರಿ ಡಾ.ವಿಜಯಕುಮಾರ ಎಸ್. ಕಟಗಿಹಳ್ಳಿಮಠ, ಸಂಘದ ಪದವಿ ಕಾಲೇಜುಗಳ ಗುಣಮಟ್ಟ ಭರವಸೆಯ ಕೋಶದ ಮುಖ್ಯ ಸಲಹೆಗಾರ್ತಿ ಡಾ.ಮೀನಾ ಆರ್.ಚಂದಾವರಕರ, ಸಂಘದ ಕಾಲೇಜುಗಳ ಆಡಳಿತ ಮಂಡಳಿಯ ಪದನಿಮಿತ್ಯ ಕಾರ್ಯದರ್ಶಿ ಡಾ.ಎಸ್.ಎಮ್.ಗಾಂವಕರ ಮತ್ತು ಸಂಘದ ಸರ್ವ ಸದಸ್ಯರು ಹಾಗೂ ಕಾಲೇಜಿನ ಪ್ರಾಚಾರ್ಯ ಡಾ.ಮಲ್ಲಿಕಾರ್ಜುನಆರ್.ಜರಂಕುಂಟಿ, ಐಕ್ಯೂಎಸಿ ಸಂಯೋಜಕ ಪ್ರೊ. ಅಜ್ಜಪ್ಪಕಡೂರ, ಎಂ.ಕಾಂ ವಿಭಾಗದ ಮುಖ್ಯಸ್ಥಡಾ. ಡಾ.ಡಿ.ಆರ್ ಭೂಥಡಾ ಹಾಗೂ ಬೋಧಕ ಬೋಧಕೇತರ ಸಿಬ್ಬಂದಿ, ಹಳೆಯ ವಿದ್ಯಾರ್ಥಿಗಳ ಸಂಘದ ಪದಾಧಿಕಾರಿಗಳು ಅಭಿನಂದಿಸಿದ್ದಾರೆ.
24 ಗಂಟೆಯಲ್ಲಿ ಕಾರು ಕಳ್ಳತನ ಪ್ರಕರಣ ಭೇಧಿಸಿದ ಪೊಲೀಸರು : ಖದೀಮರ ಪತ್ತೆಗಾಗಿ ಶೋಧ
ಗಡಿ ಮರಾಠಿ ಶಾಲೆಗಳಲ್ಲಿ ಕನ್ನಡ ಕಹಳೆ: 7 ಕನ್ನಡ ಪ್ರಾಥಮಿಕ, 2 ಪ್ರೌಡ ಶಾಲೆಗಳಿಗೆ ರಾಜ್ಯ ಸರಕಾರ ಗ್ರಿನ್ ಸಿಗ್ನಲ್
ಅಂತರಾಜ್ಯ ಖದೀಮನ ಬಂಧನ : 45.56 ಲಕ್ಷ ಮೌಲ್ಯದ ಚಿನ್ನಾಭರಣ, ದ್ವಿಚಕ್ರ ವಾಹನ ವಶಕ್ಕೆ
ಹಿಡಕಲ್ ಹಿನ್ನೀರಿನಲ್ಲಿ ಮುಳುಗಿದ್ದ ಹುನ್ನೂರು ವಿಠಲ ಮಂದಿರ ಜಲದಿಗ್ಭಂಧನದಿಂದ ಮುಕ್ತಿ
2027ರ ಮೇ. 4ರಿಂದ ಸಂಕೇಶ್ವರ ಮಹಾಲಕ್ಷ್ಮೀ ಜಾತ್ರಾ ಮಹೋತ್ಸವ ಪ್ರಾರಂಭ
48 ಗಂಟೆಯಲ್ಲಿ ಮನೆಗಳ್ಳರಿಬ್ಬರ ಬಂಧನ : 21,02 ಲಕ್ಷ ಮೌಲ್ಯದ 154.6 ಗ್ರಾಂ ಚಿನ್ನಾಭರಣ ವಶಕ್ಕೆ 