ಕುಕನೂರ್

ಮಕ್ಕಳ ಚಟುವಟಿಕೆಗಳ ಮೇಲೆ ತಾಯಂದಿರು ನಿಗಾ ವಹಿಸಿ: ಮೆಹಬೂಬಸಾಬ್ ಗುಡಿ ಹಿಂದೆ

ಮಕ್ಕಳ ಚಟುವಟಿಕೆಗಳ ಮೇಲೆ ತಾಯಂದಿರು ನಿಗಾ ವಹಿಸಿ: ಮೆಹಬೂಬಸಾಬ್ ಗುಡಿ ಹಿಂದೆ

ಕುಕನೂರು 26:  ತಾಲೂಕಿನ ಮಂಡಲಗಿರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪಾಲಕರ ಸಭೆ ಆ ಯೋಜನೆ ಮಾಡಲಾಯಿತು. ಈ ವೇಳೆಯಲ್ಲಿ ಶಿಕ್ಷಕ ಮಹಿಬೂಬಸಾಬ್ ಗುಡಿಹಿಂದಲ್ ಮಾತನಾಡುತ್ತಾ ಪ್ರತಿಯೊಬ್ಬ ತಾಯಂದಿರು ತಮ್ಮ ಮಕ್ಕಳ ಶೈಕ್ಷಣಿಕ ಹಾಗೂ ಇನ್ನಿತರ ಚಟುವಟಿಕೆಗಳ ಮೇಲೆ ನಿಗಾ ವಹಿಸಬೇಕು ಯಾಕೆಂದರೆ ಮನೆ ಮೊದಲ ಪಾಠಶಾಲೆ ತಾಯಿಯೇ ಮೊದಲ ಗುರು ಎಂದು ಹಿಂದಿನಿಂದ ಹೇಳುತ್ತಾ ಬಂದಿದ್ದು ಇಂದಿನ ಆಧುನಿಕ ಜೀವನದ ಭರಾಟೆಯಲ್ಲಿ ತಾಯಂದಿರು ಮಕ್ಕಳ ಬಗ್ಗೆ ಅಸಡ್ಡೆ ತೋರುತ್ತಿರುವುದು ವಿಷಾದ ನಂತರ ಸಂಗತಿಯಾಗಿದ್ದು ಪ್ರತಿಯೊಬ್ಬ ಮಾತೆಯು ತಮ್ಮ ಮಕ್ಕಳ ಬಗ್ಗೆ ನಿಗಾವಿಯಲ್ಲಿ ಅವರ ಶೈಕ್ಷಣಿಕ ಜೀವನ ಯಶಸ್ಸಿನತ್ತ ಸಾಗುತ್ತದೆ ಹೇಳಿದರು.         

ಈ ವೇಳೆಯಲ್ಲಿ ಶಾಲೆಯ ಕುಂದು ಕೊರತೆಗಳು ಹಾಗೂ ದುರ್ಗ ಬೇಕಾದ ಕಾರ್ಯಗಳ ಕುರಿತು ಚರ್ಚೆ ನಡೆಸಲಾಯಿತು. ಶಾಲಾ ಅಭಿವೃದ್ಧಿಗೆ ಬೇಕಾದ ಸಲಕರಣೆಗಳನ್ನು ಶಾಲೆಗೆ ನೀಡಿದ ದಾನಿಗಳಿಗೆ, ನೂತನವಾಗಿ ಶಾಲೆಯಲ್ಲಿ ಸೇವೆ ಪ್ರಾರಂಭಿಸಿದ ಶಿಕ್ಷಕಿ ಸವಿತಾ ಬೋರಣ್ಣನವರ್ ಹಾಗೂ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ವಿಜೇತ ಶೇಖಪ್ಪ ಅವರಿಗೆ ಈ ವೇಳೆಯಲ್ಲಿ ಸನ್ಮಾನಿಸಿ ಗೌರವಿಸಲಾಯಿತು.        

ಈ ವೇಳೆಯಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ದೇವಕ್ಕ ಈಳಿಗೆರ, ಶಾಲಾ ಸುಧಾರಣಾ ಸಮಿತಿ ಅಧ್ಯಕ್ಷೆ ಕವಿತಾ ಹಿರೇಮಠ,ಹಾಗೂ ಸದಸ್ಯರು ಗ್ರಾಮದ ಪ್ರಮುಖರಾದ ವೆಂಕಟೇಶ ಈಳಿಗೆರ, ಬಸಯ್ಯ ಸಸಿ, ಶಿವಮೂರ್ತಿ ದಳವಾಯಿ, ಗುಳನಗೌಡ ಮಾಲಿಪಾಟೀಲ, ರವಿ ಪರ್ಸಣ್ಣನವರ, ಮಹಮ್ಮದ್ ರಫಿ ಜಮಕಾನ, ಶೇಖಪ್ಪ ಕಟಬಿ, ಬಸವರಾಜ ಹಿತ್ತಲಮನಿ, ಪ್ರಕಾಶರೆಡ್ಡಿ ಕರ್ಮುಡಿ, ಅರುಣ ಉಪ್ಪಾರ, ಮಲ್ಲಯ್ಯ ಗದುಗಿನ, ಶಾಲಾ ಶಿಕ್ಷಕರು ಹಾಗೂ ಪಾಲಕರು ಪಾಲ್ಗೊಂಡಿದ್ದರು. 


ಸುದ್ದಿ ಓದಿ