ದೇವಸ್ಥಾನ ಆವರಣ ಹಾಗೂ ಗುಡ್ಡದ ಎಲ್ಲ ಪ್ರದೇಶಗಳಲ್ಲಿ ಜಾನುವಾರು ನಿಯಂತ್ರಣಕ್ಕೆ ಕ್ರಮ
Measures to control cattle in all areas of the temple premises and hills
ಲೋಕದರ್ಶನ ವರದಿ
ಉಗರಗೋಳ 12: ಸಪ್ತಗುಡ್ಡ, ಸಪ್ತಕೋಳ್ಳಗಳ ನಡುವೆ ನೇಲೆ ನಿಂತ ಎಳುಕೊಳ್ಳದ ಶ್ರೀರೇಣುಕಾ ಯಲ್ಲಮ್ಮನ ಗುಡ್ಡಕ್ಕೆ ಪ್ರತಿ ವರ್ಷ ಕೋಟ್ಯಾಂತರ ಭಕ್ತರು ಬಂದು ಶ್ರೀದೇವಿಯ ದರ್ಶನ ಆಶೀರ್ವಾದ ಪಡೆದುಕೊಂಡು ಹೂಗಾತ್ತಾರೆ. ದೇವಸ್ಥಾನಕ್ಕೆ ಆಗಮಿಸುತ್ತಿರುವ ಭಕ್ತರಿಂದ ಹಲವಾರು ಬಾರಿ ಬಿಡಾಡಿ ದನಗಳ ಬಗೆಗೆ ಯಲ್ಲಮ್ಮನ ಕಛೇರಿಯಲ್ಲಿ ದೂರುಗಳು ದಾಖಲಾಗಿದ್ದು
ದೇವಸ್ಥಾನದ ಆವರಣ ಹಾಗೂ ಯಲ್ಲಮ್ಮನ ಗುಡ್ಡದ ಎಲ್ಲ ಸ್ಥಳಗಳಲ್ಲಿ ಧನ-ಕರುಗಳು ಬೇಕಾಬಿಟ್ಟಿಯಾಗಿ ಅಡ್ಡಾಡುತ್ತಿರುವುದರಿಂದ ಭಕ್ತರಿಗೆ ತೊಂದರೆಯಾಗುತ್ತಿದ್ದು. ಪದೆ ಪದೆ ಭಕ್ತರ ಮೇಲೆ ಹಾಗೂ ವಯೋವೃದ್ದರ ಮೇಲೆ ದಾಳಿ ಮಾಡುತ್ತಿದ್ದು ಇದರಿಂದಾಗಿ ಮೇಲಿಂದ ಮೇಲೆ ಭಕ್ತರು ಭಯದ ವಾತಾವರಣದಲ್ಲಿ ಗುಡ್ಡಕ್ಕೆ ಬಂದು ಹೊಗುವಂತಾಗಿದ್ದು ಜಾನುವಾರುಗಳ ಮಾಲಿಕರು ಒಂದು ವಾರದೊಳಗೆ ತಮ್ಮ ತಮ್ಮ ಜಾನುವಾರುಗಳನ್ನು ತಗೆದುಕೊಂಡು ಹೋಗತಕ್ಕದ್ದು.
ಇಲ್ಲವಾದರೆ, ಸದರಿ ಎಲ್ಲ ಜಾನುವಾರಗಳನ್ನು ಬೀದಿ ಜಾನುವಾರುಗಳು ಅಂತಾ ಪರಿಗಣಿಸಿ ಸರ್ಕಾರಕ್ಕೆ ಕಬ್ಜಾ ತಗೆದುಕೊಂಡು ಜಾನುವಾರುಗಳ ಮಾಲಿಕರ ಮೇಲೆ ಬಿಎನ್‌ಎಸ್ ಕಾಯ್ದೆಯಡಿ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗುವುದು ಎಂದು ಶ್ರೀರೆಣುಕಾ ಯಲ್ಲಮ್ಮ ದೇವಸ್ಥಾನ ಅಭಿವೃದ್ದಿ ಪ್ರಾದಿಕಾರದ ಕಾರ್ಯಧರ್ಶಿ ಪ್ರಭಾವತಿ ಫಕೀರಪೂರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಗಡಿ ಮರಾಠಿ ಶಾಲೆಗಳಲ್ಲಿ ಕನ್ನಡ ಕಹಳೆ: 7 ಕನ್ನಡ ಪ್ರಾಥಮಿಕ, 2 ಪ್ರೌಡ ಶಾಲೆಗಳಿಗೆ ರಾಜ್ಯ ಸರಕಾರ ಗ್ರಿನ್ ಸಿಗ್ನಲ್
ಅಂತರಾಜ್ಯ ಖದೀಮನ ಬಂಧನ : 45.56 ಲಕ್ಷ ಮೌಲ್ಯದ ಚಿನ್ನಾಭರಣ, ದ್ವಿಚಕ್ರ ವಾಹನ ವಶಕ್ಕೆ
ಹಿಡಕಲ್ ಹಿನ್ನೀರಿನಲ್ಲಿ ಮುಳುಗಿದ್ದ ಹುನ್ನೂರು ವಿಠಲ ಮಂದಿರ ಜಲದಿಗ್ಭಂಧನದಿಂದ ಮುಕ್ತಿ
2027ರ ಮೇ. 4ರಿಂದ ಸಂಕೇಶ್ವರ ಮಹಾಲಕ್ಷ್ಮೀ ಜಾತ್ರಾ ಮಹೋತ್ಸವ ಪ್ರಾರಂಭ
48 ಗಂಟೆಯಲ್ಲಿ ಮನೆಗಳ್ಳರಿಬ್ಬರ ಬಂಧನ : 21,02 ಲಕ್ಷ ಮೌಲ್ಯದ 154.6 ಗ್ರಾಂ ಚಿನ್ನಾಭರಣ ವಶಕ್ಕೆ
ಕನ್ನಡ ಭಾಷೆಯ ನಾಮಫಲಕಗಳ ಹರಿದು ಹಾಕಿದ ಕಿಡಿಗೇಡಿಗಳ ವಿರುದ್ಧ ಕ್ರಮಕೈಗೊಳ್ಳಿ 