ಮಾರುಕಟ್ಟೆ ಕಲೆ ಪ್ರತಿಯೊಬ್ಬರ ಜೀವನಕ್ಕೂ ಅವಶ್ಯ : ಗೊಂಡಬಾಳ
Marketing art is essential to everyone's life: Gondabala
ಕೊಪ್ಪಳ 15: ಪ್ರತಿಯೊಬ್ಬರ ಜೀವನದಲ್ಲೂ ಮಾರುಕಟ್ಟೆ ಕಲೆಯೂ ಅವಶ್ಯಕವಾಗಿ ಬೇಕಾಗುತ್ತದೆ, ವೇಗವಾಗಿ ಚಲಿಸುತ್ತಿರುವ ದೇಶ ಮತ್ತು ಹೆಚ್ಚಾಗುತ್ತಿರುವ ಜನಸಂಖ್ಯೆಗೆ ಸವಾಲು ಹಾಕಲು ಕಲಿಕೆ ಬಹಳ ಮುಖ್ಯ ಎಂದು ಕೊಪ್ಪಳ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ಮಂಜುನಾಥ ಜಿ. ಗೊಂಡಬಾಳ ತಿಳಿಸಿದರು. ಅವರು ನಗರದ ಕುಷ್ಟಗಿ ರಸ್ತೆಯಲ್ಲಿರುವ ಎನ್.ಕೆ.ಪಿ.ಎಂ. ಆ<ಗ್ಲ ಮಾಧ್ಯಮ ಶಾಲೆಯ ವಾರ್ಷಿಕ ಡಿಜಿಟಲ್ ಯುಗದಲ್ಲಿ ಮಕ್ಕಳ ಮೇಳ ಎಂಬ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಆಧುನಿಕ ಭಾರತದಲ್ಲಿ ಪ್ರತಿಯೊಂದೂ ಸಹ ಸವಾಲಿನ ಕೆಲಸವಾಗಿದೆ, ಮಕ್ಕಳು ಮೊಬೈಲ್ ಗೀಳನ್ನು ಬಿಟ್ಟು ಕಲಿಕೆಗೆ ಒತ್ತು ಕೊಡಬೇಕು, ಪ್ರತಿಯೊಂದನ್ನು ಚನ್ನಾಗಿ ಕಲಿತುಕೊಳ್ಳಬೇಕು, ಪ್ರಾಯೋಗಿಕವಾಗಿ ವ್ಯವಹಾರ, ವ್ಯಾಪಾರವನ್ನು ಕಲಿಸಿಕೊಡುವ ಮಕ್ಕಳ ಮಾರುಕಟ್ಟೆ ಎಂಬ ಕಲ್ಪನೆ ಅವರಲ್ಲಿನ ಕ್ರಿಯಾತ್ಮಕ ಚಟುವಟಿಕೆಗಳನ್ನು ಹೊರಗೆ ತರುತ್ತದೆ, ಶಾಲೆಯ ಆಡಳಿತ ಮಂಡಳಿ ಮಕ್ಕಳಿಗೆ ಸಾಕಷ್ಟು ಕಲಿಸುತ್ತಿದೆ, ಉತ್ತಮ ಬೋಧಕ ವರ್ಗ ಹೊಂದಿದ್ದು, ಅತ್ಯಂತ ಕಡಿಮೆ ಶುಲ್ಕದಲ್ಲಿ ಶಿಕ್ಷಣ ಕೊಡುತ್ತಿರುವದು ಭಾಗ್ಯವೇ ಸರಿ.
ಮಾರುಕಟ್ಟೆಯಲ್ಲಿ ಬರುವ ಎಲ್ಲಾ ವಸ್ತುಗಳನ್ನು ನಂಬುವ ಹಾಗಿಲ್ಲ, ವ್ಯಾಪಾರಿ ಬುದ್ಧಿಯಿಂದ ಸಮಾಜ ಕೆಡುತ್ತಿದೆ, ಪ್ರತಿಯೊಬ್ಬರೂ ಸಹ ಮಕ್ಕಳಿಗೆ ಏನು ಕೊಡಬೇಕು ಕೊಡಬಾರದು ಎಂಬುದರ ಬಗ್ಗೆ ಹೆಚ್ಚು ಯೋಚಿಸಲಿ. ಫ್ರೀ ದುನಿಯಾದಲ್ಲಿ ಸುಳ್ಳಿಗೆ ಆಧ್ಯತೆಯಾಗಿದೆ, ಯಾವುದು ಏನು ಎಂದು ತಿಳಿದುಕೊಳ್ಳುವ ಜ್ಞಾನ ಇಂತಹ ಮೇಳಗಳಿಂದ ಬರುತ್ತದೆ ಎಂದರು.
ಸಂಸ್ಥೆಯ ಸಂಸ್ಥಾಪಕರಾದ ಬಿ. ಕೆ. ಪಟ್ಟಣಶೆಟ್ಟಿ ಅವರು, ಮಕ್ಕಳು, ಪೋಷಕರು ಮತ್ತು ಶಿಕ್ಷಕರ ಸಹಕಾರದಿಂದ ಇಷ್ಟು ಸೊಗಸಾದ ಕಾರ್ಯಕ್ರಮ ಮಾಡಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಮಕ್ಕಳ ಪ್ರೋತ್ಸಾಹ ನೀಡುವ ಕಾರ್ಯಕ್ರಮ ಆಯೋಜಿಸಲಾಗುತ್ತದೆ, ಕ್ರೀಡೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಕ್ಕೂ ಆಧ್ಯತೆ ನೀಡಲಾಗಿದೆ, ಗುಣಾತ್ಮಕ ಶಿಕ್ಷಣ ತಮ್ಮ ಆಧ್ಯತೆ ಎಂದರು.
ಈ ಸಂದರ್ಭದಲ್ಲಿ ಮಧುಮತಿ ಬಿ. ಪಟ್ಟಣಶೆಟ್ಟಿ, ಸವಿತಾ ಗೌಡರ್, ರಂಗಮ್ಮ ಕೆ., ಲಕ್ಷಿ-್ಮ ವ್ಯಾಸಮುದ್ರಿ, ಸವಿತಾ ಸಾಕ್ರೆ, ಶರಣವ್ವ, ವಿಜೇತಾ, ವೆಂಕಟಲಕ್ಷಿ-್ಮ, ಬಿಂದಿಯಾ ಬಿ., ಜ್ಯೋತಿ ಕೆ., ನಿತಿನ್ ವಿ., ಉದಯಕುಮಾರ್ ಕೆ., ಮಲ್ಲಪ್ಪ ಕಿನ್ನಾಳ ಇದ್ದರು.
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ 