ಮ್ಯಾರಾಥನ್ ಓಟ: ವಿಜೇತರ ವಿವರ
Marathon race: Winners' details
ಕಾರವಾರ.ಡಿ.26 : ಕರಾವಳಿ ಉತ್ಸವ-2025 ರ ಅಂಗವಾಗಿ ಶುಕ್ರವಾರ ರವೀಂದ್ರನಾಥ ಕಡಲ ತೀರದಲ್ಲಿ ಆಯೋಜಿಸಲಾದ ಮ್ಯಾರಾಥನ್ ನಲ್ಲಿ 21 ಕಿ.ಮೀ ಓಟದಲ್ಲಿ ಮಹಿಳೆಯರ ವಿಭಾಗದಲ್ಲಿ ಎಚ್. ಎಂ. ಹರ್ಷಿತಾ (ಪ್ರಥಮ) ಬಿಂದು ಹಿರೇಮಠ್ (ದ್ವಿತೀಯ) ಈಶಾ ಬೊಲಾರ್ (ತೃತೀಯ) ಮತ್ತು ಪುರುಷ ವಿಭಾಗದಲ್ಲಿ ಶಿವಾನಂದ (ಪ್ರಥಮ) ಸಂತೋಷ್ ಆರ್. ಸಾವಂತ (ದ್ವಿತೀಯ) ಗಣಪತಿ ವಾಯ್ ಮಳಿಕ್ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ. ಪ್ರಥಮ ಬಹುಮಾನ ರೂ.15000, ದ್ವೀತಿಯ ಬಹುಮಾನ ರೂ.10000 ಮತ್ತು ತೃತೀಯ ಬಹುಮಾನ ರೂ.5000 ಗಳನ್ನು ವಿಜೇತರಿಗೆ ನೀಡಲಾಯಿತು.
10 ಕಿ.ಮೀ ಪುರುಷ ವಿಭಾಗದಲ್ಲಿ ನಾಗರಾಜ ವಿ. ದಿವಟೆ (ಪ್ರಥಮ) , ಪ್ರವೀಣ ಜೋಗಳೇಕರ (ದ್ವಿತೀಯ), ಪ್ರದೀಪ ಟಿ. ಮರಾಠೆ (ತೃತೀಯ) ಮತ್ತು ಮಹಿಳೆಯರ ವಿಭಾಗದಲ್ಲಿ ಪೂರ್ವಿ ಹರಿಕಾಂತ್ರ (ಪ್ರಥಮ) ವಿಜಯಲಕ್ಷ್ಮೀ ಎಸ್.ಕೆ (ದ್ವಿತೀಯ) ಸುಮತಿ ಗೌಡ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ. 5 ಕಿ.ಮೀ ಪುರುಷ ವಿಭಾಗದಲ್ಲಿ ಬಾಲು ಹೆಗ್ರಿ (ಪ್ರಥಮ) ಹರಿ ವಿಷ್ಣುಗಾಥಿ (ದ್ವಿತೀಯ) ಪ್ರತೀಕ ಸುರೇಶ ವಾಲೇಕರ (ತೃತೀಯ) ಮತ್ತು ಮಹಿಳೆಯರ ವಿಭಾಗದಲ್ಲಿ ಸುಪ್ರಿತಾ ಚೆನ್ನಯ್ಯ (ಪ್ರಥಮ) ವೈಷ್ಣವಿ ಗಾಡೇಕರ (ದ್ವಿತೀಯ) ಚಾಮುಂಡೇಶ್ವರಿ ಮಿರಾಶಿ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.
ಬೆಳಗ್ಗೆ 6 ಗಂಟೆಗೆ ಮಯೂರ ವರ್ಮ ವೇದಿಕೆಯಿಂದ ಆರಂಭಗೊಂಡ ಕರಾವಳಿ ರನ್ ಓಟಕ್ಕೆ ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ದೀಲೀಷ್ ಶಶಿ, ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್ ಚಾಲನೆ ನೀಡಿದರು. ಅಪರ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ, ಉಪ ವಿಭಾಗಾಧಿಕಾರಿ ಶ್ರವಣ ಕುಮಾರ್, ತರಬೇತಿ ನಿರತ ಐ.ಎ.ಎಸ್ ಅಧಿಕಾರಿ ಝೂಪಿಶಾನ್ ಹಕ್, ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ರವಿ ನಾಯ್ಕ ಮತ್ತಿತರರು ಉಪಸ್ಥಿತರಿದ್ದರು. ಮ್ಯಾರಾಥಾನ್ ಓಟದಲ್ಲಿ ಜಿಲ್ಲೆಯ ವಿವಿಧ ಭಾಗಗಳಿಂದ 600 ಕ್ಕೂ ಅಧಿಕ ಮಂದಿ ಭಾಗವಹಿಸಿದ್ದರು.
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ 