ಶ್ರೀ ಮುರುಘೇಂದ್ರ ಲಲಿತಕಲಾ ಮಹಾವಿದ್ಯಾಲಯದ ನೂತನ ಕಟ್ಟಡ ಉದ್ಘಾಟನೆ

ಶ್ರೀ ಮುರುಘೇಂದ್ರ ಲಲಿತಕಲಾ ಮಹಾವಿದ್ಯಾಲಯದ ನೂತನ ಕಟ್ಟಡ ಉದ್ಘಾಟನೆ  Inauguration of the new building of Sri Murughendra Lalit Kala Mahavidyalaya

ಅಥಣಿ 02: ಕಾಂಗ್ರೆಸ್ ಮುಖಂಡ ನಗರಸಭಾ ಸದಸ್ಯ ರಾವಸಾಹೇಬ್ ಐಹೊಳೆ ನೇತೃತ್ವದ ಆದರ್ಶ ಶಿಕ್ಷಣ ಸಂಸ್ಥೆಯ ಶ್ರೀ ಮುರುಘೇಂದ್ರ ಲಲಿತ ಕಲಾ ಮಹಾವಿದ್ಯಾಲಯದ ನೂತನ ಕಟ್ಟಡದ ಉದ್ಘಾಟನಾ ಕಾರ್ಯಕ್ರಮ ವಿಜ್ರಂಭಣೆಯಿಂದ ಜರುಗಿತು.  ಈ ಸಂದರ್ಭದಲ್ಲಿ ಮಾತನಾಡಿದ ರಾವಸಾಹೇಬ್ ಐಹೊಳೆ, ಅಥಣಿ ಹಾಗೂ ಸುತ್ತಮುತ್ತಲಿನ ಚಿತ್ರಕಲೆಯಲ್ಲಿ ಆಸಕ್ತಿ ಇರುವ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಆದರ್ಶ ಶಿಕ್ಷಣ ಸಂಸ್ಥೆಯಡಿ ಶ್ರೀ ಮುರುಘೇಂದ್ರ ಲಲಿತ ಕಲಾ ಮಹಾವಿದ್ಯಾಲಯವನ್ನು ಪ್ರಾರಂಭಿಸಲಾಗಿದ್ದು ಇದರ ಸದುಪಯೋಗವನ್ನು ವಿದ್ಯಾರ್ಥಿಗಳು ಪಡೆದುಕೊಳ್ಳಬೇಕೆಂದು ಮನವಿ ಮಾಡಿದರು.

ಅಥಣಿ ನಗರದ ವೈಭವ್ ನಗರ ಬಡಾವಣೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಆದರ್ಶ ಶಿಕ್ಷಣ ಸಂಸ್ಥೆಯ ಕ್ಯಾಂಪಸ್ ನಲ್ಲಿ ಲಲಿತಕಲಾ ಮಹಾವಿದ್ಯಾಲಯದ ನೂತನ ಕಟ್ಟಡವಿದ್ದು ಅದೇ ಕಟ್ಟಡದಲ್ಲಿ ಪ್ರಸಕ್ತ ಸಾಲಿನಿಂದ ದಲಿತ ಕಲಾ ಮಹಾವಿದ್ಯಾಲಯ ಪ್ರಾರಂಭಗೊಳ್ಳಲಿದೆ ಎಂದ ಅವರು ನೂತನ ಕಟ್ಟಡದಲ್ಲಿ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತ ಎಲ್ಲ ಉಪಕರಣಗಳನ್ನು ಅಳವಡಿಸಲಾಗಿದೆ ಮತ್ತು ಕಲೆಯಲ್ಲಿ ಆಸಕ್ತಿ ಇರುವ ವಿದ್ಯಾರ್ಥಿಗಳಿಗೆ ಅನುಕೂಲಕ್ಕೆ ತಕ್ಕಂತೆ ವಾತಾವರಣವನ್ನ ಸೃಷ್ಟಿಸಲಾಗಿದೆ ಎಂದರು.  

ಕಾರ್ಯಕ್ರಮದಲ್ಲಿ ಸಾನಿಧ್ಯವನ್ನು ಶೆಟ್ಟರ ಮಠದ ಶ್ರೀ ಮರುಳ ಶಿದ್ಧ ಸ್ವಾಮೀಜಿ ವಹಿಸಿ ಮಾತನಾಡಿದರು. ಆದರ್ಶ ಶಿಕ್ಷಣ ಸಂಸ್ಥೆಯ ವೈಭವ್ ಐಹೊಳೆ,  ಜಿಲ್ಲಾ ಪಂಚಾಯತ್ ನ ಮಾಜಿ ಅಧ್ಯಕ್ಷ ಆಶಾ ಐಹೊಳೆ ಧುರೀಣರಾದ ಎಸ್ ಕೆ ಬುಟಾಳಿ, ಗಜಾನನ ಮಂಗಸೂಳಿ,  ಪ್ರಶಾಂತ ಐಹೊಳೆ, ಸುನಿಲ್ ಶಿವಣಗಿ, ಆನಂದ್ ಟೊಣಪಿ, ಸಿದ್ದಾರ್ಥ ಸಿಂಗೆ, ಪುರಸಭಾ ಸದಸ್ಯರಾದ ಸೈಯದ್ ಅಮೀನ್ ಗದ್ಯಾಳ, ವಿದ್ಯಾ ಐಹೊಳೆ, ಬಸವರಾಜ ಹಳ್ಳದಮಳ, ಬೀರ​‍್ಪ ಯಂಕಚ್ಚಿ, ಆದರ್ಶ ಶಿಕ್ಷಣ ಸಂಸ್ಥೆಯ ಆಡಳಿತ ಅಧಿಕಾರಿ ಸತೀಶ್ ಕುಲಕರ್ಣಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.