ಮಳೆ ಅವಾಂತರ ಫೋನ್ ಕರೆ ಸುಗಮ ಸಂಚಾರಕ್ಕೆ ದಾರಿ ಮಾಡಿದ ಪುರಸಭೆಯ ಹಿರಿಯ ಆರೋಗ್ಯ ನೀರೀಕ್ಷಣಾಧಿಕಾರಿ ಮಂಜುನಾಥ್ ಮುದಗಲ್

ಮಳೆ ಅವಾಂತರ ಫೋನ್ ಕರೆ ಸುಗಮ ಸಂಚಾರಕ್ಕೆ ದಾರಿ ಮಾಡಿದ ಪುರಸಭೆಯ ಹಿರಿಯ ಆರೋಗ್ಯ ನೀರೀಕ್ಷಣಾಧಿಕಾರಿ ಮಂಜುನಾಥ್ ಮುದಗಲ್ Manjunath Mudgal, Senior Municipal Health Inspector, who made a phone call during the rain incident

 ಲಕ್ಷ್ಮೇಶ್ವರ 15 :  " ಪಟ್ಟಣದಲ್ಲಿ ಗುರುವಾರ ಮಧ್ಯರಾತ್ರಿ ಗಾಳಿ ಗುಡುಗು ಮಿಂಚಿನೊಂದಿಗೆ ಸುರಿದ ಭಾರಿ ಮಳೆಗೆ ಪಟ್ಟಣದ ಇಟ್ಟಿಕೆರೆಯ ಪಕ್ಕದ ಸಾಯಿಬಾಬಾ ದೇವಸ್ಥಾನದ ಹತ್ತಿರ ನೀರು ಅರಿದು ಹೋಗದೆ ಮನೆಗಳಿಗೆ ನುಂಗುವ ಬಿತಿ ಉದ್ಭವಿಸಿತ್ತು ಇದನ್ನು ಮನಗಂಡ ಸ್ಥಳೀಯರು ಪುರಸಭೆಯ ಮುಖ್ಯಾಅಧಿಕಾರಿಗಳಿಗೆ ಫೋನ್ ಮಾಡಿ ತಿಳಿಸಿದ್ದಾರೆ  ಇದಕ್ಕೆ ತಕ್ಷಣ ಸ್ಪಂದಿಸಿದ ಪುರಸಭೆಯ ಹಿರಿಯ ಆರೋಗ್ಯ ನೀರೀಕ್ಷಣಾಧಿಕಾರಿ ಮಂಜುನಾಥ್ ಮುದುಗಲ್ ಅವರು ಜೆಸಿಬಿ ಸಿಬ್ಬಂದಿಗಳೊಂದಿಗೆ ಬಂದು ತಕ್ಷಣ ನೀರು ಹರಿದು ಹೋಗಲು ದಾರಿ ಮಾಡಿದ್ದಾರೆ ಹಾಗೂ ಈಶ್ವರ ನಗರ ಹಾಗೂ ಪಿಎಸ್ ಬಿ ಡಿ ಬಾಲಕಿಯರ ಗೌಡ ಶಾಲೆಯ ರಸ್ತೆಯಲ್ಲಿ  ಗಿಡ ಬಿದ್ದು ರಸ್ತೆ ಸಂಚಾರ ಬಂದಾಗಿತ್ತು ಅದನ್ನು ತರವುಗೊಳಿಸುವುದರೊಂದಿಗೆ ಮಳೆಯಿಂದ ಆದ ಸಮಸ್ಯೆಯನ್ನು ತಕ್ಷಣ ಬಗೆಹರಿಸಿದ್ದಾರೆ  ಹಾಗೂ ಮಳೆ ಸೇರಿದಂತೆ ಇನ್ನಿತರ ಯಾವುದೇ ತುರ್ತು ಪರಿಸ್ಥಿತಿ ಸಮಯ ಕಂಡುಬಂದಲ್ಲಿ ಪುರಸಭೆಗೆ ಫೋನ್ ಮುಖಾಂತರ ತಿಳಿಸಿರಿ ಅದಕ್ಕಾಗಿ ಪುರಸಭೆಯಿಂದ ಪ್ರತ್ಯೇಕವಾಗಿ ತಂಡವನ್ನು ರಚಿಸಲಾಗಿದೆ ಎಂದು ಹಿರಿಯ ಆರೋಗ್ಯ ನೀರೀಕ್ಷಣಾಧಿಕಾರಿ ಮಂಜುನಾಥ್ ಮುದುಗಲ್ ಅವರು ತಿಳಿಸಿದ್ದಾರೆ