ಅರಳಿಹಟ್ಟಿ ಗ್ರಾಮದಲ್ಲಿ ಹೆಲ್ತ ವೆಲ್ ನೆಸ್ ಕ್ಲಿನಿಕ್ ಗೆ ಶಾಸಕ ರಾಜು ಕಾಗೆ ಶಂಕುಸ್ಥಾಪನೆ
MLA Raju Kage lays foundation stone for health and wellness clinic in Aralihatti village
ಅರಳಿಹಟ್ಟಿ ಗ್ರಾಮದಲ್ಲಿ ಹೆಲ್ತ ವೆಲ್ ನೆಸ್ ಕ್ಲಿನಿಕ್ ಗೆ ಶಾಸಕ ರಾಜು ಕಾಗೆ ಶಂಕುಸ್ಥಾಪನೆ
ಅಥಣಿ 09: ಗ್ರಾಮೀಣ ಪ್ರದೇಶದ ಜನರಿಗೆ ವೈದ್ಯಕೀಯ ಸೇವೆ ಸುಲಭವಾಗಿ ಲಭ್ಯವಾಗುವ ನಿಟ್ಟಿನಲ್ಲಿ ಕಾಗವಾಡ ಮತಕ್ಷೇತ್ರದ ಗಡಿ ಭಾಗದ ಅರಳಿಹಟ್ಟಿ ಗ್ರಾಮದಲ್ಲಿ ಹೆಲ್ತ ವೆಲ್ ನೆಸ್ ಕ್ಲಿನಿಕ್ ಗೆ ಶಂಕುಸ್ಥಾಪನೆ ನೆರವೇರಿಸಿರುವೆ ಎಂದು ಕಾಗವಾಡ ಶಾಸಕ ರಾಜು ಕಾಗೆ ಹೇಳಿದರು.
ಅವರು ಜಿಲ್ಲಾ ಪಂಚಾಯತನ 15 ನೇ ಹಣಕಾಸು ಯೋಜನೆಯಡಿ 50 ಲಕ್ಷ ಅನುದಾನದಲ್ಲಿ ಮಂಜೂರಾದ ಹೆಲ್ತ ವೆಲ್ ನೆಸ್ ಕ್ಲಿನಿಕ್ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡುತ್ತಿದ್ದರು. ಪ್ರತಿ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಕನಿಷ್ಠ ಒಂದಾದರೂ ಇಂತಹ ಕ್ಲಿನಿಕ್ ನ್ನು ಪ್ರಾರಂಭಿಸುವ ಉದ್ದೇಶ ತಮ್ಮದಾಗಿದ್ದು, ಇದರಿಂದ ಗ್ರಾಮೀಣ ಜನರಿಗೆ ಸಾಮಾನ್ಯ ಮತ್ತು ತುರ್ತು ಸಂದರ್ಭಗಳಲ್ಲಿ ಚಿಕಿತ್ಸೆ ಪಡೆಯಲು ಅನಕೂಲವಾಗುತ್ತದೆ ಎಂದ ಅವರು ಕಾಗವಾಡ ಮತಕ್ಷೇತ್ರದ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಮೇಲ್ದರ್ಜೆಗೇರಿಸುವ ಪ್ರಸ್ತಾವನೆಯನ್ನು ಕೂಡ ಸರಕಾರಕ್ಕೆ ಸಲ್ಲಿಸಲಾಗುವುದು ಎಂದರು.
ಇದೇ ಅಕ್ಟೋಬರ್ 10 ಶುಕ್ರವಾರದಂದು ಬಿಡಿಸಿಸಿ ಬ್ಯಾಂಕಿನ ನಿರ್ದೇಶಕ ಸ್ಥಾನಕ್ಕೆ ನಾನು ಮತ್ತು ಅಥಣಿ ಶಾಸಕ ಲಕ್ಷ್ಮಣ ಸವದಿ ನಾಮ ಪತ್ರ ಸಲ್ಲಿಸುತ್ತಿದ್ದು, ನಾನು ಯಾವುದೇ ಪ್ಯಾನಲ್ ನಲ್ಲಿ ಗುರುತಿಸಿಕೊಂಡಿಲ್ಲ ನನ್ನದು ರಾಜು ಕಾಗೆ ಪ್ಯಾನಲ್ ಎಂದು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು ಖಿಳೇಗಾಂವ ಬಸವೇಶ್ವರ ಏತ ನೀರಾವರಿ ಯೋಜನೆಯ ಎರಡನೇ ಹಂತದ ಕಾಮಗಾರಿಗೆ ಬಾಕಿ ಉಳಿದ 15 ಕೋಟಿ ಅನುದಾನ ದೀಪಾವಳಿ ಹಬ್ಬದ ಸಮಯದಲ್ಲಿ ಕೊಡುತ್ತಾರೆ ಎಂದು ಮುಖ್ಯ ಮಂತ್ರಿ ಸಿದ್ಧರಾಮಯ್ಯ ಭರವಸೆ ನೀಡಿದ್ದಾರೆ ಎಂದರು.
ಇದೇ ಸಂದರ್ಭದಲ್ಲಿ 20 ಲಕ್ಷ ವೆಚ್ಚದ ಸಂಬರಗಿ ಗ್ರಾಮದ ವಿಠ್ಠಲ್ ಮಂದಿರದ ಸಮುದಾಯ ಭವನಕ್ಕೆ ಶಾಸಕರು ಭೂಮಿ ಪೂಜೆ ನೆರವೇರಿಸಿದರು. ಈ ಸಂದರ್ಭದಲ್ಲಿ ಅರಳಿಹಟ್ಟಿ ಗ್ರಾಮ ಪಂಚಾಯತ ಅಧ್ಯಕ್ಷ ಬಸನಗೌಡ ಪಾಟೀಲ, ಜಿ.ಪಂ ಅಧಿಕಾರಿಗಳಾದ ವೀರಣ್ಣಾ ವಾಲಿ, ಮಡಿವಾಳ ಪಾಟೀಲ, ಹೆಲ್ತ ಮತ್ತು ಫ್ಯಾಮಿಲಿ ವೆಲ್ ಫೇರ್ ಎ.ಇ ರಾಜಕೀಶೋರ, ಗುತ್ತಿಗೆದಾರರಾದ ವ್ಹಿ.ಬಿ.ಅಳಗುಂಡಿ, ದೀಪಕ್ ಪವಾರ, ಸುಹಾಸ ಬಿರಾದಾರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಚಿನ್ನ ದೋಚಿದ್ದ ಖದೀಮನ ಬಂಧನ : 15.73 ಲಕ್ಷ ಮೌಲ್ಯದ 103.97 ಗ್ರಾಂ ಚಿನ್ನ ವಶ
ಕಣಗಲಾ ಬಳಿ ಲಾರಿ, ದ್ವಿಚಕ್ರವಾಹನ ನಡುವೆ ಅಪಘಾತ : ಇಬ್ಬರ ಸಾವು
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್ 