ಎಂ.ಶಾಂತರಾಜ್ ಗೆ ಸದ್ಭಾವನಾ ವೇದಿಕೆಯಿಂದ ಸನ್ಮಾನ
M. Shantharaj honored by Sadbhavana Vedike
ಕೊಪ್ಪಳ 16 : ಕಿರ್ಲೋಸ್ಕರ್ ಕಾರ್ಖಾನೆಯಲ್ಲಿ ತಾಂತ್ರಿಕ ವಿಭಾಗದಲ್ಲಿ 31 ವರ್ಷ 5 ತಿಂಗಳುಗಳ ಕಾಲ ಸೇವಾ ಕಾರ್ಯ ಕಾರ್ಯನಿರ್ವಹಿಸಿ ಎಂ .ಶಾಂತರಾಜ್ ರವರು ಇದೇ ತಿಂಗಳ ಐದು ರಂದು ವಯೋ ನಿವೃತ್ತಿ ಹೊಂದಿದ್ದಾರೆ.
ಈ ಸಂದರ್ಭ ದಲ್ಲಿ ಅವರಿಗೆ ಕೊಪ್ಪಳ ಸದ್ಭಾವನಾ ವೇದಿಕೆ ವತಿಯಿಂದ ಅಧ್ಯಕ್ಷರಾದ ಡಾ. ಸುಶೀಲ್ ಕುಮಾರ್ ಕಲಾಲ್ ರವರ ನೇತೃತ್ವ ದಲ್ಲಿ ವೇದಿಕೆಯ ಪದಾಧಿಕಾರಿಗಳು ಸೇರಿ ಸನ್ಮಾನ ಮಾಡಿ ಅವರನ್ನು ಶುಭ ಕೋರಿ ಅಭಿನಂದಿಸಲಾಯಿತು, ಎಂ.ಶಾಂತರಾಜ್ ರವರು ಕೊಪ್ಪಳ ಸದ್ಭಾವನಾ ವೇದಿಕೆ ಯಲ್ಲಿ ಸಕ್ರಿಯರಾಗಿ ಕಾರ್ಯ ನಿರ್ವಹಿಸುತ್ತಾ ಪ್ರತಿಯೊಬ್ಬರಲ್ಲಿ ರಾಷ್ಟ್ರೀಯ ಭಾವೈಕ್ಯತೆ ಮೂಡಿಸುವಂತಹ ದಿಶೆಯಲ್ಲಿ ಕ್ರಿಯಾಶೀಲರಾಗಿ ಕಾರ್ಯ ನಿರ್ವಹಿಸುತ್ತಿರುವ ಅವರು ಈಗ ವಯೋ ನಿವೃತ್ತಿ ಹೊಂದಿದ್ದು ಈಗ ವೇದಿಕೆಯಲ್ಲಿ ಪೂರ್ಣ ಪ್ರಮಾಣ ದಲ್ಲಿ ಇನ್ನು ಹೆಚ್ಚಿನ ರೀತಿಯಲ್ಲಿ ಸೇವೆ ಸಲ್ಲಿಸಲಿ ಎಂದು ಶುಭ ಹಾರೈಸಲಾಯಿತು.ಅಲ್ಲದೆ ಕಿರ್ಲೋಸ್ಕರ್ ಕಾರ್ಖಾನೆಯಲ್ಲಿ ಸೇವೆ ಸಲ್ಲಿಸುತ್ತಾ ಸಂದರ್ಭದಲ್ಲಿ 2006ರಲ್ಲಿ ಕಾರ್ಖಾನೆಯ ಅತ್ಯುತ್ತಮ "ಸುರಕ್ಷತಾ ಉದ್ಯೋಗಿ "ಎಂದು ರಾಜ್ಯ ಸರ್ಕಾರದಿಂದ ಪ್ರಶಸ್ತಿ ಕೂಡ ಲಭಿಸಿದೆ ಅಲ್ಲದೆ ವಿವಿಧ ಪ್ರಶಸ್ತಿ ಕೂಡ ಇವರ ಉತ್ತಮ ಸೇವೆಗಾಗಿ ಲಭಿಸಿರುವುದು ಇಲ್ಲಿ ಸ್ಮರಿಸಬಹುದಾಗಿದೆ.
ಈ ಸಂದರ್ಭದಲ್ಲಿ ಕೊಪ್ಪಳ ಸದ್ಭಾವನಾ ವೇದಿಕೆ ಅಧ್ಯಕ್ಷ ಡಾ, ಸುಶೀಲ್ ಕುಮಾರ್ ಕಲಾಲ್ ಸೇರಿದಂತೆ ವೇದಿಕೆಯ ಕಾರ್ಯದರ್ಶಿ ಸೈಯದ್ ಹಿದಾಯತ್ ಅಲಿ ಅಲ್ಲದೆ ಹೋರಾಟಗಾರ ಡಿ.ಎಚ್. ಪೂಜಾರ್ ಸಾಹಿತಿ ಪತ್ರಕರ್ತ ಜಿ.ಎಸ್. ಗೋನಾಳ, ಈಶ್ವರ್ ಕೊರಲಹಳ್ಳಿ ನ್ಯಾಯವಾದಿ ಅಮರೇಶ್ ಪಾಟೀಲ್ ಮತ್ತಿತರರು ಪಾಲ್ಗೊಂಡಿದ್ದರು
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ 