ಮಾನವೀಯ ಮೌಲ್ಯ ಬೆಳೆಸಿಕೊಂಡು ಜೀವನ ಸಾಗಿಸಿದರೆ ಬದುಕು ಸಾರ್ಥಕ: ಗೋನಾಳ
Life is meaningful if you live your life with human values: Gonal
ಕೊಪ್ಪಳ 24: ಡಾ. ಸಿದ್ದಯ್ಯ ಪುರಾಣಿಕರು ಹೇಳಿದಂತೆ ನೀ ಏನಾದರೂ ಆಗು ಮೊದಲು ಮಾನವನಾಗು ಎಂಬಂತೆ ಈ ನಾಡಿನ ಪ್ರತಿಯೊಬ್ಬ ಮನುಷ್ಯ ತನ್ನ ಜೀವನದಲ್ಲಿ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಂಡು ಜೀವನ ಸಾಗಿಸಿದರೆ ಬದುಕು ಸಾರ್ಥಕವಾಗುತ್ತದೆ ಎಂದು ಸಾಹಿತಿ ಪತ್ರಕರ್ತ ಹಾಗೂ ಕೊಪ್ಪಳ ಜಿಲ್ಲಾ ನಾಗರಿಕರ ವೇದಿಕೆ ಅಧ್ಯಕ್ಷ ಜಿ,ಎಸ್, ಗೋನಾಳ ಹೇಳಿದರು.ಅವರು ಶನಿವಾರ ಸಂಜೆ ನಗರದ ಸಾಹಿತ್ಯ ಭವನದಲ್ಲಿ ಡಾ, ಸಿದ್ದಯ್ಯ ಪುರಾಣಿ ಸ್ಮಾರಕ ಟ್ರಸ್ಟ್ ವತಿಯಿಂದ ಜರುಗಿದ 18ನೇ ತಿರುಳು ಗನ್ನಡ ಸಾಂಸ್ಕೃತಿಕ ಸಮ್ಮೇಳನ ದಲ್ಲಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.ಕೊಪ್ಪಳ ಜಿಲ್ಲಾ ನಾಗರಿಕರ ವೇದಿಕೆ ವತಿಯಿಂದ ಕಳೆದ 18 ವರ್ಷ ಗಳಿಂದ ಪ್ರತಿ ವರ್ಷ ಜಿಲ್ಲಾ ಉತ್ಸವ ಆಚರಣೆ ಮಾಡುತ್ತಾ ಈ ಭಾಗದ ಸಂಸ್ಕೃತಿ ಕಲೆ ಪರಂಪರೆ ಗಳನ್ನು ಯುವ ಪೀಳಿಗೆಗೆ ಪರಿಚಯಿಸುವಂಥ ಕೆಲಸ ಮಾಡುತ್ತಿದೆ.
ಇಂಥ ಕಾರ್ಯ ಗಳಿಗೆ ಸರ್ಕಾರದ ಮತ್ತು ಜನಪ್ರತಿನಿಧಿಗಳ ಪ್ರೋತ್ಸಾಹ ಅಗತ್ಯವಾಗಿದೆ ಎಂದು ಸಾಹಿತಿ ಪತ್ರಕರ್ತ ಹಾಗೂ ಕೊಪ್ಪಳ ಜಿಲ್ಲಾ ನಾಗರಿಕರ ವೇದಿಕೆ ಅಧ್ಯಕ್ಷ ಜಿ,ಎಸ್ ,ಗೋನಾಳ ಅಭಿಪ್ರಾಯ ಪಟ್ಟರು.ಸಮಾರಂಭದ ಉದ್ಘಾಟನೆಯನ್ನು ಸಾಹಿತಿ ಮಹೇಶ್ ಮನ್ನಾಪುರ ಮತ್ತು ಹಿರಿಯ ಕಲಾವಿದ ಶರಣಪ್ಪ ಹಡಪದ ನೆರವೇರಿಸಿದರು ಸಮಾರಂಭದ ಅಧ್ಯಕ್ಷತೆಯನ್ನು ವೇದಿಕೆಯ ಗೌರವಾಧ್ಯಕ್ಷ ಎಂ,ಬಿ, ಅಳವಂಡಿ ವಹಿಸಿದ್ದರು.
ವೇದಿಕೆ ಮೇಲೆ ಮುಖ್ಯ ಅತಿಥಿಗಳಾಗಿ ಶ್ರೀ ಅಕ್ಕಮಹಾದೇವಿ ಮಹಿಳಾ ಮಂಡಳದ ನಿಕಟ ಪೂರ್ವ ಅಧ್ಯಕ್ಷರಾದ ಕೋಮಲ ಕುದುರೆಮೋತಿ ನೂತನ ಅಧ್ಯಕ್ಷರಾದ ಮಧು ಪಂಡಿತ್ ಹಡಗಲಿ ಉಪಾಧ್ಯಕ್ಷರಾದ ಸುಧಾ ಚಕ್ಕಿ ಕಿನ್ನಾಳ ಗ್ರಾಮ ಪಂಚಾಯಿತಿ ಸದಸ್ಯರಾದ ಮಂಜುನಾಥ್ ಕುರುಬರು ಪ್ರಶಸ್ತಿ ಪುರಸ್ಕೃತರಾದ ಕಿನ್ನಾಳ ಗ್ರಾಮ ಪಂಚಾಯಿತಿ ಸದಸ್ಯ ಹನುಮೇಶ್ ಕೋವಿ, ನಿವೃತ್ತಿ ವೃತ್ತಿ ಶಿಕ್ಷಕ ಅಮೀರ್ ಹಮ್ಜಾ ನದಾಫ್ , ಲಕ್ಷ್ಮಿ ಪ್ಯಾಲೇಸಿನ ಸಂಜಯ್ ಅಡ್ಡದಾರ್, ಹೊಸಪೇಟೆ ಸ್ಟೀಲ್ ಕಾರ್ಖಾನೆ ಗಿಣಿಗೇರಿಯ ಸಹಾಯಕ ಫೋರ್ ಮೆನ್ ರಾಚಪ್ಪ ಗೊಂಡಬಾಳ,
ಲಿಯೋ ಉಡನ್ ರಿಸಾರ್ಟ್ ನ ಶೀರಿಶ್, ಪಿ , ಕಿನ್ನಾಳ ಗ್ರಾಮದ ವೀರೇಶ್ ಕಲಾಲ್ ಗುಜರೆಕಾರ ಮತ್ತು ಜಿಲ್ಲಾ ಸರ್ಕಾರಿ ನೌಕರರ ಸಂಘದ ವ್ಯವಸ್ಥಾಪಕ ಯಶವಂತ ಕುಮಾರ್ ಸೇರಿದಂತೆ ವೇದಿಕೆಯ ರಾಜ್ಯ ಉಪಾಧ್ಯಕ್ಷರಾದ ಸಿದ್ದಪ್ಪ ಹಂಚಿನಾಳ ತಿರುಳುಗನ್ನಡ ಪ್ರತಿಷ್ಠಾನದ ಅಧ್ಯಕ್ಷರಾದ ಸಾಧಿಕ್ ಅಲಿ ಪತ್ರಕರ್ತರಾದ ಶಿವು ಕುಮಾರ್ ಹಿರೇಮಠ ಸಿದ್ದು ಹಿರೇಮಠ ಅಬ್ದುಲ್ ಅಜೀಜ್ ಮಾನ್ವಿ ಕರ್ ಸಂಗೀತ ಕಲಾವಿದೆ ಅನ್ನಪೂರ್ಣಮ್ಮ ಮನ್ನಾಪುರ ಕಾರ್ಯಕ್ರಮ ಸಂಘಟಕರಾದ ಮಹೇಶ್ ಬಾಬು ಸುರುವೇ ಮತ್ತು ಉಮೇಶ್ ಬಾಬು ಸುರುವೇ ಸೇರಿದಂತೆ ಅನೇಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು,ನಂತರ ವಿವಿಧ ಕಲಾ ತಂಡಗಳಿಂದ ಮತ್ತು ಶಾಲಾ ಕಾಲೇಜು ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿ ಜನ ಮನ ರಂಜಿಸಿತು
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ 