ಶರಣ ಸಿದ್ಧಾಂತಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಜೀವನ ಸಾಗಿಸಲು ಸಾಧ್ಯ.ಶಿಕ್ಷಕ.ಮುದುಕಪ್ಪ

ಶರಣ ಸಿದ್ಧಾಂತಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಜೀವನ ಸಾಗಿಸಲು ಸಾಧ್ಯ.ಶಿಕ್ಷಕ.ಮುದುಕಪ್ಪ   Life can only be lived when the principles of surrender are implemented in life. Teacher. Mudukappa

ಲೋಕದರ್ಶನ ವರದಿ

 ಕಂಪ್ಲಿ 02 : ಇಲ್ಲಿನ ಗಂಗಾ ಸಂಕೀರ್ಣದಲ್ಲಿ ತಾಲೂಕು ಶರಣ ಸಾಹಿತ್ಯ ಪರಿಷತ್ ಹಮ್ಮಿಕೊಂಡಿದ್ದ 190ನೇ ಮಹಾಮನೆ ಕಾರ್ಯಕ್ರಮ ನಡೆಯಿತು. ಚಿಕ್ಕಜಾಯಿಗನೂರಿನ ಸರ್ಕಾರಿ ಪ್ರೌಢಶಾಲೆ ಶಿಕ್ಷಕ ಮುದುಕಪ್ಪ ನೆಲಜೇರಿ ‘ನಿತ್ಯ ಜೀವನದಲ್ಲಿ ಶರಣರ ಸಿದ್ಧಾಂತ ಮಹತ್ವ’ ಉಪನ್ಯಾಸ ನೀಡಿ, ನಿತ್ಯ ಜೀವನದಲ್ಲಿ ಶರಣ ಸಿದ್ಧಾಂತಗಳನ್ನು ಅಳವಡಿಸಿಕೊಂಡಲ್ಲಿ ಅರ್ಥಪೂರ್ಣ ಜೀವನ ಸಾಗಿಸಲು ಸಾಧ್ಯ. ಜಗತ್ತಿನ ಜನತೆ ಸಾಮರಸ್ಯದಿಂದ ಬದುಕುವಂತೆ ಜಾಗೃತಿಗೊಳಿಸುವ ತಿರುಳು ವಚನ ಸಾಹಿತ್ಯದಲ್ಲಿದೆ. ಶಿಕ್ಷಣದ ಎಲ್ಲಾ ಹಂತಗಳಲ್ಲೂ ವಚನ, ವಚನ ಸಾಹಿತ್ಯ ಮಹತ್ವ ಪಠ್ಯವಾಗಬೇಕಿದೆ ಎಂದರು. ರಂಗಭೂಮಿ ಕಲಾವಿದ ಜೀರು ಮಲ್ಲಿಕಾರ್ಜುನ ಮಾತನಾಡಿ, ಸಮಾಜದ ಅಂಕುಡೊಂಕುಗಳನ್ನು ತಿದ್ದಿ ಸಮಾನತೆಗಾಗಿ ಶ್ರಮಿಸಿದರು.

ಮಕ್ಕಳು, ಯುವಜನತೆ ಮೊಬೈಲ್ ಗೀಳಿಗೆ ಈಡಾಗುತ್ತಿದ್ದು ನೆಮ್ಮದಿ ಕಸಿದಿದೆ. ಮೊಬೈಲ್‌ರಹಿತ ಜೀವನ ನಡೆಸುವುದು ಕಷ್ಟಕರ ಎಂಬಂತಾಗಿದೆ ಎಂದರು.ಲಿಂಗಾಯತ ಮಹಾಸಭಾದ ತಾಲೂಕು ಪದಾಧಿಕಾರಿ ಬಿ.ಎಂ.ರುದ್ರಯ್ಯ ಅಧ್ಯಕ್ಷತೆವಹಿಸಿದ್ದರು ಪರಿಷತ್ ಕಾರ್ಯಾಧ್ಯಕ್ಷ ಬಂಗಿ ದೊಡ್ಡ ಮಂಜುನಾಥ, ಪದಾಧಿಕಾರಿಗಳಾದ ಚಂದ್ರಯ್ಯ ಸೊಪ್ಪಿಮಠ, ಎಸ್‌.ಶಾಮಸುಂದರರಾವ್, ಡಾ.ಬಿ.ಸುನಿಲ್, ಎಸ್‌.ಡಿ.ಬಸವರಾಜ, ಎಲಿಗಾರ ವೆಂಕಟರೆಡ್ಡಿ, ಅಶೋಕ ಕುಕನೂರು, ಸೋಗಿ ಸಂತೋಷ, ಬಡಿಗೇರ ಜಿಲಾನ್‌ಸಾಬ್, ನಟರಾಜ ಸಾಮಂತ್ರಿ, ಗವೀವೀರನಗೌಡ, ಬಿಎಚ್‌ಎಂ ಚಂದ್ರಮಹೇಶಶಾಸ್ತ್ರಿ ಸೇರಿ ಇತರರಿದ್ದರು.