ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗೆ ಎಲ್ಲರೂ ಒಟ್ಟಾಗಿ ಕೆಲಸಮಾಡೋಣ -ಜಿ.ಪಂ.ಸಿಇಒ ದಲ್ಜೀತ್‌ಕುಮಾರ

ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗೆ ಎಲ್ಲರೂ  ಒಟ್ಟಾಗಿ ಕೆಲಸಮಾಡೋಣ -ಜಿ.ಪಂ.ಸಿಇಒ ದಲ್ಜೀತ್‌ಕುಮಾರ Let us all work together for the all-round development of the district - G.P. CEO Daljit Kumar

ಹಾವೇರಿ :   ಜಿಲ್ಲೆಯ ಅಭಿವೃದ್ಧಿ ನಮ್ಮ ಮುಖ್ಯ  ಉದ್ದೇಶವಾಗಿದ್ದು, ಕುಡಿಯುವ ನೀರು, ಶಿಕ್ಷಣ, ಆರೋಗ್ಯ ಸೇರಿದಂತೆ ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಎಲ್ಲರೂ  ಒಟ್ಟಾಗಿ ಕೆಲಸಮಾಡೋಣ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ದಲ್ಜಿತ್‌ಕುಮಾರ ಅವರು  ಹೇಳಿದರು. ಜಿಲ್ಲಾ ಪಂಚಾಯತ್ ವಿಡಿಯೋ ಸಂವಾದ ಕೊಠಡಿಯಲ್ಲಿ ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು,  ಕುಡಿಯುವ ನೀರಿನ ಕುರಿತು ಈಗಾಗಲೇ ಸಭೆ ಮಾಡಲಾಗಿದೆ. ಜಿಲ್ಲೆಯಲ್ಲಿ ಈ ವರ್ಷದ ಬೇಸಿಗೆ ಅವಧಿಯಲ್ಲಿ ಕುಡಿಯುವ ನೀರಿನ ಅಭಾವ ಉಂಟಾಗುವ ಗ್ರಾಮಗಳನ್ನು ಗುರುತಿಸಿ ಇದುವರೆಗೆ ಒಟ್ಟು 91 ಖಾಸಗಿ ಬೋರವೆಲ್‌ಗಳು,  82 ಹೊಸ ಬೋರವೆಲ್ ಮತ್ತು 13 ಬೋರವೆಲ್‌ಗಳನ್ನು ಪ್ಲಷಿಂಗ್ ಮಾಡಿಸಿ, ಜಿಲ್ಲೆಯ ಯಾವುದೇ ಗ್ರಾಮಗಳಿಗೆ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.  

ಬಹುಗ್ರಾಮ ಕುಡಿಯುವ ನೀರಿನ ಯೋಜನೆ: ಹಾವೇರಿ ಜಿಲ್ಲೆಗೆ ಒಟ್ಟು ರೂ. 1325.00 ಕೋಟಿ ಮೊತ್ತದ ಮೂರು ಬಹು ಗ್ರಾಮ ಕುಡಿಯುವ ನೀರಿನ ಯೋಜನೆ ಕಾಮಗಾರಿಗಳು ಪ್ರಗತಿಯಲ್ಲಿವೆ. ತಡಸ ಮತ್ತು ಇತರೇ 291 ಗ್ರಾಮಗಳಿಗೆ (ಹಾನಗಲ್ಲ-112,ಹಾವೇರಿ-37, ಶಿಗ್ಗಾಂವ -93 ಮತ್ತು ಸವಣೂರ - 49 ) ತುಂಗಭದ್ರಾ ನದಿಯಿಂದ ಬಹುಗ್ರಾಮ ಕುಡಿಯುವ ನೀರು ಪೂರೈಸುವ ಯೋಜನೆ ಭೌತಿಕವಾಗಿ ಶೇ 85.60 ರಷ್ಟು ಪೂರ್ಣಗೊಂಡಿದ್ದು,  ಶೇ 81.50ಅ ರಷ್ಟು (ರೂ 574.00 ಕೋಟಿ) ಆರ್ಥಿಕ ಪ್ರಗತಿ ಸಾಧಿಸಲಾಗಿದೆ. ಈಗಾಗಲೇ ಜಾಕ್ ವೆಲ್ ನಿಂದ ಘಖಿಕ ರವರೆಗೆ ಟ್ರಯಲ್ ರನ್ ಮಾಡಲಾಗಿರುತ್ತದೆ. 2026 ರ ಅಗಷ್ಟ ಮಾಹೆಯ ಅಂತ್ಯದೊಳಗಾಗಿ ಯೋಜನೆಯನ್ನು ಪೂರ್ಣಗೊಳಿಸಿ ಜಿಲ್ಲೆಯ 291 ಜನವಸತಿ ಪ್ರದೇಶಗಳಿಗೆ ಕುಡಿಯುವ ನೀರನ್ನು ಪೂರೈಸಲಾಗುವುದು ಎಂದರು.