ಕುಕನೂರ್

ನಮಗಾಗಿ, ದೇಶದ ಒಳತಿಗಾಗಿ ಬದುಕುವವರನ್ನ ಸ್ಮರಿಸೋಣ: ಚಂದ್ರಶೇಖರಯ್ಯ

ನಮಗಾಗಿ, ದೇಶದ ಒಳತಿಗಾಗಿ ಬದುಕುವವರನ್ನ ಸ್ಮರಿಸೋಣ: ಚಂದ್ರಶೇಖರಯ್ಯ

ಅನ್ನದಾನೀಶ್ವರ ಮಠದಲ್ಲಿ ಗಣೇಶ ಹಬ್ಬದ ನಿಮಿತ್ಯ ಮಾಜಿ ಸೈನಿಕರಿಗೆ ಸನ್ಮಾನ 

ಕುಕನೂರ21: ನಮಗಾಗಿ, ದೇಶದ ಒಳತಿಗಾಗಿ ಬದುಕುವರನ್ನ ಮತ್ತು ಹೋರಾಡುವವರನ್ನ ಸಮಾಜ ಸದಾಕಾಲ ಸ್ಮರಣೆ ಮಾಡಬೇಕು ವಿಶೇಷವಾಗಿ ಸೈನಿಕರನ್ನ ಗೌರವಿಸಬೇಕು ಎಂದು ಯುವ ಮುಖಂಡ ಚಂದ್ರಶೇಖರಯ್ಯ ಸರಗಣಾಚಾರ ಹೇಳಿದರು.   

ಕುಕನೂರ ಪಟ್ಟಣದ ಅನ್ನದಾನೀಶ್ವರ ಮಠದಲ್ಲಿ ಗಣೇಶ ಹಬ್ಬದ ನಿಮಿತ್ಯ ಮಾಜಿ ಸೈನಿಕರಿಗೆ ಸನ್ಮಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತ್ತಾ ಸೈನಿಕರು ನಮ್ಮೆಲ್ಲರ ಆಸ್ತಿ ಅವರನ್ನ ಸದಕಾಲ ಗೌರವದಿಂದ ಕಾಣುತ್ತಾ, ಅವರ ಕಾಯಕವನ್ನ ಸ್ಮರಣೆ ಮಾಡುತ್ತೀರಬೇಕು ಎಂದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ಮಾಜಿ ಸೈನಿಕರಾದ ಶಿವಾನಂದಪ್ಪ ಜೀವಣ್ಣನವರು ಶ್ರೀಮಠದ ಪೂಜ್ಯರು ಗಣೇಶ ಹಬ್ಬದ ನಿಮಿತ್ಯ ನಮ್ಮನ್ನ ಸನ್ಮಾನಿಸಿ ಗೌರವಿಸುತ್ತಿರುವುದು ಅತ್ಯಂತ್ಯ ಆನಂದ ತಂದಿದೆ, ನಾವುಗಳು ಮಕ್ಕಳಲ್ಲಿ ಜಾತಿ ಧರ್ಮ ಅಭಿಮಾನಕ್ಕಿಂತ ದೇಶ ಅಭಿಮಾನ ಬಿತ್ತುವ ಕಾಯಕವಾಗಬೇಕು, ನಾಡು ನುಡಿಗೆ ನಮ್ಮದೇ ಸೇವೆಯನ್ನ ಎಲ್ಲಾರು ಮಾಡಬೇಕು ಎಂದರು.      ಮ ನಿ ಪ್ರ ಡಾ ಮಹಾದೇವ ಸ್ವಾಮಿಗಳು, ಮಲ್ಲಯ್ಯ ಮುಳಗುಂದಮಠ, ಪ್ರಭು ಶಿವಶಿಂಪರ, ಶ್ರೀಶೈಲ್ ಎಚ್, ಸಂಗಮೆಶ ಕಲ್ಮಠ, ಮೇಘರಾಜ ಜಿಡಗಿ, ಕಾವ್ಯ ಗುರುಮಠ, ಮಾಜಿ ಸೈನಿಕರಾದ ಮಲ್ಲಪ ಕೆರಳ್ಳಿ, ನೂರೂದ್ದೀನ ಚಾಂದಬಾವಿ, ಬಸಯ್ಯ ಸರಗಣಾಚಾರ, ಶರಣಯ್ಯ ಒಂಟಿಗೋಡಿ, ರಾಚಯ್ಯ ಸರಗಣಚಾರ, ಹೇಮಂತಪ್ಪ ಆರೆರ, ಲಕ್ಷ್ಮಣ ಎಮ್, ಶಿವಪ್ಪ ರ್ಯಾವಣಕಿ, ಬಸಯ್ಯ ಹುಡೇದಗಡ್ಡಿ ಮತ್ತು ಇತರರು ಇದ್ದರು.

ಸುದ್ದಿ ಓದಿ