ಕರ್ನಾಟಕ-ತಮಿಳುನಾಡು ಗಡಿ ಬಂದ್
ಬೆಂಗಳೂರು, ಏ.11, ಕೊರೊನಾ ವೇಗವಾಗಿ ಹರಡುವುದನ್ನು ತಪ್ಪಿಸಲು ರಾಮನಗರ ಜಿಲ್ಲೆಯ ಕರ್ನಾಟಕ-ತಮಿಳುನಾಡು ಗಡಿ ಭಾಗವನ್ನು ಬಂದ್ ಮಾಡಿ ರಾಮನಗರ ಜಿಲ್ಲಾ ಎಸ್‌ಪಿ ಅನೂಪ್ ಎ ಶೆಟ್ಟಿ ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದಾರೆ.ಹೊರರಾಜ್ಯಗಳಿಂದ ಜನರು ರಾಜ್ಯಕ್ಕೆ ಬಂದರೆ ಕೊರೋನಾ ಸೋಂಕು ಹರಡುವುದು ಹೆಚ್ಚುವ ಸಾಧ್ಯತೆಯಿರುವ ಕಾರಣ ಕರ್ನಾಟಕದಿಂದ ತಮಿಳುನಾಡಿಗೆ, ಅಥವಾ ತಮಿಳುನಾಡಿನಿಂದ ಕರ್ನಾಟಕಕ್ಕೆ ಯಾವುದೇ ಸಂಚಾರಕ್ಕೆ ಅವಕಾಶವಿರಬಾರದು ಎಂದು ಆದೇಶದಲ್ಲಿ ತಿಳಿಸಲಾಗಿದೆ.ರಾಮನಗರ ಜಿಲ್ಲೆಯಲ್ಲಿ ಲಾಕ್ ಡೌನ್ ಉಲ್ಲಂಘನೆ ಸಂಬಂಧ ನಿನ್ನೆ ಒಂದೇ ದಿನ ಜಿಲ್ಲೆಯಲ್ಲಿ 24 ಪ್ರಕರಣ ದಾಖಲಾಗಿವೆ. ಲಾಕ್ ಡೌನ್ ನಡುವೆಯೂ ಅನಾವಶ್ಯಕವಾಗಿ ರಸ್ತೆಗಿಳಿದು ಓಡಾಡುವ ಜನರ ಮೇಲೆ ಕೇಸ್ ಹಾಕಲಾಗಿದ್ದು 24 ಪ್ರಕರಣದಲ್ಲಿ 24 ಜನರ ಮೇಲೆ ಪೊಲೀಸರು ದೂರು ದಾಖಲಿಸಿದ್ದಾರೆ. ಮಾತ್ರವಲ್ಲ ಕಾನೂನು ಉಲ್ಲಂಘಿಸಿ ಅಂಗಡಿ ತೆರೆದ ಮಾಲೀಕರ ಮೇಲೂ ಕೇಸ್ ದಾಖಲಾಗಿದ್ದು 5 ಹೋಟೆಲ್, 6 ಟೀ ಅಂಗಡಿ, ಹಾರ್ಡ್ ವೇರ್ ಶಾಪ್ ಮಾಲೀಕರ ಮೇಲೆ ಪ್ರಕರಣ ದಾಖಲಾಗಿವೆ.ಚನ್ನಪಟ್ಟಣದ ಕೋಡಂಬಳ್ಳಿಯಲ್ಲಿ ಅನಾವಶ್ಯಕವಾಗಿ ರಸ್ತೆಯಲ್ಲಿ ಓಡಾಡುತ್ತಿದ್ದ ಯುವಕರನ್ನು ನಿಲ್ಲಿಸಿ ಪೊಲೀಸರು 10 ಬೈಟಕ್ ಹೊಡೆಸಿದ್ದಾರೆ.
ಅಕ್ರಮವಾಗಿ ನೀರಾ ಮಾರಾಟ ಹಾಗೂ ಜೂಜಾಡುತ್ತಿದ್ದ ವಿಚಾರವಾಗಿ 10ಕ್ಕೂ ಹೆಚ್ಚು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ ಜಿಲ್ಲೆಯ ಪೊಲೀಸರು. ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿ ಲಾಕ್ ಡೌನ್ ಉಲ್ಲಂಘನೆ ಕಾನೂನು ಮತ್ತಷ್ಟು ಬಿಗಿಯಾಗಲಿದೆ ಎಂದು ಅನೂಪ್ ಎ ಶೆಟ್ಟಿ ಮಾಹಿತಿ ನೀಡಿದ್ದಾರೆ.ಗಡಿಯಲ್ಲಿ ನಾಲ್ವರು ಪೊಲೀಸ್ ಸಿಬ್ಬಂದಿ, ಇಬ್ಬರು ಆಶಾ ಕಾರ್ಯಕರ್ತೆಯರು ಮೊಕ್ಕಾಂ ಹೂಡಿದ್ದಾರೆ. ಬ್ಯಾರಿಕೇಡ್‌ಗಳನ್ನು ಅಳವಡಿಸಿ ಪೊಲೀಸರು ಗಡಿ ಬಂದ್ ಮಾಡಿದ್ದಾರೆ. ಜಿಲ್ಲೆಯ ಕನಕಪುರ ತಾಲೂಕಿನ ಹುಣಸನಹಳ್ಳಿ ಗ್ರಾಮದ ಗಡಿ ಬಂದ್ ಮಾಡಲಾಗಿದೆ. ಹುಣಸನಹಳ್ಳಿ ಗ್ರಾಮವು ಕರ್ನಾಟಕ, ತಮಿಳುನಾಡು ರಾಜ್ಯಕ್ಕೆ ಗಡಿ ಪ್ರದೇಶವಾಗಿದೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 