ರಾಜಕೀಯ ಮುತ್ಸದ್ದಿ ಧೀಮಂತ ನಾಯಕ ಎಚ್ . ಕೆ . ಪಾಟೀಲರಿಗೆ ಕ್ಯಾಬಿನೆಟ್ ಸಚಿವ ಸ್ಥಾನ ನೀಡಲು ಕನ್ನಡ ಕ್ರೈಸ್ತ ರಕ್ಷಣೆ ವೇದಿಕೆ ಆಗ್ರಹ
Kannada Christian Protection Forum demands that political and diplomatic stalwart leader H. K. Patil
ಲೋಕದರ್ಶನ ವರದಿ
ಗದಗ06:- ಉತ್ತರ ಕರ್ನಾಟಕ ಭಾಗದ ಹಿರಿಯ ಕಾಂಗ್ರೆಸ್ ನಾಯಕರು, ಶಾಸಕರು ಹಾಗೂ ಜನಸ್ಪಂಧನೆಯ ನಾಯಕರಾದ ಎಚ್ . ಕೆ . ಪಾಟೀಲ್ ಅವರಿಗೆ ಸನ್ಮಾನ ಡಿ ಕೆ ಶಿವಕುಮಾರ ರವರ ಸಂಪುಟದಲ್ಲಿ ಸಚಿವ ಸ್ಥಾನ ನೀಡುವಂತೆ ಆಗ್ರಹಿಸಿ ಉತ್ತರ ಕರ್ನಾಟಕದ ಕನ್ನಡ ಕ್ರೈಸ್ತ ರಕ್ಷಣೆ ವೇದಿಕೆ (ರಿ.) ಹಾಗೂ ಭಾರತೀಯರ ಸೇವಾ ಸಮಿತಿ (ರಿ.) ವತಿಯಿಂದ ಕಾಂಗ್ರೇಸ್ ಹೈ ಕಮಾಂಡ್ ಗೆ ಅಧ್ಯಕ್ಷರಾದ ಪಾಸ್ಟರ್ ಫ್ರಾನ್ಸಿಸ್ ಕನ್ನಯ್ಯ ಅವರ ನೇತೃತ್ವದಲ್ಲಿ ಕಾಂಗ್ರೆಸ್ ರಾಷ್ಟ್ರೀಯ ಹೈಕಮಾಂಡ್ ನಾಯಕರಿಗೆ ಪತ್ರವನ್ನು ಸಲ್ಲಿಸಲಾಯಿತು.
ಮನವಿ ಪತ್ರದಲ್ಲಿ, ಎಚ್. ಕೆ. ಪಾಟೀಲರು ಹಲವಾರು ದಶಕಗಳಿಂದ ಕಾಂಗ್ರೆಸ್ ಪಕ್ಷದ ತತ್ವ-ಸಿದ್ಧಾಂತಗಳಿಗೆ ಬದ್ಧರಾಗಿ ಸೇವೆ ಸಲ್ಲಿಸಿದ್ದು, ಪಕ್ಷದ ಸಂಕಷ್ಟದ ಸಂದರ್ಭಗಳಲ್ಲಿಯೂ ನಿಷ್ಠೆಯಿಂದ ಪಕ್ಷದ ಪರವಾಗಿ ನಿಂತು ಸಂಘಟನೆಯನ್ನು ಬಲಪಡಿಸಿದ್ದಾರೆ ಎಂದು ಉಲ್ಲೇಖಿಸಲಾಗಿದೆ. ಅವರ ರಾಜಕೀಯ ಅನುಭವ, ಆಡಳಿತಾತ್ಮಕ ಜ್ಞಾನ, ಪ್ರಾಮಾಣಿಕತೆ ಹಾಗೂ ಜನಸೇವೆಯ ಬದ್ಧತೆಯನ್ನು ಪರಿಗಣಿಸಿ ಸಚಿವ ಸ್ಥಾನ ನೀಡಬೇಕೆಂದು ಮನವಿಯಲ್ಲಿ ಆಗ್ರಹಿಸಲಾಗಿರುತ್ತದೆ. ಅಲ್ಲದೆ, ಎಚ್. ಕೆ. ಪಾಟೀಲರಿಗೆ ಸಚಿವ ಸ್ಥಾನ ನೀಡುವುದರಿಂದ ಉತ್ತರ ಕರ್ನಾಟಕದ ಜನರ ಆಶಯಗಳಿಗೆ ಗೌರವ ದೊರೆಯುವುದರ ಜೊತೆಗೆ ಕಾಂಗ್ರೆಸ್ ಕಾರ್ಯಕರ್ತರಲ್ಲಿ ನವ ಚೈತನ್ಯ ಉತ್ಸಾಹ ಮತ್ತು ವಿಶ್ವಾಸ ಮೂಡಲಿದೆ ಎಂದು ಪತ್ರದಲ್ಲಿ ಉಲ್ಲೇಖಸಲಾಗಿರುತ್ತದೆ.
ಈ ಕುರಿತು ಪತ್ರಿಕಾ ಪ್ರಕಟಣೆಯಲ್ಲಿ ಪಾಸ್ಟರ್ ಫ್ರಾನ್ಸಿಸ್ ಕನ್ನಯ್ಯ ಅವರು, "ಉತ್ತರ ಕರ್ನಾಟಕದ ಜನರು ಹಾಗೂ ಕಾಂಗ್ರೆಸ್ ಕಾರ್ಯಕರ್ತರ ಆಶಯವಾದ ಎಚ್. ಕೆ. ಪಾಟೀಲರಿಗೆ ಸಚಿವ ಸ್ಥಾನ ನೀಡುವ ವಿಚಾರವನ್ನು ಕಾಂಗ್ರೆಸ್ ಹೈಕಮಾಂಡ್ ಸಕಾರಾತ್ಮಕವಾಗಿ ಪರಿಗಣಿಸಬೇಕು. ಅನುಭವಿ ನಾಯಕನಿಗೆ ಸೂಕ್ತ ಸ್ಥಾನಮಾನ ನೀಡುವ ಮೂಲಕ ಉತ್ತರ ಕರ್ನಾಟಕದ ಧ್ವನಿಗೆ ನ್ಯಾಯ ಒದಗಿಸಬೇಕು" ಎಂದು ಉತ್ತರ ಕರ್ನಾಟಕ ಕನ್ನಡ ಕ್ರೈಸ್ತ ರಕ್ಷಣೆ ವೇದಿಕೆ (ರಿ.) ಭಾರತೀಯರ ಸೇವಾ ಸಮಿತಿ (ರಿ) ಯ ಅಧ್ಯಕ್ಷರಾದ ಪಾಸ್ಟರ್ ಫ್ರಾನ್ಸಿಸ್ ಕನ್ನಯ್ಯ ರವರು ಲಿಖಿತ ಮನವಿಯ ಮೂಲಕ ಆಗ್ರಹಿಸಿರುತ್ತಾರೆ.
ಚಿನ್ನ ದೋಚಿದ್ದ ಖದೀಮನ ಬಂಧನ : 15.73 ಲಕ್ಷ ಮೌಲ್ಯದ 103.97 ಗ್ರಾಂ ಚಿನ್ನ ವಶ
ಕಣಗಲಾ ಬಳಿ ಲಾರಿ, ದ್ವಿಚಕ್ರವಾಹನ ನಡುವೆ ಅಪಘಾತ : ಇಬ್ಬರ ಸಾವು
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್ 