ಹೊಟ್ಟೆನೋವಿನಿಂದ ಬಳಲುತ್ತಿದ್ದ ಮಹಿಳೆ: ಆಸ್ಪತ್ರೆಗೆ ಸೇರಿಸಿ ಮಾನವೀಯತೆ ಮೆರೆದ ಪತ್ರಕರ್ತ ಹಾಗೂ ಪೊಲೀಸರು
Journalist and police showed humanity by admitting a woman suffering from stomach pain to the hospit
ಜಮಖಂಡಿ 22: ನಗರದ ಹೃದಯ ಭಾಗದಲ್ಲಿ ಇರುವ ಲಕ್ಕನಕೆರೆಯ ಹತ್ತಿರ ರಾತ್ರಿ 8 ಗಂಟೆಗೆ ಸುಮಾರಿಗೆ ಓರ್ವ ಮಹಿಳೆಯೊಬ್ಬಳು ಹೊಟ್ಟೆ ನೋವಿನಿಂದ ಬಳಲುತ್ತಾ ರಸ್ತೆಯ ಪಕ್ಕದಲ್ಲಿ ಬಿದ್ದು ಒದ್ದಾಡುವ ಸಮಯದಲ್ಲಿ ಪತ್ರಕರ್ತರು ಹಾಗೂ ಪೋಲಿಸರು ಸೇರಿ ಮಹಿಳೆಯನ್ನು ಆಸ್ಪತ್ರೆಗೆ ಸೇರಿಸಿ ಮಾನವೀಯತೆಯನ್ನು ಮೆರೆದಿದ್ದಾರೆ.
ತಾಲೂಕಿನ ಕಲ್ಹಳಿ ಗ್ರಾಮದ ಮಹಿಳೆ ನೀಲವ್ಬ ಎಂಬ ಮಹಿಳೆ ತನ್ನ ಹೆಸರು ಹೇಳಿದ್ದು. ಅವಳು ಅರೆಹುಚ್ಚಳು ಇರುವಳು ಎಂದು ಜನರು ಮಾತನಾಡುತ್ತಿದ್ದರು. ಆ ಮಹಿಳೆ ಹೊಟ್ಟೆ ನೋವಿನಿಂದ ಬಳಲುವ ಸಮಯದಲ್ಲಿ ಸರಿಯಾದ ಸಮಯಕ್ಕೆ ಅದೇ ಮಾರ್ಗದಲ್ಲಿ ಪತ್ರಕರ್ತರು ಹಾಗೂ ಪೋಲಿಸರು ಕಾರ್ಯಕ್ರಮಕ್ಕೆ ಹೋಗುವ ಸಮಯದಲ್ಲಿ ಮಹಿಳೆಯನ್ನು ಕಂಡು ಅವಳಿಗೆ ಧೈರ್ಯವನ್ನು ತುಂಬಿದ್ದಾರೆ. 108 ಅಂಬ್ಯುಲೇನ್ಸ್ ಮೂಲಕ ಆಸ್ಪತ್ರೆಗೆ ದಾಖಲು ಮಾಡಿದ ಪತ್ರಕರ್ತರಾದ ಶಶಿಕಾಂತ ತೇರದಾಳ, ರವಿ ದೊಡಮನಿ, ದೀಲೀಪ ದಾಶ್ಯಾಳ ಹಾಗೂ ಪೋಲಿಸ ಪದೇಗಳಾದ ರಾಜು ಪೂಜಾರಿ,ಶಿವನಗೌಡ ಪಾಟೀಲ ಮಾನವೀಯತೆಯನ್ನು ಮೆರೆದಿದ್ದಾರೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 