ಅಂತರರಾಷ್ಟ್ರೀಯ

ಎರ್ಬಿಲ್‍ ಮೇಲೆ ರಾಕೆಟ್‍ ದಾಳಿ: ಇರಾಕ್ -ಕುರ್ದಿಸ್ತಾನ ಪ್ರಧಾನಿ ತೀವ್ರ ಖಂಡನೆ

ಎರ್ಬಿಲ್‍ ಮೇಲೆ ರಾಕೆಟ್‍ ದಾಳಿ: ಇರಾಕ್ -ಕುರ್ದಿಸ್ತಾನ ಪ್ರಧಾನಿ ತೀವ್ರ ಖಂಡನೆ

ಮಾಸ್ಕೋ, ಅಕ್ಟೋಬರ್ 1 : ಇತ್ತೀಚೆಗೆ ಎರ್ಬಿಲ್‍ ಮೇಲೆ ನಡೆದ ರಾಕೆಟ್‍ ದಾಳಿಯನ್ನು ತೀವ್ರವಾಗಿ ಖಂಡಿಸಿರುವ ಇರಾಕ್‍-ಕುರ್ದಿಸ್ತಾನ ಪ್ರಧಾನಿ ಮಸರೌರ್ ಬರ್ಜಾನಿ, ದಾಳಿಗೆ ಕಾರಣರಾದವರ ವಿರುದ್ಧ ಕ್ರಮದ ಅಗತ್ಯವನ್ನು ಪ್ರತಿಪಾದಿಸಿದ್ದಾರೆ. 

ಇರಾನ್ ಬೆಂಬಲಿತ ಇರಾಕ್ ಶಿಯಾ ಅರೆಸೈನಿಕ ಗುಂಪುಗಳು ಎರ್ಬಿಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಂತಾರಾಷ್ಟ್ರೀಯ ಸಮ್ಮಿಶ್ರ ಪಡೆಗಳ ಮೇಲೇ ಆರು ರಾಕೆಟ್‌ಗಳನ್ನು ಹಾರಿಸಿವೆ ಎಂದು ಇರಾಕ್- ಕುರ್ದಿಸ್ತಾನ ಭಯೋತ್ಪಾದನಾ ನಿಗ್ರಹ ಸೇವೆ ಬುಧವಾರ ಹೇಳಿದೆ. ಘಟನೆಯಲ್ಲಿ ತನ್ನ ಸೈನಿಕರಿಗೆ ಯಾವುದೇ ಗಾಯಗಳಾಗಿಲ್ಲ ಎಂದು ಸಮ್ಮಿಶ್ರ ಪಡೆಗಳು ತಿಳಿಸಿವೆ. 

‘ಎರ್ಬಿಲ್‌ನಲ್ಲಿ ಇಂದು ರಾತ್ರಿ ನಡೆದ ರಾಕೆಟ್ ದಾಳಿಯನ್ನು ಬಲವಾಗಿ ಖಂಡಿಸುತ್ತೇನೆ. ಕುರ್ದಿಸ್ತಾನದ ಸ್ಥಿರತೆಯನ್ನು ಹಾಳುಮಾಡುವ ಯಾವುದೇ ಪ್ರಯತ್ನವನ್ನು ಕುರ್ದಿಸ್ತಾನ ಪ್ರಾದೇಶಿಕ ಸರ್ಕಾರ ಸಹಿಸುವುದಿಲ್ಲ. ನಮ್ಮ ಪ್ರತಿಕ್ರಿಯೆ ಧೃಢವಾಗಿರುತ್ತದೆ. ದಾಳಿಕೋರರನ್ನು ಹೊಣೆಗಾರರನ್ನಾಗಿ ಮಾಡುವ ಮಹತ್ವದ ಕುರಿತು ಇರಾಕ್‍ ಪ್ರಧಾನಿ ಮುಸ್ತಫಾ ಅವರೊಂದಿಗೆ ಮಾತನಾಡಿದ್ದೇನೆ.’ ಎಂದು ಬರ್ಜಾನಿ ಬುಧವಾರ ತಡರಾತ್ರಿ ಟ್ವಿಟರ್ ನಲ್ಲಿ ಹೇಳಿದ್ದಾರೆ. 

ಇರಾಕ್‍ ಮಾಧ್ಯಮಗಳ ವರದಿಯಂತೆ, ಬುಧವಾರದ ರಾಕೆಟ್ ದಾಳಿಯನ್ನು ಸಮ್ಮಿಶ್ರ ಪಡೆಗಳ ನೆಲೆಯಲ್ಲಿ ನಿಯೋಜನೆಗೊಂಡಿರುವ ಪೇಟ್ರಿಯಾಟ್ ವೈಮಾನಿಕ ರಕ್ಷಣಾ ವ್ಯವಸ್ಥೆಗಳು ಹಿಮ್ಮೆಟ್ಟಿವೆ.

ಸುದ್ದಿ ಓದಿ