ಅಂತರರಾಷ್ಟ್ರೀಯ

ಇಡೀ ಜಗತ್ತಿನಲ್ಲಿ ಅತಿ ಹೆಚ್ಚು ಚೇತರಿಕೆ, ಅತಿ ಕಡಿಮೆ ಸಾವು : ರಾಂಕಿಂಗ್ ನಲ್ಲಿ ಭಾರತ ಅಗ್ರಸ್ಥಾನದಲ್ಲಿ

ಇಡೀ ಜಗತ್ತಿನಲ್ಲಿ ಅತಿ ಹೆಚ್ಚು ಚೇತರಿಕೆ, ಅತಿ ಕಡಿಮೆ ಸಾವು : ರಾಂಕಿಂಗ್ ನಲ್ಲಿ ಭಾರತ ಅಗ್ರಸ್ಥಾನದಲ್ಲಿ

ನವದೆಹಲಿ, ಅಕ್ಟೋಬರ್ 3: ಕೊರೋನಾ  ಸೋಂಕು ಚೇತರಿಕೆ ಮತ್ತು ಕಡಿಮೆ ಮರಣ ಪ್ರಮಾಣದ  ರಾಂಕಿಂಗ್  ನಲ್ಲಿ  ಭಾರತ ಅಗ್ರಸ್ಥಾನಕ್ಕೇರಿದೆ.  

ಅತ್ಯಂತ ಕಡಿಮೆ ಮರಣ ಪ್ರಮಾಣದ  ದೇಶಗಳ ಸಾಲಿನಲ್ಲಿ ಭಾರತ ಮೊದಲ ಸ್ಥಾನದಲ್ಲಿದ್ದು, ದೇಶದಲ್ಲಿ ಸಾವಿನ ಪ್ರಮಾಣ ಅತ್ಯಂತ ಕಡಿಮೆ ಇದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ಕೊಟ್ಟಿದೆ. 

ಒಟ್ಟಾರೆ ಜಾಗತಿಕ ಸೋಂಕಿನ ಪ್ರಮಾಣದಲ್ಲಿ ದೇಶದ ಕೊಡುಗೆ  ಶೇ 18.6ರಷ್ಟಿದ್ದು,  ಚೇತರಿಕೆ ದರ  ಶೇ 21ರಷ್ಟಿದೆ.  ಅಮೆರಿಕದಲ್ಲಿ  ಶೇಕಡ 21.7 ರಷ್ಟು ಸೋಂಕಿತರಿದ್ದು, ಚೇತರಿಕೆ ಪ್ರಮಾಣ 18.4ರಷ್ಟಿದೆ. ಶೇಕಡ 14ರಷ್ಟು ಸೋಂಕಿತರನ್ನು ಹೊಂದಿರುವ ಬ್ರೆಜಿಲ್ ನಲ್ಲಿ ಶೇಕಡ 13.3 ರಷ್ಟು ಮಂದಿ ಚೇತರಿಸಿಕೊಳ್ಳುತ್ತಿದ್ದಾರೆ.   

ಒಟ್ಟಾರೆ ಜಾಗತಿಕವಾಗಿ ಶೇಕಡ 2.97ರಷ್ಟು  ಮಂದಿ ಸಾವಿಗೀಡಾಗುತ್ತಿದ್ದು, ದೇಶದಲ್ಲಿ ಶೇಕಡ 1.56ರಷ್ಟು ಮರಣ ಪ್ರಮಾಣವಿದೆ. ಇಂಗ್ಲೆಂಡ್ ನಲ್ಲಿ  ಅತಿ ಹೆಚ್ಚು ಅಂದರೆ  ಶೇಕಡ 9.17ರಷ್ಟು  ಮಂದಿ ಸಾವಿಗೀಡಾಗುತ್ತಿದ್ದಾರೆ. ಫ್ರಾನ್ಸ್ ನಲ್ಲಿ  ಶೇಕಡ 5.7ರಷ್ಟು, ಸ್ಪೇನ್ ನಲ್ಲಿ 4.11ರಷ್ಟು, ಬ್ರೆಜಿಲ್ ನಲ್ಲಿ ಶೇಕಡ 2.99, ಅಮೆರಿಕಾದಲ್ಲಿ 2.87ರಷ್ಟು ಮಂದಿ ಮೃತಪಟ್ಟಿದ್ದಾರೆ. 

 ದೇಶದಲ್ಲಿ  ಕಳೆದ 24 ಗಂಟೆಗಳಲ್ಲಿ  ಹೊಸದಾಗಿ 79,476  ಕೋವಿಡ್ -19 ಪ್ರಕರಣಗಳು ದೃಢಪಟ್ಟಿವೆ. ಇದರಿಂದಾಗಿ  ದೇಶದಲ್ಲಿ ಒಟ್ಟು ಕೊರೋನಾ ಸೋಂಕಿತರ ಸಂಖ್ಯೆ 64,73,544  ಕ್ಕೆ ಏರಿಕೆಯಾಗಿದೆ. ಈವರೆಗೆ  54, 27,706 ಕೊರೋನಾ ಸೋಂಕಿತರು ಗುಣಮುಖರಾಗಿದ್ದು,  ಸುಮಾರು 9  ಲಕ್ಷ  44 ಸಾವಿರದ  996  ಸಕ್ರಿಯ ಪ್ರಕರಣಗಳಿವೆ. 

  

ಸುದ್ದಿ ಓದಿ