ಅಂತರರಾಷ್ಟ್ರೀಯ

ಅರ್ಜೆಂಟೀನಾದಲ್ಲಿ ಹೆಚ್ಚಿದ ಕರೋನ ಸೋಂಕು , ಸಾವಿನ ಪ್ರಕರಣಗಳು

ಅರ್ಜೆಂಟೀನಾದಲ್ಲಿ  ಹೆಚ್ಚಿದ ಕರೋನ ಸೋಂಕು , ಸಾವಿನ ಪ್ರಕರಣಗಳು

ಬ್ಯೂನಸ್ ಐರಿಸ್,  ಅಕ್ಟೋಬರ್ 3: ಕರೋನ ಸೋಂಕು ಪ್ರಕರಣ ಮತ್ತು ಸಾವಿನ  ಪ್ರಕರಣ ದೇಶದಲ್ಲಿ  ಹೆಚ್ಚಾಗುತ್ತಿದ್ದು ಜನರು ಹೆಚ್ಚಿನ ಆರೋಗ್ಯದ ಬಗ್ಗೆ ಹೆಚ್ಚನ ಕಾಳಜಿ ವಹಿಸಬೇಕು ಎಂದು  ಅರ್ಜೆಂಟೀನಾ ಸರ್ಕಾರ ಶನಿವಾರ ಎಚ್ಚರಿಸಿದೆ.

ಇದಕ್ಕಾಗಿ ಕೆಲವು ಪ್ರದೇಶಗಳಲ್ಲಿ ಪ್ರಕರಣ ಪತ್ತೆ ಕಾರ್ಯಾಚರಣೆಯನ್ನು ಬಲಪಡಿಸಲು ನಿರ್ಧರಿಸಿದೆ ಎಂದು ಆರೋಗ್ಯ ಸಚಿವಾಲಯದ ಕಾರ್ಯದರ್ಶಿ ಹೇಳಿದ್ದಾರೆ.  

ಪ್ರಕರಣಗಳ ಸಂಖ್ಯೆ ಮತ್ತು ಸಾವಿನ ಸಂಖ್ಯೆ  ನಿರಂತರವಾಗಿ  ಹೆಚ್ಚಳವಾಗುತ್ತಿರುವುದನ್ನು ಸರ್ಕಾರ ಗಮನಿಸುತ್ತಿದೆ ಈ ಕಾರಣಕ್ಕಾಗಿ, ನಾವು ಈ ಎರಡನೇ ಹಂತದಲ್ಲಿ ತ್ವರಿತವಾಗಿ  ಪ್ರಕರಣಗಳ ಪತ್ತೆಹಚ್ಚುವಿಕೆ ಕಾರ್ಯ  ಬಲಪಡಿಸಲು, ಮತ್ತು ಸಾಂಕ್ರಾಮಿಕ ರೋಗದ ತೀವ್ರತೆ  ಕಡಿಮೆ ಮಾಡಲು  ದೇಶದ ವಿವಿಧ ಭಾಗಗಳಿಗೆ ಆರೋಗ್ಯ ತಂಡಗಳನ್ನು ಕಳುಹಿಸಲಾಗುತ್ತಿದೆ ಎಂದು ಅವರು ಹೇಳಿದರು. 

ಸುದ್ದಿ ಓದಿ