ಆರೋಗ್ಯವಾಗಿದ್ದೇನೆ, ಆತಂಕ ಅನಗತ್ಯ – ಡೋನಾಲ್ಡ್ ಟ್ರಂಪ್
ವಾಷಿಂಗ್ಟನ್, ಅಕ್ಟೋಬರ್ 03 : ನಾನು ಆರೋಗ್ಯವಾಗಿದ್ದೇನೆ ಈ ಕುರಿತು ಯಾರೊಬ್ಬರು ಆತಂಕ ಪಡಬೇಕಿಲ್ಲ ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ವಾಲ್ಟರ್ ರೀಡ್ ಸೇನಾ ಆಸ್ಪತ್ರೆಯಲ್ಲಿ ನುರಿತ ವೈದ್ಯರ ತಂಡ ಚಿಕಿತ್ಸೆನೀಡುತ್ತಿದೆ ಎಂದು ಸಾಮಾಜಿಕ ಜಾಲತಾಣದ ಮೂಲಕ ಹೇಳಿಕೊಂಡಿದ್ದಾರೆ.
ಅಮೆರಿಕಾ ಅಧ್ಯಕ್ಷೀಯ ಚುನಾವಣೆ ಇದೇ ನವೆಂಬರ್ 3 ರಂದು ನಿಗದಿಯಾಗಿದ್ದು, ಕೆಲ ವಾರಗಳು ಬಾಕಿ ಇರುವಾಗ ಟ್ರಂಪ್ ಅವರು ಕೊರೊನಾ ಸೋಂಕಿಗೆ ಒಳಗಾಗಿರುವುದು ಆತಂಕದ ವಾತವರಣ ನಿರ್ಮಾಣವಾಗಿದೆ.
ಈ ನಡುವೆ ಅಧ್ಯಕ್ಷ ಟ್ರಂಪ್ ಬೇಗ ಗುಣಮುಖರಾಗಲಿ ಎಂದು ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ವಿಶ್ವ ನಾಯಕರು ಶುಭ ಹಾರೈಸಿದ್ದಾರೆ.