ಹುಕ್ಕೇರಿ

ಅಕ್ರಮ ಅನ್ನಭಾಗ್ಯ ಅಕ್ಕಿ ವಶಪಡಿಸಿಕೊಂಡ ಹುಕ್ಕೇರಿ ಪೊಲೀಸರು

ಅಕ್ರಮ ಅನ್ನಭಾಗ್ಯ ಅಕ್ಕಿ ವಶಪಡಿಸಿಕೊಂಡ ಹುಕ್ಕೇರಿ ಪೊಲೀಸರು

ಹುಕ್ಕೇರಿ 03: ತಾಲೂಕಿನ ಬೆನಿವಾಡ  ಗ್ರಾಮದಲ್ಲಿ ಪಿಕೆಪಿಎಸ್ ಸೊಸೈಟಿ ಹತ್ತಿರದಿಂದ ಅಕ್ರಮವಾಗಿ ಅಕ್ಕಿ ಸಾಗಾಟ ಮಾಡುತ್ತಿದ್ದಾರೆ ಅಂತ ಸಾರ್ವಜನಿಕರಿಂದ ಒಬ್ಬ ವ್ಯಕ್ತಿ ದೂರವಾಣಿ ಮೂಲಕ ಕರೆ ಮಾಡಿದ ತಕ್ಷಣ 112  ಪೊಲೀಸರು ತಕ್ಷಣ ಸ್ಥಳಕ್ಕೆ ಹೋಗಿ ಪರೀಶೀಲನೆ ಮಾಡಿದಾಗ ಗೂಡ್ಸ್‌ ವಾಹನ ನಂಬರ್ ಕೆ ಎ 25 ಬಿ 1506 ವಾಹನದಲ್ಲಿ ಅಕ್ರಮವಾಗಿ ಅಕ್ಕಿಚೀಲ ಸುಮಾರು  46 ವಿವಿಧ ಬಣ್ಣದ ಬಾಯಿ ಕಟ್ಟಿದ ಚೀಲಗಳು ತುಂಬಿದ್ದು ಕಂಡು ಬಂದಿತು. 

ತಕ್ಷಣ ಬೆನಿವಾಡ್ ದಿಂದ ಹುಕ್ಕೇರಿ ಪೊಲೀಸ್ ಠಾಣೆಗೆ ಕರೆತಂದು ವಾಹನ ಚಾಲಕ ಆರೋಪಿತನಾದ ನಿಂಗರಾಜ್ ಮಲ್ಲಪ್ಪ ಮುಗಳಿ ವಯಸ್ಸು 24 ಸಾಕಿನ್ ಬೆನಿವಾಡ್ ಹುಕ್ಕೇರಿ ಆಹಾರ ನೀರೀಕ್ಷಕರಾದ ಪ್ರವೀಣ್ ಕುಮಾರ್ ಸಾಗರ್ ಟೆಂಪೋ ದಲ್ಲಿನ 46 ಚೀಲಗಳನ್ನು ಪಂಚರ ಸಮ್ಮುಖದಲ್ಲಿ ಕೆಳಗಡೆ ಇಳಿಸಿ ತೂಕ ಮಾಡಿದಾಗ 1780 ಕೆಜಿ ಇರುತ್ತದೆ ಸುಮಾರು 35600=00 ರೂಪಾಯಿ ಅಂದಾಜಿಸಿ ಅಕ್ಕಿಯನ್ನು ವಶಪಡಿಸಿಕೊಳ್ಳಲಾಗಿದೆ. 

ಎಲ್ಲ ಚೀಲಗಳಿಂದ ಸ್ವಲ್ಪ ಸ್ವಲ್ಪ ಅಕ್ಕಿಯನ್ನು ಸ್ಯಾಂಪಲ್ ತೆಗೆದುಕೊಳ್ಳಲಾದ ಇಪ್ಪತ್ತು ಕೆಜಿ ತೆಗಿಸಿ ಅವುಗಳನ್ನು ಆಹಾರ ನೀರೀಕ್ಷಕರು ತನ್ನ ತಾಬೆಗೆ ತೆಗೆದುಕೊಂಡು ಇರುತ್ತದೆ. ಆರೋಪಿತನಾದ ಟೆಂಪೋ ಚಾಲಕ ನಿಂಗರಾಜ್ ಮಲ್ಲಪ್ಪ ಮುಗುಳಿ ವಾಹನ ಚಾಲಕನನ್ನು ಅಕ್ಕಿ ಎಲ್ಲಿಂದ ತರುವಿರಿ ಅಂತ ಕೇಳಿದಾಗ ಅವನು ಹತ್ತಿರದ ಊರುಗಳಲ್ಲಿ ಸಂತೆಗಳಲ್ಲಿ ಜನರಿಂದ ತೆಗೆದುಕೊಂಡು ಸಂಗ್ರಹಿಸಿ ಟೆಂಪೋ ಮುಖಾಂತರ ನೆರೆ ರಾಜ್ಯದ ಕೊಲ್ಲಾಪುರಕ್ಕೆ ಮಾರಾಟ ಮಾಡಲು ಹೂಗೊತ್ತಿದ್ದನೆಂದು ಖುದ್ದಾಗಿ ಹೇಳಿದನು. ಆರೋಪಿ ತನ್ನ ತಪ್ಪು ಒಪ್ಪಿಕೊಂಡಿರುತ್ತಾನೆ. ಹುಕ್ಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 


ಸುದ್ದಿ ಓದಿ