ಗುರ್ಲಾಪೂರದ ಪಿ ಎಮ್ ಶ್ರೀ ಶಾಸಕರ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಪ್ರಾರಂಭೋತ್ಸವ

ಗುರ್ಲಾಪೂರದ ಪಿ ಎಮ್ ಶ್ರೀ ಶಾಸಕರ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಪ್ರಾರಂಭೋತ್ಸವ   Inauguration ceremony of PM Shri MLA Government Higher Primary School, Gurlapur

ಲೋಕದರ್ಶನ ವರದಿ 

ಗುರ್ಲಾಪೂರ 03: ಸ್ಥಳೀಯ  ಪಿ ಎಮ್ ಶ್ರೀ ಶಾಸಕರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಸನ್ 2026 .2027ನೇ ಸಾಲಿನ ಶಾಲಾ ಪ್ರಾರಂಭೋತ್ಸವ ಹಾಗೂ ಪಾಲಕ ಪೋಷಕರ ಮಹಾಸಭೆ  ಸೋಮವಾರ ದಿ. 01ರಂದು. ಅತ್ಯಂತ ಸಡಗರದಿಂದ ಆಚರಿಸಲಾಯಿತು.  

  ಸಾನಿಧ್ಯವನ್ನು ಶಿವಾನಂದ ದುಂಡಯ್ಯ ಹಿರೇಮಠ  ವಹಿಸಿದ್ದರು. ಅಧ್ಯಕ್ಷ ಸ್ಥಾನವನ್ನು ಎಲ್ ಪಿ ನೇಮಗೌಡರ ವಹಿಸಿದ್ದರು. ಅತಿಥಿಗಳಾಗಿ ಎಸ್ ಜಿ ಹಂಚಿನಾಳ ವಹಿಸಿ ಮಕ್ಕಳಿಗೆ ನೈತಿಕ ಮೌಲ್ಯ ಕ್ರೀಡೆಗಳಿಗೆ ಹೆಚ್ಚು ಒತ್ತು ನೀಡಿ ಶಾಲಾ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಲು ಹೇಳಿದರು.   ಕಾರ್ಯಕ್ರಮದಲ್ಲಿ ಆನಂದ ಟಪಾಲ ಸಿದ್ದು ಗಡ್ಡೇಕಾರ, ವಾಸು ಹಳಬರ, ಸಿದ್ದಗೊಂಡ ಕುಳಲಿ, ಸಂಜೀವ ಗಾಡಿವಡ್ಡರ, ರೇಖಾ, , ಮಾಲಾಶ್ರೀ, ಸಕ್ಕೂ ಹಾಜರಿದ್ದರು.  

ಕಾರ್ಯಕ್ರಮದಲ್ಲಿ ಸಮಸ್ತ ಹಳೆಯ ವಿದ್ಯಾರ್ಥಿಗಳು ಹಾಜರಿದ್ದರು. ಪೂರ್ವ ಪ್ರಾಥಮಿಕ ಶಾಲಾ ಮಕ್ಕಳಿಗೆ ಗುಲಾಬಿ ಹೂ ನೀಡುವ ಮೂಲಕ ಸ್ವಾಗತ ಮಾಡಿಕೊಂಡರು. ಉಚಿತ ಪಠ್ಯ ಪುಸ್ತಕ ಸಮವಸ್ತ್ರ ಹಂಚಲಾಯಿತು. ಸುಮಾರು 20 ಮಕ್ಕಳ ದಾಖಲಾತಿ ಮಾಡಿಕೊಳ್ಳಲಾಯಿತು.  

ಕಾರ್ಯಕ್ರಮದಲ್ಲಿ 50 ಪಾಲಕ ಪೋಷಕರು ಹಾಜರಿದ್ದರು. ಮಕ್ಕಳ ಮನಮುಟ್ಟುವಂತೆ ಪಾಲಕರಿಗೆ ಸರಕಾರದ ಮಹಾತ್ವಾಕಾಂಕ್ಷಿ ಯೋಜನೆ ದ್ವಿಭಾಷಾ ಶಿಕ್ಷಣದ ಬಗ್ಗೆ ಶ್ರೀ ಬಿ ವಾಯ ಮೋಮಿನ್ ತಿಳಿ ಹೇಳಿದರು.  

ಶಿಕ್ಷಕರಾದ ಲಕ್ಷ್ಮಯ್ಯಾ ಸಾಲಿಮಠ ಸುಖದೇವ ದರೂರ ಅನ್ನಪೂರ್ಣ ಪಡಗಾನೂರ ಕವಿತಾ ಕಟಗಿ ಜ್ಯೋತಿ ಕಾಳಪ್ಪಗೋಳ, ಗಂಗವ್ವ ಕಂಬಾರ, ವಿದ್ಯಾಶ್ರೀ ನೇಮ ಗೌಡರ, ಶೋಭಾರಾಣಿ ಪಾಲಭಾವಿ, ಪೂಜಾ, ಮಹಾರಾಜ ಪ್ಪಗೋಳ ಹಾಜರಿದ್ದು. ಮುಖ್ಯೋಪಾಧ್ಯಾಯರಾದ ಬಸವರಾಜ ಸಸಾಲಟ್ಟಿಯವರು ಸರ್ವರನ್ನು ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.