ಸನ್ಮಾನಗಳಿಂದ ಮನುಷ್ಯನ ಜವಾಬ್ದಾರಿ ಹೆಚ್ಚಿಸುತ್ತದೆ : ಹನುಮೇಶ
Honors increase a person's responsibility: Hanuman
ಸನ್ಮಾನಗಳಿಂದ ಮನುಷ್ಯನ ಜವಾಬ್ದಾರಿ ಹೆಚ್ಚಿಸುತ್ತದೆ : ಹನುಮೇಶ
ಕೊಪ್ಪಳ 11: ಸಾರ್ವಜನಿಕ ಕ್ಷೇತ್ರದಲ್ಲಿ ಜನರಿಂದ ಮನುಷ್ಯನಿಗೆ ಸಿಗುವ ಸನ್ಮಾನಗಳು ಆ ವ್ಯಕ್ತಿಯ ಜವಾಬ್ದಾರಿಗಳನ್ನು ಹೆಚ್ಚಿಸುತ್ತದೆ ಎಂದು ಯುವ ಉದ್ಯಮಿ ಸಮಾಜ ಸೇವಕ ಗಿಣಿಗೇರಿಯ ಯುವ ನಾಯಕ ಹನುಮೇಶ್ ಬಾರಕೇರ ರವರು ಹೇಳಿದರು, ಅವರು ನಗರದ ಮಿಲ್ಲತ್ ಪಬ್ಲಿಕ್ ಶಾಲೆ ಆವರಣದಲ್ಲಿ ಶಾಲಾ ಮಕ್ಕಳಿಂದ ಏರಿ್ಡಸಿದ ಸಂತೆಮೇಳ ಹಾಗೂ ವಿಜ್ಞಾನ ವಸ್ತು ಪ್ರದರ್ಶನ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ನಂತರ ವಸ್ತು ಪ್ರದರ್ಶನ ಹಾಗೂ ಸಂತೆ ಮೇಳ ಕಾರ್ಯವನ್ನು ವೀಕ್ಷಿಸಿದ ಬಳಿಕ ಏರಿ್ಡಸಿದ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದರು,ಮುಂದುವರೆದು ಮಾತನಾಡಿ ನನಗೆ ಮಾಡಿರುವ ಸನ್ಮಾನ ದಿಂದ ಸಾರ್ವಜನಿಕ ಕ್ಷೇತ್ರದಲ್ಲಿ ಇನ್ನಷ್ಟು ಜವಾಬ್ದಾರಿ ಯನ್ನು ಪ್ರಾಮಾಣಿಕವಾಗಿ ನಿಭಾಯಿಸಲು ಪ್ರೇರಣೆ ನೀಡಿದಂತಾಗಿದೆ ಶೈಕ್ಷಣಿಕ ರಂಗದಲ್ಲಿ ಸೇವೆ ಸಲ್ಲಿಸುವ ಪ್ರತಿಯೊಬ್ಬರಿಗೂ ಸಹಕಾರ ನೀಡುವುದು ನನ್ನ ಜವಾಬ್ದಾರಿಯಾಗಿದೆ ಎಂದರು,ಮುಂದುವರೆದು ಮಾತನಾಡಿ ಮಕ್ಕಳಲ್ಲಿ ವ್ಯವಹಾರ ಜ್ಞಾನ ಬೆಳೆಯಲು ಈ ನೂತನ ಮಾದರಿಯ ಸಂತೆ ಮೇಳ ಕಾರ್ಯಕ್ರಮ ಅತ್ಯಂತ ಮಹತ್ವ ಪಡೆದುಕೊಂಡಿದೆ ಎಂದು ಗಿಣಿಗೇರಿಯ ಉದ್ಯಮಿ ಯುವ ನಾಯಕ ಸಮಾಜ ಸೇವಕ ಹನುಮೇಶ್ ಬಾರಕೇರ್ ಹೇಳಿದರು, ಈ ಸಂದರ್ಭದಲ್ಲಿ ಕೊಪ್ಪಳ ನಗರಸಭೆಯ ಅಧ್ಯಕ್ಷ ಅಮ್ಜದ್ ಪಟೇಲ್ ರವರು ಶಾಲಾ ಮಕ್ಕಳಿಂದ ಏರಿ್ಡಸಿದ ಜ್ಞಾನ ವಸ್ತು ಪ್ರದರ್ಶನ ಕಾರ್ಯಕ್ರಮಕೆ ಚಾಲನೆ ನೀಡಿ ಮಾತನಾಡಿದರು,
ಸಮಾರಂಭದ ಅಧ್ಯಕ್ಷತೆಯನ್ನು ಮಿಲತ್ ಶಿಕ್ಷಣ ಮತ್ತು ಕಲ್ಯಾಣ ಸಂಸ್ಥೆಯ ಅಧ್ಯಕ್ಷ ಸೈಯದ್ ಗೌಸ್ ಪಾಷಾ ಖಾಜಿ ವಹಿಸಿದ್ದರು, ಸಮಾರಂಭದಲ್ಲಿ ಸಮಾಜ ಸೇವಕ ಲ್ಯಾಂಡ್ ಡೆವಲೋಪರ್ ಶಫೀಕ್ ಅಹಮದ್ ದಾಗ ದಾರ್, ಹಿರಿಯ ಪತ್ರಕರ್ತ ಎಂ ಸಾಧಿಕ್ ಅಲಿ, ಅಂಜುಮನ್ ಕಮಿಟಿ ಅಧ್ಯಕ್ಷ ಎಂ ಡಿ ಆಸಿಫ್ ಕರ್ಕಿಹಳ್ಳಿ, ಪಾಲಕರ ಪ್ರತಿನಿಧಿ ಫತಹೇ ಸಾಬ್ ಚುಟ್ಟದ್ ಯುವ ನಾಯಕ ಸಿರಾಜ್ ಲಾಠಿ ಮತ್ತು ಶಾಲೆಯ ಸಂಚಾಲಕರುಗಳಾದ ಅಬ್ದುಲ್ ಅಜೀಜ್ ಮಾನ್ವಿ ಕರ್ ಹಾಗೂ ಸೈಯದ್ ಇಮಾಮ ಹುಸೇನ್ ಸಿಂದೋಗಿ, ಮುಖ್ಯ ಶಿಕ್ಷಕ ಮೊಹಮ್ಮದ್ ಅಜೀಜ್ ರವಡಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ 