ಘಟ್ಟ ಹಾಗೂ ಕರಾವಳಿಯಲ್ಲಿ ಭಾರೀ ಗಾಳಿ ಮಳೆ : ಫಲಕ್ಕೆ ಬಂದಿದ್ದ ಮಾವಿನ ಬೆಳೆಗೆ ಹಾನಿ

ಘಟ್ಟ ಹಾಗೂ ಕರಾವಳಿಯಲ್ಲಿ ಭಾರೀ ಗಾಳಿ ಮಳೆ :  ಫಲಕ್ಕೆ ಬಂದಿದ್ದ ಮಾವಿನ ಬೆಳೆಗೆ ಹಾನಿ Heavy winds and rain in the Ghats and the coast: Damage to the mango crop that had just ripened

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಘಟ್ಟ ಪ್ರದೇಶ ಹಾಗೂ ಕರಾವಳಿಯ ಕಾರವಾರದಲ್ಲಿ ಭಾರೀ ಗಾಳಿ ಸಹಿತ ಮಳೆ ಸುರಿಯಿತು . ಹತ್ತು ನಿಮಿಷ ಬಿದ್ದ ಮಳೆಗೆ ಇಳೆ ತಂಪಾಯಿತು. ಆದರೆ ವಿದ್ಯುತ್ ಸಂಪರ್ಕ ವ್ಯತ್ಯಯ ವಾಯಿತು. ಫಲಕ್ಕೆ ಬಂದಿದ್ದ ಮಾವಿನ ಕಾಯಿಗಳು ಗಾಳಿ ರಭಸಕ್ಕೆ ಬಿದ್ದು, ನಷ್ಟ ಉಂಟಾಯಿತು. ನಗರದಲ್ಲಿ ಹಲವರು ಮನೆಯ ಹತ್ತಿರ ಬೆಳಸಿದ್ದ ಮಾವಿನ ಕಾಯಿಗಳನ್ನು ಕೊಯ್ಯುವ ಮುನ್ನವೇ ಅಪಾರ ಪ್ರಮಾಣದ ಮಾವಿನ ಬೆಳೆ ನೆಲಕ್ಕೆ ಉರುಳಿತು. ಅಲ್ಲಲ್ಲಿ ಮರದ ಟೊಂಗೆಗಳು ಬಿದಿದ್ದು, ನಗರದ ಎರಡು ಕಡೆ ವಿದ್ಯುತ್ ಕಂಬ ವಾಲಿದ ಘಟನೆ ನಡೆದಿದೆ. ಯಾವುದೇ ಹಾನಿ ಆಗಿಲ್ಲ ಎಂದು ಹೆಸ್ಕಾಂ ತಿಳಿಸಿದೆ. ವಿಪರೀತ ಎನಿಸಿದ್ದ ಬಿಸಿಲು : ಮಂಗಳವಾರ ಬಿಸಿಲು ಅತೀಯಾಗಿ ಹೆಚ್ಚಿತ್ತು. ಜಿಲ್ಲೆಯ ಜನ ಎಂದೂ ಕಾಣದ ಬಿಸಲು ಇಂದು ಅನುಭವಕ್ಕೆ ಬಂತು. ಹಗಲು ಉಷ್ಣಾಂಶ 38 ದಾಟಿದ ಪರಿಣಾಮ ಜನರು ಬಿಸಿಲಿಗೆ ಹೈರಾಣಾದರು. ಸಂಜೆ ಆರು ಗಂಟೆಗೆ ಮಳೆ ಸುರಿದ ಕಾರಣ ಜನ ನೆಮ್ಮದಿಯನ್ನು ಕಂಡರು. ಆದರೆ ಭಾರೀ ಗಾಳಿ ಪರಿಣಾಮ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಯಿತು. ರಾತ್ರಿವಎಂಟು ಗಂಟೆಯಾದರೂ ವಿದ್ಯುತ್ ಪೂರೈಕೆ ಬಂದಿರಲಿಲ್ಲ. ....