ಶ್ರೀನಿವಾಸ ಮಾನೆಗೆ ಸಚಿವ ಸ್ಥಾನ ನೀಡಲು ಹಾವೇರಿ ಜಿಲ್ಲೆಯ ಒತ್ತಾಯ
Haveri district demands to give Srinivas Mane a ministerial position
ಲೋಕದರ್ಶನ ವರದಿ
ಹಾವೇರಿ 01: ಜಿಲ್ಲೆಯ ಹಾನಗಲ್ಲ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀನಿವಾಸ ಮಾನೆ ಅವರಿಗೆ ಡಿ.ಕೆ.ಶಿವಕುಮಾರ ನೇತೃತ್ವದ ಸರ್ಕಾರದಲ್ಲಿ ಸಚಿವಸ್ಥಾನ ನೀಡುವಂತೆ ಕರ್ನಾಟಕ ಕ್ಷತ್ರಿಯ ಮರಾಠ ಸಮಾಜ(ರಿ)ಹಾವೇರಿ ಜಿಲ್ಲಾ ಘಟಕದ ವತಿಯಿಂದ ಕಾಂಗ್ರೆಸ್ ಪಕ್ಷದ ಹೈಕಮಾಂಡಗೆ ಒತ್ತಾಯಿಸಲಾಗಿದೆ. ಕ್ರೀಯಾಶೀಲರಾಗಿ ನಿರಂತರ ಅಭಿವೃದ್ಧಿಪರ ಕೆಲಸಗಾರರಾದ ಶ್ರೀನಿವಾಸ ಮಾನೆ ಅವರು ಎರಡು ಬಾರಿ ಎಂ.ಎಲ್.ಸಿ ಮತ್ತು 2 ಬಾರಿ ಹಾನಗಲ್ಲ ತಾಲೂಕ ಶಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.ಸದಾ ಜನ ಸೇವೆಯಲ್ಲಿಯೇ ತೊಡಗಿರುವ ಇವರು ಕರೋನಾ ಸಮಯದಲ್ಲಿ ಅಂಬುಲೈನ್ಸ ಸೇವಾ ಹಾಗೂ ಆಹಾರದ ಕಿಟ್ಟುಗಳನ್ನು ಪ್ರೀಯಾಗಿ ವಿತರಿಸುವ ಮೂಲಕ ರಾಜ್ಯದ ಗಮನ ಸೆಳೆದಿದ್ದು, ಜನಪ್ರಿಯ ಶಾಸಕರಾಗಿ ಸೇವೆ ಸಲ್ಲಿಸುತ್ತಾ ಬರುತ್ತಿದ್ದಾರೆ.
ಬಿಜೆಪಿ ಸರ್ಕಾರ ಇದ್ದಾಗ ಬೈ ಇಲೆಕ್ಷನದಲ್ಲಿ ಮಾನೆ ಅವರನ್ನು ಸೋಲಿಸಲು ಬೊಮ್ಮಾಯಿಯವರು ವಿಧಾನಸೌಧವನ್ನೆ ತಂದು ಹಾನಗಲ್ಲನಲ್ಲಿ ನಿಲ್ಲಿಸಿದರೂ ಮಾನೆರವರ ಜನಪ್ರಿಯ ಕಾರ್ಯಕ್ರಮಗಳಿಂದ ಬಹುಮತದಿಂದ ಆರಿಸಿಬಂದಿರುತ್ತಾರೆ.ಅಲ್ಲದೇ ರಾಜ್ಯದಲ್ಲಿ ಕಾಂಗ್ರೇಸ್ ಪಕ್ಷ ಅಧಿಕಾರಕ್ಕೆ ಬರಲು ಎಲ್ಲ ಜಿಲ್ಲೆಗಳಲ್ಲಿ ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಹಗಲಿರುಳು ಶ್ರಮವಹಿಸಿರುತ್ತಾರೆ.ಶ್ರೀನಿವಾಸ್ ಮನೆ ಅವರ ಸೇವೆಯನ್ನು ಅನುಭವವನ್ನು ಹಾಗೂ ಕ್ರಿಯಾಶೀಲತೆಯನ್ನು ಪರಿಗಣಿಸಿ ಕಾಂಗ್ರೆಸ್ ಪಕ್ಷದ ಹೈಕಮಾಂಡ ನಾಯಕರು ಸಚಿವಸ್ಥಾನ ನೀಡಬೇಕೆಂದು ಮನವಿಯ ಮೂಲಕ ಒತ್ತಾಯಿಸಿದ್ದಾರೆ.
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ 