ಪರಿಸರ ಸ್ನೇಹಿ ವಸ್ತುಗಳ ಬಳಕೆಯಿಂದ ಉತ್ತಮ ಆರೋಗ್ಯ ಪಡೆಯಲು ಸಾಧ್ಯ : ಡಾ. ಸುಜಾತಾ ಆನಿಶೆಟ್ಟರ

ಪರಿಸರ ಸ್ನೇಹಿ ವಸ್ತುಗಳ ಬಳಕೆಯಿಂದ ಉತ್ತಮ ಆರೋಗ್ಯ ಪಡೆಯಲು ಸಾಧ್ಯ : ಡಾ. ಸುಜಾತಾ ಆನಿಶೆಟ್ಟರ Good health can be achieved by using eco-friendly materials: Dr. Sujatha Anishettara

ಲೋಕದರ್ಶನ ವರದಿ

ಧಾರವಾಡ 05 : ಜೂನ 5  ರಂದು ಫ್ಯಾಮಿಲಿ ಪ್ಲ್ಯಾನಿಂಗ್ ಅಸೋಶಿಯೇಶನ್ ಆಫ್ ಇಂಡಿಯಾ, ಧಾರವಾಡ ಶಾಖೆ, ರೋಟರಿ ಕ್ಲಬ್ ಆಫ್ ಸೇವೆನ್ ಹಿಲ್ಸ್‌, ಧಾರವಾಡ ಮತ್ತು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ, ಧಾರವಾಡ ಇವರ ಸಹಯೋಗದಲ್ಲಿ ವಿಶ್ವ ಪರಿಸರ ದಿನ ಮತ್ತು ಮುಟ್ಟಿನ ನೈರ್ಮಲ್ಯ ದಿನದ ಅಂಗವಾಗಿ ಅರಿವು ಮತ್ತು ಮುಟ್ಟಿನ ಕಪ್ ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತು.  

ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಡಾ. ಸುಜಾತಾ ಎಸ್‌. ಆನಿಶೆಟ್ಟರ ಮಾತನಾಡಿ ಇಂದು ಪರಿಸರ ರಕ್ಷಣೆಯಲ್ಲಿ ಪ್ರತಿಯೋಬ್ಬರ ಪಾತ್ರ ಬಹಳ ಮಹತ್ವದ್ದು, ನಮಗೆ ಪರಿಸರ ರಕ್ಷಣೆಯ ಅರಿವು ಇದೆ ಆದರೆ ಆ ಅರಿವು ಪ್ರತ್ಯಕ್ಷ ಆಚರಣೆಯಲ್ಲಿ ಬರುತ್ತಿಲ್ಲ, ಮದುವೆ, ಇತರೆ ಸಮಾರಂಭಗಳಲ್ಲಿ ಪ್ಲಾಸ್ಷಿಕ್ ಉಪಯೋಗ ನಿಲ್ಲಿಸುವದು, ಅನಾವಶ್ಯಕ ವಾಹನಗಳಿಂದಾಗುವ ಪರಿಸರ ಹಾನಿ ತಪ್ಪಿಸುವದು,

ಪರಿಸರ ಸ್ನೇಹಿ ಮುಟ್ಟಿನ ನಿರ್ವಹಣೆಯ ಬಗೆಗೆ ಹೆಚ್ಚಿನ ಗಮನ ಕೊಡುವದು ಅಂದರೆ ಕ್ಲಥ್ ಪ್ಯಾಡ್, ಮುಟ್ಟಿನ ಕಪ್ ಉಪಯೋಗಿಸುವದರ ಮೂಲಕ ಪರಿಸರ ರಕ್ಷಣೆಯ ಜೋತೆಜೋತೆಗೆ ಮಹಿಳೆಯರ ಆರೋಗ್ಯ ಕಾಪಾಡಿಕೋಳ್ಳಲು ಸಾಧ್ಯ. ಈ ದೇಶೆಯಲ್ಲಿ ಎಫ್‌.ಪಿ.ಎ.ಐ ಕಳೆದ ಹಲವಾರು ವರ್ಷಗಳಿಂದ ಮಹಿಳೆಯರಲ್ಲಿ ಜಾಗೃತಿ ಮೂಡಿಸುವದರೊಂದಿಗೆ 500 ಕ್ಕೂ ಹೆಚ್ಚು ಮಹಿಳೆಯರಿಗೆ ಮುಟ್ಟಿ ಕಪ್ ನೀಡಲಾಗಿದೆ. ಇದನ್ನು ಉಪಯೋಗಿಸುವ ಮಹಿಳೆಯರು ಸಂತೃಪ್ತರಾಗಿ ಬೇರೆ ಬೇರೆ ಮಹಿಳೆಯರಿಗೆ ತಗೆದುಕೊಳ್ಳಲು ಪ್ರೋತ್ಸಾಹಿಸಿದ್ದಾರೆ. ಈ ರೀತಿಯಲ್ಲಿ ಪರಿಸರ ಸ್ನೇಹಿ ವಸ್ತುಗಳ ಬಳಕೆಯಿಂದ ಉತ್ತಮ ಆರೋಗ್ಯ ಪಡೆಯಲು ಸಾಧ್ಯ ಎಂದು ಅಭಿಪ್ರಾಯ ಪಟ್ಟರು.  

ರೋಟರಿ ಕ್ಲಬ್ ಆಫ್ ಸೇವೆನ್ ಹಿಲ್ಸ್‌ ಕಾರ್ಯದರ್ಶಿ ಡಾ. ದೃಷ್ಠಿ ದೇಶಪಾಂಡ್ಯೆ ಮಾತನಾಡಿ ಮುಟ್ಟಿನ ಕಪ್ ಇದು ಉಪಯೋಗಿಸುವದು ತುಂಬಾ ಸುಲಭ, ಸರಳ ಮತ್ತು ಪರಿಣಾಮಕಾರಿಯಾಗಿದೆ. ಪರಿಸರ ರಕ್ಷಣೆಗಾಗಿ ಎಲ್ಲರೂ ಉಪಯೋಗಿಸುವದು ಅವಶ್ಯಕ ಎಂದು ಇಂಗಿತ ವ್ಯಕ್ತಪಡಿಸಿದರು.  

ಮುಖ್ಯಅಥಿತಿಗಳಾಗಿ ಆಗಮಿಸಿ ಎಫ್‌.ಪಿ.ಎ.ಐ ಸ್ವಯಂಸೇವಕಿ ಡಾ. ರೂಪಾ ಜೋಶಿ ಮಾತನಾಡಿ ನಮ್ಮ ನಮ್ಮ ಮನೆಗಳಲ್ಲಿ ಹುಟ್ಟು ಹಬ್ಬ ಆಚರಣೆಯ ಸಂದರ್ಭದಲ್ಲಿ ಒಂದೊಂದು ಸಸಿ ನೇಡುವ ಮೂಲಕ ಪರಿಸರ ರಕ್ಷಣೆ ಮಾಡೋಣ, ನಾವೂ ಪರಿಸರ ರಕ್ಷಿಸಿದರೇ ಪರಿಸರ ನಮ್ಮನ್ನು ರಕ್ಷಿಸುತ್ತದೆ ಎಂಬ ಹಿರಿಯರ ಆಶಯದಂತೆ ನಾವೆಲ್ಲರೂ ನಡೆದುಕೊಳ್ಳೊಣ ಎಂದು ಅಭಿಪ್ರಾಯ ಪಟ್ಟರು.  

ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಪರಿಸರ ಇಂಜೀಯರ್ ಸರೋಜಾ ಮಾತನಾಡಿ ಪರಿಸರ ರಕ್ಷಣೆಯಲ್ಲಿ ಪೌರಕಾರ್ಮಿಕರ ಪಾತ್ರ ಬಹಳ ಮಹತ್ವದು, ಕಸ ವಿಲೇವಾರಿ ಕ್ರಮಗಳ ಕುರಿತು ನಿರಂತರ ಜಾಗೃತಿ ಮೂಡಿಸಲಾಗುತ್ತಿದೆ. ಇದರಲ್ಲಿ ಪ್ರತಿಯೊಬ್ಬರ ನಾಗರಿಕರ ಪಾತ್ರ ಕೂಡ ಬಹಳ ಮಹತ್ವದ್ದು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. 

ಎಫ್‌.ಪಿ.ಎ.ಐ ಹಿರಿಯ ಸ್ವಯಂಸೇವಕಿ, ಮಾಜಿ ಅಧ್ಯಕ್ಷೆ ಇಂದಿರಾ ಪ್ರಸಾದ ಮಾತನಾಡಿ ಅನೇಕ ಸಂಸ್ಥೆಗಳು ಒಟ್ಟುಗೂಡಿ ಕಾರ್ಯಕ್ರಮಗಳನ್ನು ಮಾಡಿದಾಗ ಕಾರ್ಯಕ್ರಮಗಳು ಹೆಚ್ಚು ಪರಿಣಾಮಕಾರಿಯಾಗುವದಲ್ಲದೇ ಹೆಚ್ಚು ಜನರಿಗೆ ಇದರಿಂದ ಲಾಭ ತಲುಪಲು ಸಾಧ್ಯವಾಗುತ್ತದೆ. ಇಂದು 100 ಕ್ಕೂ ಹೆಚ್ಚು ಮಹಿಳೆಯಗೆ ಉಚಿತ ಮುಟ್ಟಿನ ಕಪ್ ನೀಡುತ್ತಿರುವದು ಸಂತೋಷದ ಸಂಗತಿಯಾಗಿದೆ.  

ಈ ದೇಶೆಯಲ್ಲಿ ಎಫ್‌.ಪಿ.ಎ.ಐ. ಅಭೂತಪೂರ್ವ ಕಾರ್ಯಮಾಡುತ್ತಿದೆ ಎಂದು ಅಭಿಪ್ರಾಯಪಟ್ಟರು. ಈ ಕಾರ್ಯಕ್ರಮದಲ್ಲಿ ಮಾಧುರಿ ದಿಕ್ಷಿತ, ರೋಟರಿ ಕ್ಲಬ್ ಸೇವನ್ ಹಿಲ್ಸ್‌ ಅಧ್ಯಕ್ಷರು, ಪದಾಧಿಕಾರಿಗಳು, ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಸಮುದಾಯ ಸಂಘಟಕರು, ಎಫ್‌.ಪಿ.ಎ.ಐ ಆಶಾ ಕೋರಿಶೆಟ್ಟರ ಹಾಗೂ ಸಿಬ್ಬಂದಿ, ಪೌರಕಾರ್ಮಿಕರು, ಆಶಾ ಕಾರ್ಯಕರ್ತರು ಸೇರಿದಂತೆ 100 ಕ್ಕೂ ಹೆಚ್ಚು ಜನರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.  

ಮುಟ್ಟಿನ ಕಪ್ ಉಚಿತ ವಿತರಣೆಗಾಗಿ ರೋಟರಿ ಕ್ಲಬ್ ಆಫ್ ಸೇವೆನ್ ಹಿಲ್ಸ್‌, ಧಾರವಾಡ ಆರ್ಥಿಕ ನೇರವು ನೀಡಿತ್ತು.  ಬಸಮ್ಮಾ ದೇಸಾಯಿ ಸ್ಪಾಗತಿಸಿದರು, ಶಿಲ್ಪಾ ಅದರಗುಂಚಿ ವಂದಿಸಿದರು, ಎನ್‌.ಎಫ್‌.ಮಡಿವಾಳರ ನಿರೂಪಿಸಿದು.