ಜಿ+2 ಕಾಮಗಾರಿ ಸ್ಥಳಕ್ಕೆ ಜಿಲ್ಲಾಧಿಕಾರಿ ಎಸ್.ಎಸ್. ನಕುಲ
ಲೋಕದರ್ಶನ ವರದಿ
ಹಳಿಯಾಳ, 29: ಪಟ್ಟಣದಲ್ಲಿ ಪ್ರಪ್ರಥಮಬಾರಿಗೆ ಅನುಷ್ಠಾನಗೊಳಿಸಲಾಗುತ್ತಿರುವ ವಸತಿ ರಹಿತರಿಗೆ ಸೂರು ಕಲ್ಪಿಸಿಕೊಡುವ ಯೋಜನೆಯಾದ ಜಿ+2 ಕಾಮಗಾರಿ ಸ್ಥಳಕ್ಕೆ ಜಿಲ್ಲಾಧಿಕಾರಿ ಎಸ್.ಎಸ್. ನಕುಲ ಅವರು ಬುಧವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಹಳಿಯಾಳ ಪುರಸಭೆ ವ್ಯಾಪ್ತಿಯ ಗುಡ್ನಾಪುರ ಪ್ರದೇಶದಲ್ಲಿ ಈ ಮಹತ್ವಾಕಾಂಕ್ಷಿ ವಸತಿ ಸಮುಚ್ಛಯ ಕಾಮಗಾರಿ ಈಗಾಗಲೇ ಆರಂಭಗೊಂಡಿದ್ದು ಅಡಿಪಾಯದ ಕಾರ್ಯ ಪೂರ್ಣಗೊಂಡಿದೆ. ಮೊದಲ ಹಂತದಲ್ಲಿ 240 ಫಲಾನುಭವಿಗಳಿಗೆ ಮನೆ ನಿಮರ್ಿಸಿ ನೀಡಲಾಗುವುದು. ಈ ಹಿನ್ನೆಲೆಯಲ್ಲಿ ಸ್ಪಧರ್ಾತ್ಮಕವಾಗಿ ಕಡಿಮೆ ಬಡ್ಡಿದರದಲ್ಲಿ ಸಾಲ-ಸೌಲಭ್ಯ ನೀಡುವ ಕುರಿತು ರಾಷ್ಟ್ರೀಕೃತ ಬ್ಯಾಂಕ್ಗಳ ಶಾಖೆಗಳ ವ್ಯವಸ್ಥಾಪಕರ ಹಾಗೂ ಸಂಬಂಧಿಸಿದ ವಿಭಾಗದ ಸಿಬ್ಬಂದಿಗಳ ಸಭೆಯನ್ನು ಪುರಸಭೆ ಸಭಾಂಗಣದಲ್ಲಿ ನಡೆಸಲಾಯಿತು ಎಂದು ಜಿಲ್ಲಾಧಿಕಾರಿಗಳು ತಮಗೆ ಭೇಟಿಯಾದ ಮಾಧ್ಯಮಗಳಿಗೆ ವಿವರಿಸಿದರು.
ಜಿ+2 ಕಾಮಗಾರಿ ಸ್ಥಳಕ್ಕೆ ಭೇಟಿಯಾಗುವ ಮುಂಚೆ ಜಿಲ್ಲಾಧಿಕಾರಿ ಪುರಸಭೆಯ ಪ್ರಗತಿಯನ್ನು ಪರಿಶೀಲಿಸಿದರು. ಈ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ಹಳಿಯಾಳ ಪುರಸಭೆ ಕಾರ್ಯ ತೃಪ್ತಿದಾಯಕವಾಗಿದೆ ಎಂದು ತಿಳಿಸಿದರು.
ಹಳಿಯಾಳ ಪಟ್ಟಣದಲ್ಲಿನ ಕೆಲ ಸಂಗತಿಗಳ ಬಗ್ಗೆ ಪತ್ರಕರ್ತರ ಸಂಘದವರು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು. ಗುಡ್ನಾಪುರ ಪ್ರದೇಶದಲ್ಲಿ ಖಾಸಗಿಯವರು ನೂತನವಾಗಿ ಅಭಿವೃದ್ಧಿಪಡಿಸುತ್ತಿರುವ ವಸತಿ ಬಡಾವಣೆಯಲ್ಲಿನ ಮೂಲಭೂತ ಸೌಕರ್ಯಗಳ ಕಾಮಗಾರಿಗಳು ಸಮರ್ಪಕವಾಗಿ ನಡೆಯುತ್ತಿಲ್ಲ.
ಬಡಾವಣೆಗೆ ಸಂಪರ್ಕ ರಸ್ತೆಯ ಬಗ್ಗೆ ಇರುವ ವಿವಾದ ಮೊದಲಾದ ಸಂಗತಿಗಳ ಬಗ್ಗೆ ಗಮನಹರಿಸಿ ಸೂಕ್ತ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳುವದಾಗಿ ಹೇಳಿದರು. ಪಟ್ಟಣದ ಹೃದಯ ಭಾಗದಲ್ಲಿರುವ ಮೋತಿಹೊಂಡದ ಪಕ್ಕ ನಿಮರ್ಾಣಕಾರ್ಯ ಪೂರ್ಣಗೊಳ್ಳುವ ಹಂತದಲ್ಲಿರುವ ಖಾಸಗಿಯವರ ವಾಣಿಜ್ಯ ಸಂಕಿರಣ ಕಟ್ಟಡ ಕಾಮಗಾರಿಯಿಂದ ಮೋತಿಹೊಂಡದ ಪಾಳಿ ನಿರ್ವಹಣೆಗೆ ತೊಂದರೆಯಾಗುವ ಬಗ್ಗೆ ಸಹ ಗಮನ ಹರಿಸುವದಾಗಿ ಭರವಸೆ ನೀಡಿದರು.